ETV Bharat / bharat

ಡಿಕ್ಕಿ ಸಂಭವಿಸಿ ಹೊತ್ತಿ ಉರಿದ ಬಸ್​-ಟ್ರಕ್​.. ದುರಂತದಲ್ಲಿ ನಾಲ್ವರ ಸಜೀವ ದಹನ - ಅಪಘಾತ

ಟ್ರಕ್ - ಬಸ್​ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ವಾಹನಗಳು ಹೊತ್ತಿ ಉರಿದಿರುವ ಘಟನೆಯಲ್ಲಿ ನಾಲ್ವರು ಸಜೀವ ದಹನವಾಗಿದ್ದಾರೆ.

ನಾಲ್ವರ ಸಜೀವ ದಹನ
ನಾಲ್ವರ ಸಜೀವ ದಹನ
author img

By

Published : Sep 20, 2021, 10:10 AM IST

ಶ್ರೀಗಂಗಾನಗರ (ರಾಜಸ್ಥಾನ) : ಟ್ರಕ್​-ಬಸ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು ಹೊತ್ತಿ ಉರಿದಿವೆ. ಘಟನೆಯಲ್ಲಿ ನಾಲ್ವರು ಅಸುನೀಗಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅನೂಪ್​ಗಢ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಪೊಲೀಸರು, ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಸ್​ನಲ್ಲಿ ಎಷ್ಟು ಜನರಿದ್ದರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೃತರಲ್ಲಿ ಟ್ರಕ್ ಚಾಲಕ ಮತ್ತು ಮೂವರು ಬಸ್​ ಪ್ರಯಾಣಿಕರು ಸೇರಿದ್ದಾರೆ ಎಂದರು.

ವರದಿಗಳ ಪ್ರಕಾರ ಬಸ್, ಶ್ರೀ ಗಂಗಾನಗರ ಜಿಲ್ಲಾ ಕೇಂದ್ರದಿಂದ ಮೋಹನಗಢಕ್ಕೆ ಹೋಗುವಾಗ ಎದುರಿನಿಂದ ಬರುತ್ತಿದ್ದ ತೈಲ ಟ್ಯಾಂಕರ್ ಬಸ್​​ಗೆ ಡಿಕ್ಕಿ ಹೊಡೆದಿದೆ. ಕೆಲವು ನಿಮಿಷಗಳ ನಂತರ, ಸ್ಫೋಟ ಸಂಭವಿಸಿ ಎರಡೂ ಬಸ್​ಗಳು ಹೊತ್ತಿ ಉರಿದಿವೆ.

ಇದನ್ನೂ ಓದಿ: ತಲ್ಲಣಿಸಿದ ದಾವಣಗೆರೆ.. ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಮಾಹಿತಿ ಪಡೆದ ಉಪ ಪೊಲೀಸ್ ವರಿಷ್ಠಾಧಿಕಾರಿ ಜೈದೇವ್ ಸಿಹಾಗ್, ಮುನ್ಸಿಪಲ್ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಬಿಷ್ಣೋಯ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಬೆಂಕಿ ನಂದಿಸುವುದಕ್ಕೆ ಅಗ್ನಿಶಾಮಕ ಸಿಬ್ಬಂದಿ ಜತೆ ಗಡಿ ಭದ್ರತಾ ಸಿಬ್ಬಂದಿಯೂ ಕೈ ಜೋಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.