ETV Bharat / bharat

ಜಮ್ಮು ಕಾಶ್ಮೀರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ನಾಲ್ವರು ಸಾವು

ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ.

ಭೂಕುಸಿತ
ಭೂಕುಸಿತ
author img

By ETV Bharat Karnataka Team

Published : Sep 12, 2023, 11:14 AM IST

Updated : Sep 12, 2023, 12:33 PM IST

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ರಾಂಬನ್​ ಜಿಲ್ಲೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಮಂಗಳವಾರ) ಭೂಕುಸಿತ ಸಂಭವಿಸಿತು. ಪರಿಣಾಮ ಟ್ರಕ್‌ನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಬನಿಹಾಲ್ ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ 44ರ ಶೆರ್ಬಿಬಿ ಸ್ಟ್ರೆಚ್‌ನಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ.

ಜುಲೈನಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಭೂಕುಸಿತದಿಂದಾಗಿ ಅಮರನಾಥ ಯಾತ್ರಿಕರಿಗೆ ಅಡಚಣೆಯಾಗದಂತೆ ಯಾತ್ರೆ ಸಾಗುವ ಮಾರ್ಗದಲ್ಲಿ ತಡೆರಹಿತ ರಸ್ತೆ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. 270 ಕಿ.ಮೀ ಉದ್ದದ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ.

ಆಗಸ್ಟ್​ನಲ್ಲೂ ಸಂಭವಿಸಿತ್ತು ಗುಡ್ಡಕುಸಿತ: ಜಮ್ಮು ಮತ್ತು ಕಾಶ್ಮೀರದ ರಾಂಬನ್​ ಪ್ರದೇಶದಲ್ಲಿ ಆಗಸ್ಟ್ 6ರಂದು ಗುಡ್ಡ ಕುಸಿತವಾಗಿತ್ತು. ಅಪಾರ ಪ್ರಮಾಣದ ಮಣ್ಣು ರಸ್ತೆ ಮೇಲೆ ಬೀಳುತ್ತಿರುವ ದೃಶ್ಯಗಳನ್ನು ಮೊಬೈಲ್​ನಲ್ಲಿ ಪ್ರಯಾಣಿಕರು ಸೆರೆಹಿಡಿದಿದ್ದರು. ರಸ್ತೆ ಸಂಪೂರ್ಣ ಬಂದ್​ ಆಗಿತ್ತು. ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಜುಲೈ ತಿಂಗಳಲ್ಲೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಭಾರಿ ಮಳೆಯಿಂದಾಗಿ ಗುಡ್ಡದಿಂದ ಕಲ್ಲು, ಮಣ್ಣು ರಸ್ತೆ ಮೇಲೆಲ್ಲಾ ಹರಡಿಕೊಂಡು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಮನೆ ಕುಸಿದು ಐವರು ಸಾವು: ಜಮ್ಮು ಕಾಶ್ಮೀರದ ಕಥುವಾದಲ್ಲಿ ಮಳೆಯಿಂದಾಗಿ ಎರಡು ಮನೆಗಳು ಕುಸಿದು ಐವರು ಸಾವನ್ನಪ್ಪಿದ್ದ ಘಟನೆ ಕಳೆದ ಆಗಸ್ಟ್‌ನಲ್ಲಿ ನಡೆದಿತ್ತು. ರಾಂಬನ್ ಜಿಲ್ಲೆಯ ಬನ್ಹಾಲ್, ಕೆಫೆಟೇರಿಯಾ ಮೋರ್ ಮತ್ತು ಮಾರೋಗ್‌ನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಜನಜೀವನಕ್ಕೆ ತೊಂದರೆಯಾಗಿತ್ತು.

ಇದನ್ನೂ ಓದಿ: ಶಿಮ್ಲಾದ ಶಿವ ಮಂದಿರ ದುರಂತ: ಅವಶೇಷಗಳಡಿ ಇದುವರೆಗೂ 17 ಮೃತದೇಹಗಳು ಪತ್ತೆ

Last Updated : Sep 12, 2023, 12:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.