ನವದೆಹಲಿ: ತೇಜಸ್ ಲಘು ಯುದ್ಧ ವಿಮಾನ (ಎಲ್‌ಸಿಎ)ವನ್ನು ಮಾರ್ಚ್ 2024 ರಂದು 48,000 ಕೋಟಿ ರೂ.ಗಳ ಒಪ್ಪಂದದಡಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗುವುದು. ಒಟ್ಟು 83 ಜೆಟ್‌ಗಳ ಪೂರೈಕೆ ಪೂರ್ಣಗೊಳ್ಳುವವರೆಗೆ ವಾರ್ಷಿಕವಾಗಿ 16 ವಿಮಾನಗಳನ್ನು ನೀಡಲಾಗುವುದು ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಭಾನುವಾರ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಮಾಧವನ್ ಅವರು, ಹಲವಾರು ದೇಶಗಳು ತೇಜಸ್ ವಿಮಾನವನ್ನು ಖರೀದಿಸಲು ತೀವ್ರ ಆಸಕ್ತಿ ತೋರಿಸಿವೆ. ಮುಂದಿನ ಎರಡು ವರ್ಷಗಳಲ್ಲಿ ಮೊದಲ ರಫ್ತು ಆದೇಶ ಬರುವ ಸಾಧ್ಯತೆಯಿದೆ ಎಂದಿದ್ದಾರೆ.
ಚೀನಾದ ಜೆಎಫ್ -17 ಯುದ್ಧ ವಿಮಾನಗಳಿಗೆ ಹೋಲಿಸಿದರೆ ತೇಜಸ್ ಮಾರ್ಕ್ 1 ಎ ಜೆಟ್ ಉತ್ತಮ ಕಾರ್ಯಕ್ಷಮತೆಯ ಮಟ್ಟವನ್ನು ಹೊಂದಿದೆ. ಏಕೆಂದರೆ ಇದು ಉತ್ತಮ ಇಂಜಿನ್, ರೇಡಾರ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ನನ್ನು ಹೊಂದಿದೆ. ಅಲ್ಲದೇ ಉನ್ನತ ಮಟ್ಟದ ತಂತ್ರಜ್ಞಾನವನ್ನು ಹೊಂದಿದೆ.
ಓದಿ:ಭಾರತ - ಚೀನಾ 9ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ ಅಂತ್ಯ
ದೊಡ್ಡ ವ್ಯತ್ಯಾಸವೆಂದರೆ, ಇದಕ್ಕೆ ಗಾಳಿಯಲ್ಲೇ ಇಂಧನ ತುಂಬಹುದಾಗಿದೆ. ಅಲ್ಲದೇ ಇದಕ್ಕೆ ಪ್ರತಿಸ್ಪರ್ಧಿ ವಿಮಾನ ಇನ್ನೂ ಅಸ್ತಿತ್ವದಲ್ಲಿಲ್ಲ ಎಂದು ಅವರು ಹೇಳಿದರು.
ಈ ವಿಮಾನದ ಮೂಲ ಬೆಲೆ ಸುಮಾರು 25,000 ಕೋಟಿ ರೂ. ಆಗಿದೆ. ವಿಮಾನದ ಪ್ರತಿ ಫೈಟರ್ ಆವೃತ್ತಿಯ ವೆಚ್ಚ 309 ಕೋಟಿ ರೂ. ಮತ್ತು ತರಬೇತುದಾರನಿಗೆ 280 ಕೋಟಿ ರೂ. ಆಗಲಿದೆ. ಒಟ್ಟು 48,000 ಕೋಟಿ ರೂ. ವೆಚ್ಚವು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಗೆ ನೀಡಬೇಕಾದ, 2,500 ಕೋಟಿ ರೂ.ಗಳ ವಿನ್ಯಾಸ ಮತ್ತು ಅಭಿವೃದ್ಧಿ ವೆಚ್ಚವನ್ನು ಒಳಗೊಂಡಿದೆ.