ETV Bharat / bharat

'ಮಿಷನ್​ 2047' ಉಗ್ರ ಚಟುವಟಿಕೆ: ಏಳು ಜನರ ಸೆರೆ, ಪಾಕ್​-ಬಾಂಗ್ಲಾಕ್ಕೆ ಶಂಕಿತರ ವಾಟ್ಸ್​​ಆ್ಯಪ್​ ಕಾಲ್! - ಬಿಹಾರದಲ್ಲಿ ಶಂಕಿತ ಭಯೋತ್ಪಾದನಾ ಜಾಲ

'ಮಿಷನ್​ 2047' ಭಯೋತ್ಪಾದಕ ಚಟುವಟಿಕೆಯಲ್ಲಿ ಒಟ್ಟಾರೆ 26 ಜನರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೆ 7 ಜನರನ್ನು ಬಂಧಿಸಲಾಗಿದ್ದು, ಇನ್ನುಳಿದ 19 ಜನರ ಶಂಕಿತರ ಹುಡುಕಾಟದಲ್ಲಿ ತನಿಖಾ ಅಧಿಕಾರಿಗಳು ತೊಡಗಿದ್ದಾರೆ.

seven-suspected-arrested-from-bihar-on-terror-mission-2047
'ಮಿಷನ್​ 2047' ಉಗ್ರ ಚಟುವಟಿಕೆ: ಏಳು ಜನರ ಸೆರೆ, ಪಾಕ್​-ಬಾಂಗ್ಲಾಕ್ಕೆ ಶಂಕಿತರ ವಾಟ್ಸ್​​ಆ್ಯಪ್​ ಕಾಲ್!
author img

By

Published : Jul 15, 2022, 9:46 PM IST

ಪಾಟ್ನಾ (ಬಿಹಾರ): ಬಿಹಾರದಲ್ಲಿ ಶಂಕಿತ ಭಯೋತ್ಪಾದನಾ ಜಾಲವೊಂದು ಪತ್ತೆಯಾದ ಬೆನ್ನಲ್ಲೆಯಲ್ಲಿ ಎನ್​ಐಎ ಮತ್ತು ಪೊಲೀಸ್​ ಇಲಾಖೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ರಾಜಧಾನಿ ಪಾಟ್ನಾ, ಮುಜಾಫರ್‌ಪುರ್, ಮೋತಿಹಾರಿ ಸೇರಿ ವಿವಿಧ ಕಡೆಗಳಲ್ಲಿ ಜಂಟಿಯಾಗಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಇನ್ನಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ.

ದೇಶ ವಿರೋಧಿ ಚಟುವಟಿಕೆಗಳ ಸಂಬಂಧ ಪಾಟ್ನಾದ ಫುಲ್ವಾರಿ ಷರೀಫ್ ಎಂಬ ಪ್ರದೇಶದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ, ಶಂಕಿತ ಭಯೋತ್ಪಾದನಾ ಜಾಲ ಬಯಲಾಗಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ)ದ ಜೊತೆ ನಂಟು ಹೊಂದಿದ್ದ ಈ ಜಾಲ ಭಾರತವನ್ನು ಇಸ್ಲಾಮಿಕ್​ ರಾಷ್ಟ್ರ ಮಾಡಬೇಕೆಂಬ ಉದ್ದೇಶದಿಂದ 'ಮಿಷನ್​ 2047' ಎಂಬ ಹೆಸರಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿತ್ತು. ಈ ಸಂಬಂಧ ಗುರುವಾರವೇ ನಿವೃತ್ತ ಸಬ್ ಇನ್ಸ್​ಪೆಕ್ಟರ್​ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.

'ಮಿಷನ್​ 2047' ಉಗ್ರ ಚಟುವಟಿಕೆ: ಏಳು ಜನರ ಸೆರೆ, ಪಾಕ್​-ಬಾಂಗ್ಲಾಕ್ಕೆ ಶಂಕಿತರ ವಾಟ್ಸ್​​ಆ್ಯಪ್​ ಕಾಲ್!

ಶುಕ್ರವಾರ ಕೂಡ ಎನ್​ಐಎ ಮತ್ತು ಪೊಲೀಸ್​ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದು, ಇದುವರೆಗೆ 7 ಜನರನ್ನು ಬಂಧಿಸಿದ್ದಾರೆ. ಮುಹಮ್ಮದ್ ಜಲಾಲ್ದನ್, ಅಥರ್ ಪರ್ವಿಜ್, ಅರ್ಮಾನ್ ಮಲಿಕ್, ತಾಹಿರ್ ಅಹ್ಮದ್, ಶಬೀರ್ ಮಲಿಕ್, ಶಮೀಮ್ ಅಖ್ತರ್ ಮತ್ತು ಇಲಿಯಾಸ್ ತಾಹಿರ್ ಅಲಿಯಾಸ್ ಮುಜ್ರೆಬ್ ಎಂಬುವವರೇ ಬಂಧಿತ ಆರೋಪಿಗಳಿದ್ದಾರೆ.

ಪಾಕ್ ​- ಬಾಂಗ್ಲಾಕ್ಕೆ ಕರೆ: ಬಂಧಿತ ಆರೋಪಿಗಳ ಪೈಕಿ ಇಲಿಯಾಸ್ ತಾಹಿರ್ ಅಲಿಯಾಸ್ ಮುಜ್ರೆಬ್ ಎಂಬ ಆರೋಪಿ ಬಗ್ಗೆ ಬೆಚ್ಚಿಬೀಳಿಸುವ ಅಂಶಗಳು ಬಯಲಾಗಿವೆ. ಇವನು ಗಜ್ವಾ-ಎ-ಹಿಂದ್ ಎಂಬ ಗ್ರೂಪ್​ ರಚಿಸುವ ಮೂಲಕ ಪಾಕಿಸ್ತಾನದ ಹಲವಾರು ಜನರನ್ನು ಈ ಗ್ರೂಪ್​ಗೆ ಸೇರಿಸಿದ್ದ. ಅಲ್ಲದೇ, ವಾಟ್ಸ್​​ಆ್ಯಪ್​ ಮತ್ತು ಮೆಸೆಂಜರ್​ ಮೂಲಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಕರೆ ಮಾಡಿ ಮಾತನಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.

ಇದನ್ನೂ ಓದಿ: 1989ರ ರುಬಿಯಾ ಸಯೀದ್​ ಕಿಡ್ನಾಪ್​ ಪ್ರಕರಣ:​ ಮಲಿಕ್ ಸೇರಿ ನಾಲ್ವರನ್ನು ಗುರುತಿಸಿದ ಮುಫ್ತಿ ಸಹೋದರಿ

ಇದೇ ವೇಳೆ, ಪಾಟ್ನಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಚೇರಿಯ ಮೇಲೂ ದಾಳಿ ನಡೆಸಿದ ತನಿಖಾ ಅಧಿಕಾರಿಗಳು, ಕೆಲ ಪೋಸ್ಟರ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ತೀಸ್ತಾ ಸೆಟಲ್ವಾಡ್, ಆಲ್ಟ್ ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೇರ್​ಗೆ ಸೇರಿದ ಪೋಸ್ಟರ್​ಗಳ ಸಹ ಇವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ 19 ಜನರಿಗಾಗಿ ಶೋಧ: 'ಮಿಷನ್​ 2047' ಭಯೋತ್ಪಾದಕ ಚಟುವಟಿಕೆಯಲ್ಲಿ ಒಟ್ಟಾರೆ 26 ಜನರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 10 ಜನರು ಪಾಟ್ನಾದವರೇ ಆಗಿದ್ದು, ಕೆಲ ದೊಡ್ಡ ಉದ್ಯಮಿಗಳು, ಕಾಲೇಜು ಉದ್ಯೋಗಿಗಳು ಮತ್ತು ನಿವೃತ್ತ ಸಬ್ ಇನ್ಸ್‌ಪೆಕ್ಟರ್‌ ಸೇರಿದ್ದಾರೆ. ಇವರೆಲ್ಲರೂ ತಮ್ಮ ಗುರುತನ್ನು ಮರೆಮಾಚಿಕೊಂಡು ದೇಶವಿರೋಧಿ ಕೃತ್ಯದಲ್ಲಿ ತೊಡಗಿದ್ದರು.

ವಿದ್ಯಾವಂತ ನಿರುದ್ಯೋಗಿ ಯುವಕರನ್ನು ಸೆಳೆದು ವಿಧ್ವಂಸಕ ಚಟುವಟಿಕೆಗೆ ತರಬೇತಿ ನೀಡಲು ಮುಂದಾಗಿದ್ದರು. ಜೊತೆಗೆ ಸಮುದಾಯಗಳ ನಡುವೆ ದ್ವೇಷ ಹರಡುವ ತರಬೇತಿ ಕೊಡಲು ಯತ್ನಿಸುತ್ತಿದ್ದರು ಎನ್ನಲಾಗುತ್ತಿದೆ. ಇದುವರೆಗೆ 7 ಜನರನ್ನು ಬಂಧಿಸಲಾಗಿದ್ದು, ಇನ್ನುಳಿದ 19 ಜನರ ಶಂಕಿತರ ಹುಡುಕಾಟದಲ್ಲಿ ಎನ್​ಐಎ ಅಧಿಕಾರಿಗಳು ತೊಡಗಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಬಹುದೊಡ್ಡ ಶಂಕಿತ ಭಯೋತ್ಪಾದಕ ಜಾಲ ಭೇದಿಸಿದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.