ETV Bharat / bharat

ಡ್ಯೂಟಿ ಫಸ್ಟ್​​​: ಲಾಕ್​ಡೌನ್​ನಲ್ಲಿ ಕರ್ತವ್ಯ ನಿರ್ವಹಿಸ್ತಿದ್ದಾರೆ 7 ತಿಂಗಳ ಗರ್ಭಿಣಿ ಕಾನ್ಸ್​ಟೇಬಲ್​​..! - ಲಾಕ್​ಡೌನ್​ನಲ್ಲಿ ಮಹಿಳಾ ಕಾನ್ಸ್​​​​ಟೇಬಲ್ ಕರ್ತವ್ಯ

ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ರೂಪಾಲಿ, ಲಾಕ್​ಡೌನ್​ ವೇಳೆ ಬರುವ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ.

seven-months-pregnant-but-duty-first
ಲಾಕ್​ಡೌನ್​ನಲ್ಲಿ ಕರ್ತವ್ಯ ನಿರ್ವಹಿಸ್ತಿದಾರೆ 7 ತಿಂಗಳ ಗರ್ಭಿಣಿ ಕಾನ್ಸ್​ಟೇಬಲ್​​..!
author img

By

Published : Apr 29, 2021, 8:11 PM IST

ಮುಂಬೈ: ಕೊರೊನಾ ಸಾಂಕ್ರಾಮಿಕ ರೋಗ ಎಲ್ಲೆಡೆ ತನ್ನ ಅಟ್ಟಹಾಸ ಮುಂದುವರೆಸುತ್ತಿದ್ದರೂ, ಇಲ್ಲೋರ್ವ ಏಳು ತಿಂಗಳ ಗರ್ಭಿಣಿ ಕಾನ್ಸ್​ಟೇಬಲ್ 'ಡ್ಯೂಟಿ ಫಸ್ಟ್ ' ಎಂಬ ನಿಲುವಿಗೆ ಅಂಟಿಕೊಂಡು 12 ಗಂಟೆಗಳ ಕರ್ತವ್ಯದಲ್ಲಿದ್ದಾರೆ. ತಾಯ್ತನದ ಜವಾಬ್ದಾರಿಯ ಜೊತೆಗೆ ಬಿಸಿಲಿನ ಬೇಗೆ ಹಾಗೂ ಕೊರೊನಾ ಸೋಂಕನ್ನು ಎದುರಿಸುತ್ತಿದ್ದಾರೆ.

ಅವರು ಹೆಸರು ರೂಪಾಲಿ ಬಾಬಾಜಿ ಅಖಾಡೆ ಆಗಿದ್ದು, ಈಗಲೂ ಸುಮಾರು 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಲಾಕ್​ಡೌನ್ ಅನ್ನು ನಿಯಂತ್ರಿಸುವ ಕೆಲಸದಲ್ಲಿ ರೂಪಾಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ರೈಲ್ವೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ರೂಪಾಲಿ, ಲಾಕ್​ಡೌನ್​ ವೇಳೆ ಬರುವ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಆ ದಾಖಲೆಗಳು ಸರಿಯಾಗಿದ್ದರೆ ಅವರಿಗೆ ಅನುಮತಿ ನೀಡುವುದು, ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ವಾಪಸ್​ ಕಳುಹಿಸುವ ಅಥವಾ ದಂಡವಿಧಿಸುವ ಕೆಲಸವನ್ನು ಆಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಕ್ರ್ಯಾಪ್​​ನಲ್ಲಿ ಜೀಪ್ : ಈ ವಿಶಿಷ್ಟ ವಾಹನ ನೋಡಿದ್ರೆ ನೀವೂ ಬೆರಗಾಗ್ತೀರಿ..!

ರೂಪಾಲಿ ಸುಮಾರು ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನೊಂದಿಗೆ ಅತ್ತೆ ಮತ್ತು ಅತ್ತಿಗೆಯೊಂದಿಗೆ ವಾಸಿಸುತ್ತಿದ್ದಾರೆ. ಪೊಲೀಸ್ ವೃತ್ತಿಗೆ ತನ್ನ ಕುಟುಂಬವೂ ಬೆಂಬಲ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಲಾಕ್​ಡೌನ್ ವೇಳೆ ಪೊಲೀಸರ ಮೇಲೆ ಸಾಕಷ್ಟು ಒತ್ತಡವಿದ್ದು, ದಯವಿಟ್ಟು ಕೋವಿಡ್ ಮಾರ್ಗಸೂಚಿಯನ್ನು ಸರ್ಕಾರ ಪಾಲಿಸಬೇಕೆಂದು ರೂಪಾಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.