ETV Bharat / bharat

ವಿಶ್ವದ 300 ಅತ್ಯುತ್ತಮ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸೇತು ಶರ್ಮಾ

ಐಐಎಂ ಬೆಂಗಳೂರಿನ ಹೆಸರಾಂತ ಎನ್ಎಸ್ ರಾಘವನ್ ಸೆಂಟರ್ ಫಾರ್ ಎಂಟರ್ಪ್ರೆನ್ಯೂರ್ ಲರ್ನಿಂಗ್​ನಲ್ಲಿನ (ಎನ್ಎಸ್ಆರ್ಸಿಇಎಲ್) ಮಹಿಳಾ ಸ್ಟಾರ್ಟ್​ಅಪ್ ಕಾರ್ಯಕ್ರಮ 3.0 ಅಡಿಯಲ್ಲಿ, ಅತ್ಯುತ್ತಮ 300 ಮಹಿಳಾ ಉದ್ಯಮಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು, ಸೇತು ಶರ್ಮಾ ಸ್ಥಾನ ಪಡೆದಿದ್ದಾರೆ.

setu sharma
setu sharma
author img

By

Published : Jan 23, 2021, 6:53 PM IST

ಬಿಲಾಸ್ಪುರ (ಹಿಮಾಚಲ ಪ್ರದೇಶ): ಇಲ್ಲಿನ 27 ವರ್ಷದ ಸೇತು ಶರ್ಮಾ ಎಂಬ ಯುವತಿ ರಾಜ್ಯ ಮಾತ್ರವಲ್ಲದೇ ಇಡೀ ದೇಶದ ಹೆಸರು ಬೆಳಗಿಸಿದ್ದಾಳೆ. ಸೇತು ಶರ್ಮಾ ಹೆಸರು ವಿಶ್ವದ 300 ಅತ್ಯುತ್ತಮ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಸೇರಿದೆ.

ಐಐಎಂ ಬೆಂಗಳೂರಿನ ಹೆಸರಾಂತ ಎನ್ಎಸ್ ರಾಘವನ್ ಸೆಂಟರ್ ಫಾರ್ ಎಂಟರ್ಪ್ರೆನ್ಯೂರ್ ಲರ್ನಿಂಗ್​ನಲ್ಲಿನ (ಎನ್ಎಸ್ಆರ್ಸಿಇಎಲ್) ಮಹಿಳಾ ಸ್ಟಾರ್ಟ್​ಅಪ್ ಕಾರ್ಯಕ್ರಮ 3.0 ಅಡಿ, ಅತ್ಯುತ್ತಮ 300 ಮಹಿಳಾ ಉದ್ಯಮಿಗಳ ಪಟ್ಟಿ ಬಿಡುಗಡೆಗೊಳಿಸಿದ್ದು, ಸೇತು ಶರ್ಮಾ ಸ್ಥಾನ ಪಡೆದಿದ್ದಾರೆ.

ಸೇತು ಶರ್ಮಾ ಅವರಿಗೆ 2018ರ ಜನವರಿಯಲ್ಲಿ ಕೌಲಾಲಂಪುರದ ಕ್ಲಿಯರ್ ವಾಟರ್ ನೈರ್ಮಲ್ಯದಲ್ಲಿ ವೆಸ್ಟ್ ಡೆಲಿಗೇಟ್ ಗ್ಲೋಬಲ್ ಗೋಲ್ ಮತ್ತು ಬ್ಯಾಂಕಾಕ್‌ನಲ್ಲಿ ಅತ್ಯಂತ ಗೌರವಾನ್ವಿತ ಹವಾಮಾನ ಕ್ರಿಯೆಯ ಪ್ರಶಸ್ತಿ ನೀಡಲಾಗಿದೆ. ಇದಲ್ಲದೇ, ಸೇತು ಶರ್ಮಾ ಅವರು ಪ್ರೇರಕ ಸ್ಪೀಕರ್ ಮತ್ತು ರಾಯಭಾರಿ ಇಂಟರ್ನ್ಯಾಷನಲ್ ಗ್ಲೋಬಲ್ ನೆಟ್ವರ್ಕ್ ಜಕಾರ್ತಾ (ಇಂಡೋನೇಷ್ಯಾ) ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಸ್ತುತ, ಅವರು ಬೆಂಗಳೂರಿನ ಯೂನಿವರ್ಸಿಟಿ ಲರ್ನಿಂಗ್ ಸಿಸ್ಟಮ್​ನಲ್ಲಿ ಹಿರಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹೆಡ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.