ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕರ್ತವ್ಯಕ್ಕೆ ಗೈರು ಹಾಜರಾದ 112 ವೈದ್ಯರನ್ನು ವಜಾಗೊಳಿಸಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಸೇವೆಗಳಿಂದ ವಜಾಗೊಂಡವರಲ್ಲಿ ವೈದ್ಯಕೀಯ ಅಧಿಕಾರಿಗಳು, ಸಲಹೆಗಾರ ಶಸ್ತ್ರಚಿಕಿತ್ಸಕರು ಮತ್ತು ಬಿ-ಗ್ರೇಡ್ ತಜ್ಞರು ಸೇರಿದ್ದಾರೆ.
ಈ ವೈದ್ಯರು ತಮಗೆ ನೀಡಿದ್ದ ನೋಟಿಸ್‌ಗೆ ಉತ್ತರಿಸಿರಲಿಲ್ಲ ಹಾಗೂ ಕರ್ತವ್ಯಕ್ಕೂ ಹಿಂತಿರುಗಿರಲಿಲ್ಲ. ಪ್ರಕರಣಗಳನ್ನು ಇಲಾಖೆಯಲ್ಲಿ ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಸ್ವಯಂಪ್ರೇರಿತ ಕೃತ್ಯ ಎಂದು ತಿಳಿದುಬಂದಿದೆ. ಹೀಗಾಗಿ, ಕಠಿಣ ಕ್ರಮ ಜರುಗಿಸಲಾಗಿದೆ. ಇದೇ ರೀತಿ ಗೈರುಹಾಜರಾದ ಇತರ ವೈದ್ಯರ ವಿಷಯದಲ್ಲಿಯೂ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಒಂದೇ ಕುಟುಂಬದ 9 ಜನರ ನಿಗೂಢ ಸಾವು, ಆತ್ಮಹತ್ಯೆ ಶಂಕೆ