ETV Bharat / bharat

850 ಪಾಯಿಂಟ್​ ಕುಸಿದ ಮುಂಬೈ ಷೇರು ಸೂಚ್ಯಂಕ; ದೈತ್ಯ ಕಂಪನಿಗಳಿಗೆ ನಷ್ಟ - ಮುಂಬೈ ಸೂಚ್ಯಂಕ ಇಳಿಕೆ

ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಇಂದೂ ಕೂಡ ಕುಸಿತಗೊಂಡಿದೆ. ಹೀಗಾಗಿ, ದೈತ್ಯ ಕಂಪನಿಗಳಿಗೆ ನಷ್ಟವಾಗಿದೆ.

Mumbai Sensex
Mumbai Sensex
author img

By

Published : May 6, 2022, 10:12 AM IST

Updated : May 6, 2022, 12:35 PM IST

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​ ರೆಪೊ ದರ ಏರಿಕೆ ಮಾಡಿರುವ ಬೆನ್ನಲ್ಲೇ ದಾಖಲೆಯ 1,307 ಅಂಕ ಕುಸಿತ ಕಂಡಿದ್ದ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್‌ ಇದೀಗ ಮತ್ತಷ್ಟು ಕೆಳಗಿಳಿದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲೇ ದಾಖಲೆಯ 850 ಅಂಕ ಕುಸಿತ ಕಂಡಿತು.

ದುರ್ಬಲ ಜಾಗತಿಕ ಸೂಚನೆಗಳು ಷೇರುಪೇಟೆ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಸದ್ಯ ಸೆನ್ಸೆಕ್ಸ್‌ 55,032 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 16,450 ಅಂಕಗಳಲ್ಲಿದೆ.

ಸೂಚ್ಯಂಕದಲ್ಲಿ ಇಷ್ಟೊಂದು ಇಳಿಕೆ ಕಂಡು ಬಂದ ಕಾರಣ ಹೂಡಿಕೆದಾರರು ದಾಖಲೆಯ 5.10 ಲಕ್ಷ ಕೋಟಿ ಹಣ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಲೋಹ, ಐಟಿ, ಬ್ಯಾಂಕಿಂಗ್​, ಹಣಕಾಸು ವಲಯದ ಕಂಪನಿಗಳ ಷೇರು ಶೇ. 3ರಷ್ಟು ಇಳಿಕೆಯಾಗಿವೆ.ಗುರುವಾರ ರಾತ್ರಿ ಅಮೆರಿಕ ಷೇರುಪೇಟೆಯಲ್ಲಿ ಕುಸಿತ ಉಂಟಾಗಿರುವ ಕಾರಣ ಮುಂಬೈ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಪ್ರಮುಖವಾಗಿ ಬಜಾಜ್ ಫೈನಾನ್ಸ್​, ಆ್ಯಕ್ಸಿಸ್ ಬ್ಯಾಂಕ್​, ಇನ್ಫೋಸಿಸ್​​ ಷೇರುಗಳು ನಷ್ಟ ಅನುಭವಿಸಿವೆ.

ಇದನ್ನೂ ಓದಿ: ಬರಿಗಾಲಲ್ಲೇ ಕ್ರೀಡಾಭ್ಯಾಸ ಮಾಡಿ ಕಂಚು ಗೆದ್ದ ಪ್ಯಾರಾಅಥ್ಲೀಟ್​​​ ಈಗ ಐಸ್‌ಕ್ರೀಂ​ ಮಾರಾಟಗಾರ!

ಆರಂಭಿಕ ವಹಿವಾಟಿನಲ್ಲೇ ಇಷ್ಟೊಂದು ಹಿನ್ನಡೆ ಉಂಟಾಗಿರುವ ಕಾರಣ ಕೆಲವು ಕಂಪನಿಗಳ ಷೇರು ಬೆಲೆ ದಿಢೀರ್ ಕುಸಿತಗೊಂಡಿದ್ದು, ಕೆಲ ಕಂಪನಿಗಳು ಹೆಚ್ಚಿನ ಲಾಭ ಗಳಿಸಿವೆ.

Last Updated : May 6, 2022, 12:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.