ಮುಂಬೈ: ಇಂದಿನ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಎರಡೂ ಕೂಡ ಶೇ.52ರಷ್ಟು ಏರಿಕೆ ಕಂಡಿದೆ.
300 ಅಂಕಗಳ ಜಿಗಿತದೊಂದಿಗೆ ದಿನದ ಆರಂಭದಲ್ಲೇ ಸೆನ್ಸೆಕ್ಸ್ 61, 285 ಪಾಯಿಂಟ್ಸ್ಗೆ ಹೆಚ್ಚಳವಾಗಿದೆ. ರಾಷ್ಟ್ರೀಯ ಸಂವೇದನಾ ಸೂಚ್ಯಂಕ ನಿಫ್ಟಿ 93.75 ಅಂಕಗಳ ಏರಿಕೆಯೊಂದಿಗೆ 118,219.15 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಆರ್ಥಿಕತೆಯು ಈ ಆರ್ಥಿಕ ವರ್ಷದಲ್ಲಿ ಶೇ 9.5ರಷ್ಟು ಬೆಳವಣಿಗೆ ದಾಖಲಿಸುವ ಸಾಧ್ಯತೆ: ವರದಿ
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇಕಡಾ 6 ಕ್ಕಿಂತ ಹೆಚ್ಚು ಲಾಭ ಕಾಣುವ ಮೂಲಕ ಟೆಕ್ ಮಹೀಂದ್ರಾ ಕಂಪನಿಯು ಟಾಪ್ ಗೇನರ್ ಆಗಿ ಹೊರಹೊಮ್ಮಿದೆ. ಭಾರತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಟಾಟಾ ಸ್ಟೀಲ್, ಎಲ್ ಆಂಡ್ ಟಿ, ಐಟಿಸಿ ಮತ್ತು ಎಸ್‌ಬಿಐ ನಂತರದ ಸ್ಥಾನದಲ್ಲಿವೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪವರ್‌ಗ್ರಿಡ್, ಎಚ್‌ಯುಎಲ್ ಮತ್ತು ಡಾ ರೆಡ್ಡೀಸ್ ಕಂಪನಿಗಳು ನಷ್ಟ ಅನುಭವಿಸಿವೆ.