ETV Bharat / bharat

ಅಹ್ಮದ್ ಪಟೇಲ್ ನಿಧನಕ್ಕೆ ಅಮಿತ್ ಶಾ, ನಡ್ಡಾ, ಮಲ್ಲಿಕಾರ್ಜುನ್ ಖರ್ಗೆ ಸಂತಾಪ

author img

By

Published : Nov 25, 2020, 10:12 AM IST

ಕಾಂಗ್ರೆಸ್​​​ನ ಹಿರಿಯ ನಾಯಕ ಅಹ್ಮದ್ ಪಟೇಲ್​​ ಬಹು ಅಂಗಾಂಗ ವೈಫಲ್ಯದಿಂದಾಗಿ ಅಸುನೀಗಿರುವುದಕ್ಕೆ ಹಲವು ನಾಯಕರು ಸಂತಾಪ ಸೂಚಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಹಾಗೂ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಶೋಕ ಸಂದೇಶ ತಿಳಿಸಿದ್ದಾರೆ.

JP Nadda, Amit Shah, Mallikarjun Kharge
ಜೆಪಿ ನಡ್ಡಾ, ಅಮಿತ್ ಶಾ, ಮಲ್ಲಿಕಾರ್ಜುನ್ ಖರ್ಗೆ

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್​ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಅವರ ಅಗಲಿಕೆಗೆ ರಾಷ್ಟ್ರೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ನಿಧನದ ಸುದ್ದಿ ತುಂಬಾ ದುಃಖ ತರಿಸಿದೆ. ಅಹ್ಮದ್ ಪಟೇಲ್ ಜಿ ಕಾಂಗ್ರೆಸ್​ ಹಾಗೂ ಸಾಮಾಜಕ್ಕೆ ತಮ್ಮದೇ ಕೊಡುಗೆ ನೀಡಿದವರು, ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ದೇವರ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

  • कांग्रेस पार्टी के वरिष्ठ नेता अहमद पटेल जी के निधन की सूचना अत्यंत दुःखद है। अहमद पटेल जी का कांग्रेस पार्टी और सार्वजनिक जीवन में बड़ा योगदान रहा। मैं दुःख की इस घड़ी में उनके परिजनों और समर्थकों के प्रति अपनी संवेदना व्यक्त करता हूँ। ईश्वर दिवंगत आत्मा को शांति प्रदान करें।

    — Amit Shah (@AmitShah) November 25, 2020 " class="align-text-top noRightClick twitterSection" data=" ">

ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ನಾವು ಒಬ್ಬ ನಿಷ್ಠಾವಂತ ನಾಯಕನನ್ನು ಕಳೆದುಕೊಂಡಿದ್ದೇವೆ. ಅಹ್ಮದ್ ಪಟೇಲ್ ಜಿ ಅವರ ಅಗಲಿಕೆಯಿಂದ ಪಕ್ಷ ಒಂದು ಆಧಾರ ಸ್ತಂಭ ಕಳೆದುಕೊಂಡಂತಾಗಿದೆ. ಅವರ ತ್ಯಾಗ ಮತ್ತು ಕೊಡುಗೆ ಅವಿಸ್ಮರಣೀಯವಾದುದು ಎಂದಿದ್ದಾರೆ.

  • A sad day for @INCIndia . We have lost one of our most hard working leaders. With the demise of #AhmedPatel ji we have lost one of the strongest pillars of the party. His contributions & sacrifices have been immense. My deepest condolences to his family.

    — Mallikarjun Kharge (@kharge) November 25, 2020 " class="align-text-top noRightClick twitterSection" data=" ">

ಇದಲ್ಲದೆ ಈ ಕುರಿತು ಶೋಕ ಸಂದೇಶ ಪತ್ರ ಬರೆದಿದ್ದು, ಅಹ್ಮದ್ ಪಟೇಲ್ ಅವರ ಸಾವಿನ ಸುದ್ದಿಯು ನನಗೆ ಆಘಾತ ಉಂಟುಮಾಡಿದೆ. 1976ರಿಂದಲೂ ಅವರೊಂದಿಗೆ ಕೆಲಸ ಮಾಡಿದ್ದೇನೆ. 4 ದಶಕಗಳ ಕಾಲ ಅವರೊಂದಿಗೆ ರಾಜಕೀಯವಾಗಿ ಬೆರೆತಿದ್ದೆ. ಅವರು ದಿನದ ಎಲ್ಲಾ ಸಮಯದಲ್ಲೂ ಪಕ್ಷಕ್ಕಾಗಿ ಹಾಗೂ ಪಕ್ಷದ ಕಾರ್ಯಕರ್ತರಿಗಾಗಿ ಲಭ್ಯವಾಗುತ್ತಿದ್ದ ಏಕೈಕ ನಾಯಕರು. ಯಾವಾಗಲೂ ಪಕ್ಷದ ಸಿದ್ಧಾಂತ ಹಾಗೂ ಪಕ್ಷದ ಸಂಕಷ್ಟ ಕಾಲದಲ್ಲೂ ಜೊತೆಗೆ ನಿಂತವರು ಎಂದು ತಿಳಿಸಿದ್ದಾರೆ.

  • Deeply anguished to hear about the demise of veteran Congress leader Shri Ahmed Patel Ji. I pray for strength to the family members and his supporters at this hour of grief.

    Om Shanti

    — Jagat Prakash Nadda (@JPNadda) November 25, 2020 " class="align-text-top noRightClick twitterSection" data=" ">

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅಗಲಿದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.