ಗಾಂಧಿನಗರ: ದೇಶದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಬಲಪಡಿಸಿಲು ಹಾಗೂ ಅದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಲು ತಂತ್ರಜ್ಞಾನ ಕಂಪನಿಗಳಿಗೆ ಶೇ. 50ರಷ್ಟು ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುಜರಾತ್ನ ಗಾಂಧಿನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್-2023 ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
-
#WATCH | At SemiconIndia Conference 2023, PM Narendra Modi says, "Today, the world is becoming a witness to Industry 4.0. Whenever the world has undergone any industrial revolution, its foundation has been the aspirations of the people of any region. This was the relation between… pic.twitter.com/cCeLLHwIGb
— ANI (@ANI) July 28, 2023 " class="align-text-top noRightClick twitterSection" data="
">#WATCH | At SemiconIndia Conference 2023, PM Narendra Modi says, "Today, the world is becoming a witness to Industry 4.0. Whenever the world has undergone any industrial revolution, its foundation has been the aspirations of the people of any region. This was the relation between… pic.twitter.com/cCeLLHwIGb
— ANI (@ANI) July 28, 2023#WATCH | At SemiconIndia Conference 2023, PM Narendra Modi says, "Today, the world is becoming a witness to Industry 4.0. Whenever the world has undergone any industrial revolution, its foundation has been the aspirations of the people of any region. This was the relation between… pic.twitter.com/cCeLLHwIGb
— ANI (@ANI) July 28, 2023
ಭಾರತವು ಜಾಗತಿಕ ಸೆಮಿಕಂಡಕ್ಟರ್ ವಲಯದಲ್ಲಿ ಹೊಸ ಹೆಜ್ಜೆ ಇಡುತ್ತಿದೆ. ಇದನ್ನು ಮತ್ತಷ್ಟು ಬಲಪಡಿಸಲು ಹಾಗೂ ಉತ್ತೇಜಿಸಲು ವಿದೇಶಿ ಕಂಪನಿಗಳು ತಮ್ಮ ಹೂಡಿಕೆ ಮಾಡಲು ಇದೊಂದು ಸೂಕ್ತ ವೇದಿಕೆಯಾಗಿದೆ. ದೇಶದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುತ್ತಿದೆ. ಸೆಮಿಕಂಡಕ್ಟರ್ ಉತ್ಪಾದನಾ ವಲಯಕ್ಕೆ ಶಕ್ತಿಯಾಗಿ ಬರುವ ಕೈಗಾರಿಕೆಗಳಿಗೆ ತಮ್ಮ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.
-
#WATCH | Gandhinagar, Gujarat: Young Liu, Chairman, Foxconn at Semicon India says, "...Where there is a will there's a way, I can feel the determination of the Indian government. I am very optimistic about the way India will be headed. PM Modi, once mentioned that IT stands for… pic.twitter.com/lp1ScfM4ok
— ANI (@ANI) July 28, 2023 " class="align-text-top noRightClick twitterSection" data="
">#WATCH | Gandhinagar, Gujarat: Young Liu, Chairman, Foxconn at Semicon India says, "...Where there is a will there's a way, I can feel the determination of the Indian government. I am very optimistic about the way India will be headed. PM Modi, once mentioned that IT stands for… pic.twitter.com/lp1ScfM4ok
— ANI (@ANI) July 28, 2023#WATCH | Gandhinagar, Gujarat: Young Liu, Chairman, Foxconn at Semicon India says, "...Where there is a will there's a way, I can feel the determination of the Indian government. I am very optimistic about the way India will be headed. PM Modi, once mentioned that IT stands for… pic.twitter.com/lp1ScfM4ok
— ANI (@ANI) July 28, 2023
ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಡಿ ಪ್ರೋತ್ಸಾಹ ಹಾಗೂ ನೆರವು ನೀಡಲಾಗುತ್ತದೆ. ಇದೀಗ ಆ ನೆರವು ಹಾಗೂ ಪ್ರೋತ್ಸಾಹವನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು 50 ಪ್ರತಿಶತ ಹಣಕಾಸಿನ ನೆರವು ನೀಡಲಾಗುತ್ತದೆ. ಸೆಮಿ ಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ದೇಶವನ್ನು ಮುಂಚೂಣಿಗೆ ತರಲು ಇದು ಉತ್ತಮ ವೇದಿಕೆಯಾಗಿದೆ. ಇದರಿಂದ ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮವು ವೇಗವಾಗಿ ಬೆಳೆಯಲಿದೆ ಎಂದು ಮೋದಿ ಹೇಳಿದರು.
ವರ್ಷದ ಹಿಂದೆ ಭಾರತದ ಸೆಮಿಕಂಡಕ್ಟರ್ ವಲಯದಲ್ಲಿ ಏಕೆ ಹೂಡಿಕೆ ಮಾಡಬೇಕು ಎಂದು ವಿದೇಶಿ ಕಂಪನಿಗಳು ಸೇರಿದಂತೆ ಕೆಲವರು ಕೇಳುತ್ತಿದ್ದರು. ಈಗ ಭಾರತದಲ್ಲಿ ಏಕೆ ಹೂಡಿಕೆ ಮಾಡಬಾರದು ಎಂದು ಅವರೇ ಕೇಳುತ್ತಾರೆ. ಇದು ಭಾರತದ ಆರ್ಥಿಕ ಬೆಳವಣಿಗೆಗೆ ಸಾಕ್ಷಿ ಎಂದರು.
-
#WATCH | At SemiconIndia Conference 2023, PM Narendra Modi says, "We are seeing exponential growth in India's digital sector and electronic manufacturing. A few years back India was a rising player in this sector and today, our share in global electronics manufacturing has… pic.twitter.com/KpQsIG63ke
— ANI (@ANI) July 28, 2023 " class="align-text-top noRightClick twitterSection" data="
">#WATCH | At SemiconIndia Conference 2023, PM Narendra Modi says, "We are seeing exponential growth in India's digital sector and electronic manufacturing. A few years back India was a rising player in this sector and today, our share in global electronics manufacturing has… pic.twitter.com/KpQsIG63ke
— ANI (@ANI) July 28, 2023#WATCH | At SemiconIndia Conference 2023, PM Narendra Modi says, "We are seeing exponential growth in India's digital sector and electronic manufacturing. A few years back India was a rising player in this sector and today, our share in global electronics manufacturing has… pic.twitter.com/KpQsIG63ke
— ANI (@ANI) July 28, 2023
ವಿಶ್ವಕ್ಕೆ ವಿಶ್ವಾಸಾರ್ಹ ಚಿಪ್ ಪೂರೈಕೆ ಅಗತ್ಯವಿದೆ. ಸೆಮಿಕಂಡಕ್ಟರ್ ವಿನ್ಯಾಸದ ಕೋರ್ಸ್‌ಗಳನ್ನು ಪ್ರಾರಂಭಿಸಲು ಭಾರತದಲ್ಲಿ 300 ಶಾಲೆಗಳನ್ನು ಗುರುತಿಸಲಾಗಿದೆ. ಅಲ್ಲಿ ಸೆಮಿಕಂಡಕ್ಟರ್ ಕೋರ್ಸ್‌ಗಳು ಲಭ್ಯವಿರುತ್ತವೆ. ಮುಂದಿನ 5 ವರ್ಷಗಳಲ್ಲಿ ನಾವು 1 ಲಕ್ಷಕ್ಕೂ ಹೆಚ್ಚು ಸೆಮಿಕಾನ್ ವಿನ್ಯಾಸ ಎಂಜಿನಿಯರ್‌ಗಳನ್ನು ಹೊಂದಲಿದ್ದೇವೆ ಎಂದು ಭವಿಷ್ಯದ ಭಾರತದ ಕಲ್ಪನೆಯನ್ನು ತೆರೆದಿಟ್ಟರು. ಭಾರತದಲ್ಲಿ ಹೂಡಿಕೆ ಮಾಡಲು ಬರುವ ಪ್ರತಿಯೊಂದು ಕಂಪನಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ಹೇಳಿದ ಪ್ರಧಾನಮಂತ್ರಿ, ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲಿ ವಿದೇಶಿ ಮತ್ತು ಸ್ಟಾರ್ಟ್‌ಅಪ್ ಕಂಪನಿಗಳು ಕೂಡ ಸೇರಿಕೊಂಡಿವೆ ಎಂದು ಪ್ರಧಾನಿ ಹೇಳಿದರು.
-
#WATCH | At SemiconIndia Conference 2023, PM Narendra Modi says, "In India of the 21st century, there is immense opportunity for you. India's democracy, India's demography and dividend from India can double, triple your business." pic.twitter.com/NSGrrGjBTb
— ANI (@ANI) July 28, 2023 " class="align-text-top noRightClick twitterSection" data="
">#WATCH | At SemiconIndia Conference 2023, PM Narendra Modi says, "In India of the 21st century, there is immense opportunity for you. India's democracy, India's demography and dividend from India can double, triple your business." pic.twitter.com/NSGrrGjBTb
— ANI (@ANI) July 28, 2023#WATCH | At SemiconIndia Conference 2023, PM Narendra Modi says, "In India of the 21st century, there is immense opportunity for you. India's democracy, India's demography and dividend from India can double, triple your business." pic.twitter.com/NSGrrGjBTb
— ANI (@ANI) July 28, 2023
ಅಮೆರಿಕದ ಬಹುರಾಷ್ಟ್ರೀಯ ಸೆಮಿಕಂಡಕ್ಟರ್ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (AMD) ಶುಕ್ರವಾರ ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸುಮಾರು USD 400 ಮಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತ್ವದಲ್ಲಿ ನಡೆಯುತ್ತಿರುವ 'ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್ 2023' ನಲ್ಲಿ ಈ ಘೋಷಣೆ ಮಾಡಲಾಗಿದೆ. ಇವರೊಂದಿಗೆ ಹಲವು ವಿದೇಶಿ ಕಂಪನಿಗಳು ಈ 'ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್ 2023'ನಲ್ಲಿ ಪಾಲ್ಗೊಂಡಿವೆ.
ಕಳೆದ ವರ್ಷ ಸೆಮಿಕಾನ್ ಇಂಡಿಯಾ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಗುಜರಾತ್ನ ಗಾಂಧಿನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಈ ಸೆಮಿಕಾನ್ ಇಂಡಿಯಾ ಕಾನ್ಫರೆನ್ಸ್-2023 ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: Project Tiger: ವಿಶ್ವದ ಶೇ. 70ರಷ್ಟು ಹುಲಿಗಳು ಭಾರತದಲ್ಲಿವೆ; 'ಹುಲಿ ಯೋಜನೆ' ಶ್ಲಾಘಿಸಿದ ಪ್ರಧಾನಿ ಮೋದಿ