ETV Bharat / bharat

ವಿಡಿಯೋ ಕಾಲ್​ ಮಾಡಿ ವಿವಸ್ತ್ರಳಾಗುವಂತೆ ಒತ್ತಾಯ.. ಶಾಲಾ ಸೆಕ್ಯುರಿಟಿ ಗಾರ್ಡ್​ ಬಂಧನ - ETB bharat kannada news

ಶಾಲಾ ಭದ್ರತಾ ಸಿಬ್ಬಂದಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಅಪ್ರಾಪ್ತೆಗೆ ವಿಡಿಯೋ ಕಾಲ್​ ಮಾಡಿ ನಗ್ನಳಾಗುವಂತೆ ಆತ ಒತ್ತಾಯ ಮಾಡುತ್ತಿದ್ದ. ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ.

security-guard-sexually-harassment-in-mumbai
ವಿಡಿಯೋ ಕಾಲ್​ ಮಾಡಿ ವಿವಸ್ತ್ರಳಾಗುವಂತೆ ಒತ್ತಾಯ
author img

By

Published : Sep 11, 2022, 9:37 PM IST

ಮುಂಬೈ(ಮಹಾರಾಷ್ಟ್ರ): ಮಕ್ಕಳಿಗೆ ರಕ್ಷಕರಾಗಿ ಇರಲಿ ಎಂದು ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿರ್ತಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಭದ್ರತಾ ಸಿಬ್ಬಂದಿಯೇ 15 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ಸೆಕ್ಯುರಿಟಿ ಗಾರ್ಡ್​ನನ್ನು ಬಂಧಿಸಲಾಗಿದೆ.

ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯ ಪರಿಚಯ ಬೆಳೆಸಿಕೊಂಡ ಆರೋಪಿ, ಬರುಬರುತ್ತ ಸಲುಗೆಯಿಂದ ನಡೆದುಕೊಂಡಿದ್ದಾನೆ. ಬಾಲಕಿಯೂ ಆತನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಇದನ್ನೇ ದುರುಪಯೋಗಪಡಿಸಿಕೊಂಡ ಸೆಕ್ಯೂರಿಟಿ ಗಾರ್ಡ್​ ಶಾಲೆ ಬಿಟ್ಟ ಬಳಿಕ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಹೋಗುವುದು, ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದ.

ಅಲ್ಲದೇ, ಅಪ್ರಾಪ್ತೆಯ ಫೋನ್​ ನಂಬರ್​ ಪಡೆದುಕೊಂಡು ವಿಡಿಯೋ ಕಾಲ್​ ಮಾಡಿ ಕಿರುಕುಳ ನೀಡುತ್ತಿದ್ದ. ಇಷ್ಟಕ್ಕೆ ಬಿಡದ ಆತ ವಿಡಿಯೋ ಕಾಲ್​ನಲ್ಲಿ ವಿವಸ್ತ್ರಳಾಗುವಂತೆ ಒತ್ತಾಯ ಮಾಡುತ್ತಿದ್ದನಂತೆ. ಶಾಲೆಯಲ್ಲಿ ಶೌಚಾಲಯಕ್ಕೆ ಕರೆದೊಯ್ದು ಅಲ್ಲಿಯೂ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾನೆ.

ಇದರಿಂದ ತೀವ್ರವಾಗಿ ನೊಂದಿದ್ದ ಬಾಲಕಿ ಮನೆಯಲ್ಲಿ ಅಳುತ್ತಿರುವಾಗ ಕಂಡ ತಾಯಿ ವಿಚಾರಿಸಿದ್ದಾರೆ. ಬಾಲಕಿ ನಡೆದ ಘಟನೆಯನ್ನು ವಿವರಿಸಿದಾಗ ಕುಟುಂಬಸ್ಥರು ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೂ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಓದಿ: ಮದ್ಯದ ಅಮಲಿನಲ್ಲಿ ದಾರಿ ಮಧ್ಯೆ ತೇಲಾಡಿದ ನಾರಿ: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.