ETV Bharat / bharat

ಮಣಿಪುರದ ಚಾಂಡೆಲ್​ನಲ್ಲಿ ಐಇಡಿ ವಶಕ್ಕೆ ಪಡೆದ ಭದ್ರತಾಪಡೆ: ನಕ್ಸಲರ ಸಂಚು ವಿಫಲ

ಮಣಿಪುರ ಪೊಲೀಸರೊಂದಿಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಕುಲ್ಜಾಂಗ್ ಗ್ರಾಮದಲ್ಲಿ ಐಇಡಿಗಳನ್ನು ವಶಕ್ಕೆ ಪಡೆದು ನಿಷ್ಕ್ರಿಯಗೊಳಿಸಲಾಗಿದೆ.

Security forces foil major attack in Manipur's Chandel, recover IED
ಮಣಿಪುರದ ಚಾಂಡೆಲ್​ನಲ್ಲಿ ಐಇಡಿ ವಶಕ್ಕೆ ಪಡೆದ ಭದ್ರತಾಪಡೆ: ನಕ್ಸಲರ ಸಂಚು ವಿಫಲ
author img

By

Published : Jan 19, 2022, 9:15 AM IST

ಚಾಂಡೆಲ್(ಮಣಿಪುರ): ನಕ್ಸಲರ ಅತಿ ದೊಡ್ಡ ದಾಳಿ ತಂತ್ರವನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ವಿಫಲಗೊಳಿಸಿರುವ ಘಟನೆ ಮಣಿಪುರ ರಾಜ್ಯದ ಚಾಂಡೆಲ್​​ನಲ್ಲಿ ನಡೆದಿದ್ದು, ಸುಧಾರಿತ ಸ್ಫೋಟಕ ಸಾಧನಗಳನ್ನು ವಶಕ್ಕೆ ಪಡೆದು, ನಿಷ್ಕ್ರಿಯಗೊಳಿಸಲಾಗಿದೆ.

ನಿಖರ ಮಾಹಿತಿಯನ್ನು ಆಧರಿಸಿ, ಮಣಿಪುರ ಪೊಲೀಸರೊಂದಿಗೆ ಭದ್ರತಾ ಪಡೆಗಳು ಕುಲ್ಜಾಂಗ್ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ್ದು, ಐಇಡಿಗಳನ್ನು ವಶಕ್ಕೆ ಪಡೆದು, ಬಾಂಬ್ ನಿಷ್ಕ್ರಿಯ ದಳದ ಮೂಲಕ ಐಇಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಧಿಕೃತ ಮಾಹಿತಿ ದೊರೆತಿದೆ.

ಸುಗ್ನು - ಜೂಪಿ ರಸ್ತೆಯಲ್ಲಿ ಜನರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ, ಐಇಡಿ ಸ್ಥಾಪನೆ ಮಾಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಇಂದಿರಾಗಾಂಧಿ ಸೆಂಟರ್ ಫಾರ್​ ಅಟಾಮಿಕ್ ರಿಸರ್ಚ್​ನ ಜೂಪಿ ಮತ್ತು ಫುಂಡೇರಿ ಬೆಟಾಲಿಯನ್​ಗಳೂ ಭಾಗವಹಿಸಿದ್ದವು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತಂದೆ - ತಾಯಿ, ಬಂಧು - ಬಳಗ ಯಾರೂ ಇಲ್ಲ.. ತಂಗಿಯ ಶವದ ಜೊತೆ ನಾಲ್ಕು ದಿನ ಕಳೆದ ಅಕ್ಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.