ETV Bharat / bharat

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್​ ವೈರಸ್​ ಪತ್ತೆ.. ದೇಶದಲ್ಲಿಯೇ 2ನೇ ಕೇಸ್​ - ಕೇರಳದಲ್ಲಿ ಮಂಕಿಪಾಕ್ಸ್​ ವೈರಸ್​ ಪತ್ತೆ

ಕೇರಳದಲ್ಲಿ ಮತ್ತೊಂದು ​ಮಂಕಿಪಾಕ್ಸ್​ ಪ್ರಕರಣ ದೃಢಪಟ್ಟಿದೆ. ವಿದೇಶದಿಂದ ಬಂದು ಮಂಗಳೂರು ಮೂಲಕ ಕಣ್ಣೂರಿಗೆ ತೆರಳಿದ್ದ ವ್ಯಕ್ತಿಯಲ್ಲಿ ಈ ವೈರಸ್​ ಪತ್ತೆಯಾಗಿದೆ.

ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್​ ವೈರಸ್​ ಪತ್ತೆ

author img

By

Published : Jul 18, 2022, 4:13 PM IST

ತಿರುವನಂತಪುರಂ: ಯುಎಇಯಿಂದ ಬಂದಿದ್ದ ಕೇರಳದ ವ್ಯಕ್ತಿಯಲ್ಲಿ ಆಫ್ರಿಕಾ ವೈರಸ್​ ಮಂಕಿಪಾಕ್ಸ್​ ಪತ್ತೆಯಾದ ಬೆನ್ನಲ್ಲೇ ಇನ್ನೊಬ್ಬ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ವಿದೇಶಕ್ಕೆ ತೆರಳಿದ್ದ ಈ ವ್ಯಕ್ತಿ ಕರ್ನಾಟಕದ ಮಂಗಳೂರಿನಿಂದ ಕೇರಳದ ಕಣ್ಣೂರಿಗೆ ಆಗಮಿಸಿದ್ದಾನೆ. ಈ ವೇಳೆ, ನಡೆಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್​ ಗುಣಲಕ್ಷಣಗಳು ಕಂಡು ಬಂದಿವೆ.

ಬಳಿಕ ಮಾದರಿಗಳನ್ನು ಸಂಗ್ರಹಿಸಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಅದು ಪಾಸಿಟಿವ್​ ಆಗಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದು ದೇಶದ ಎರಡನೇ ಮಂಕಿಪಾಕ್ಸ್​ ಪ್ರಕರಣವಾಗಿದೆ. ಈ ವೈರಸ್​ ಈಗಾಗಲೇ ವಿಶ್ವದ 27 ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಕೊರೊನಾದಂತೆ ಆತಂಕ ಉಂಟು ಮಾಡಿದೆ.

ಓದಿ: ಪಾರ್ಸಿ ಜನಸಂಖ್ಯೆ ಹೆಚ್ಚಿಸಲು ಸರ್ಕಾರದ ಯತ್ನ: ಡೇಟಿಂಗ್, ವಿವಾಹ ಸಮಾಲೋಚನೆಗೆ ಒತ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.