ಶೋಪಿಯಾನ್ (ಜಮ್ಮು ಕಾಶ್ಮೀರ): ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ನಾಲ್ವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಹತರಾದ ಉಗ್ರರು ನಿಷೇಧಿತ ಜೆಇಎಂ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶೋಪಿಯಾನ್ ಜಿಲ್ಲೆಯ ಮೊಲು ಏರಿಯಾದಲ್ಲಿ ಓರ್ವ ಮತ್ತು ಡ್ರಾಚ್ ಏರಿಯಾದಲ್ಲಿ ಮೂವರು ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಬುಧವಾರ ಭದ್ರತಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದು, ಎನ್ಕೌಂಟರ್ನಲ್ಲಿ ಉಗ್ರರನ್ನು ಯೋಧರು ಬೇಟೆಯಾಡಿದ್ದಾರೆ.
ನಿಷೇಧಿತ ಜೆಇಎಂ ಉಗ್ರ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದ ಮೂವರು ಸ್ಥಳೀಯ ಉಗ್ರರು ಎನ್ಕೌಂಟರ್ನಲ್ಲಿ ಹತರಾಗಿದ್ದಾರೆ ಎಂದು ಎಂದು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಹತರಾದವರಲ್ಲಿ ಹನಾನ್ ಬಿನ್ ಯಾಕೂಬ್ ಮತ್ತು ಜಮ್ಸೆದ್ ಎಂಬ ಇಬ್ಬರು ಪುಲ್ವಾಮಾದಲ್ಲಿ ಎಸ್ಪಿಒ ಜಾವೇದ್ ಮತ್ತು ಪಶ್ಚಿಮ ಬಂಗಾಳ ಕಾರ್ಮಿಕನ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ಗಡಿ ರಾಜ್ಯದಲ್ಲಿ ಸರಣಿ ಎನ್ಕೌಂಟರ್ಗಳು ನಡೆಯುತ್ತಲೇ ಇವೆ.