ಚಮೋಲಿ(ಉತ್ತರಾಖಂಡ): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಕೆಲವೊಂದು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಾನಿಯಾಗಿದೆ.
ಇದರ ಮಧ್ಯೆ ಲಂಬಗರ್ ನದಿಯಲ್ಲಿ ಸಿಲುಕಿದ್ದ ನಾಲ್ವರನ್ನ ಎಸ್ಡಿಆರ್ಎಫ್ ಪಡೆ ರಕ್ಷಣೆ ಮಾಡಿದೆ. ಕಾಡಿನಲ್ಲಿ ಮೇವು ತೆಗೆದುಕೊಂಡು ಬರುವ ಉದ್ದೇಶದಿಂದ ಅವರು ತೆರಳಿದ್ದರು. ಆದರೆ, ಏಕಾಏಕಿ ನದಿಯಲ್ಲಿ ಪ್ರವಾಹ ಹೆಚ್ಚಾಗಿರುವ ಕಾರಣ ತೊಂದರೆಗೊಳಗಾಗಿದ್ದಾರೆ. ಈ ವೇಳೆ, ಎಸ್ಡಿಆರ್ಎಫ್ನ ಸೈನಿಕರು ಹಗ್ಗಗಳ ಸಹಾಯದಿಂದ ಅವರ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ 100 ರಲ್ಲಿ 7 ಮಂದಿ ಮಾತ್ರ ಮಾಸ್ಕ್ಗಳನ್ನು ಸರಿಯಾಗಿ ಧರಿಸುತ್ತಾರೆ: ಸಮೀಕ್ಷೆ
ಇವರು ಮೇವು ತೆಗೆದುಕೊಂಡು ಬರಲು ಅರಣ್ಯಕ್ಕೆ ಹೋಗುತ್ತಿದ್ದ ವೇಳೆ ವೇಳೆ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಆದರೆ, ದಿಢೀರ್ ಆಗಿ ಮಳೆ ಸುರಿದ ಪರಿಣಾಮ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.