ETV Bharat / bharat

'ವಿಜ್ಞಾನ ಸುಳ್ಳು ಹೇಳಲ್ಲ,ಮೋದಿ ಹೇಳ್ತಾರೆ': ಕೋವಿಡ್ ಸಾವಿನ ವಿಚಾರವಾಗಿ ರಾಹುಲ್ ವಾಗ್ದಾಳಿ

author img

By

Published : May 6, 2022, 12:36 PM IST

ಕೋವಿಡ್​ನಿಂದಾಗಿ ಭಾರತದಲ್ಲಿ 47 ಲಕ್ಷ ಜನ ಸಾವನ್ನಪ್ಪಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವಿಚಾರವನ್ನಿಟ್ಟುಕೊಂಡು ರಾಹುಲ್​ ಗಾಂಧಿ ಕೇಂದ್ರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

Rahul Gandhi on WHO Covid death numbers
Rahul Gandhi on WHO Covid death numbers

ನವದೆಹಲಿ: ಮಹಾಮಾರಿ ಕೋವಿಡ್​​ನಿಂದಾಗಿ ಭಾರತದಲ್ಲಿ 47 ಲಕ್ಷ ಜನರು ಸಾವನ್ನಪ್ಪಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿತ್ತು. ಇದೇ ಕುರಿತಾಗಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

  • 47 lakh Indians died due to the Covid pandemic. NOT 4.8 lakh as claimed by the Govt.

    Science doesn't LIE. Modi does.

    Respect families who've lost loved ones. Support them with the mandated ₹4 lakh compensation. pic.twitter.com/p9y1VdVFsA

    — Rahul Gandhi (@RahulGandhi) May 6, 2022 " class="align-text-top noRightClick twitterSection" data=" ">

ಟ್ವೀಟ್ ಮಾಡಿರುವ ಅವರು, ಕೋವಿಡ್‌ನಿಂದ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಸರ್ಕಾರ ಹೇಳಿಕೊಂಡಿರುವಂತೆ ಕೇವಲ 4.8 ಲಕ್ಷ ಮಂದಿಯಲ್ಲ. ವಿಜ್ಞಾನ ಸುಳ್ಳು ಹೇಳಲ್ಲ, ಮೋದಿ ಹೇಳ್ತಾರೆ. ಪ್ರೀತಿ ಪಾತ್ರರನ್ನು ಕಳೆದುಕೊಂಡವರನ್ನು ಗೌರವಿಸಿ, ಅವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 'ಭಾರತದಲ್ಲಿ 47 ಲಕ್ಷ ಕೋವಿಡ್ ಸಾವು': WHO ವರದಿ ತಿರಸ್ಕರಿಸಿದ ಭಾರತ

WHO ಗುರುವಾರ ಬಿಡುಗಡೆಯಾದ ವರದಿಯಲ್ಲಿ 2020ರ ಜನವರಿ ಮತ್ತು 2021ರ ಡಿಸೆಂಬರ್ ನಡುವೆ ಭಾರತದಲ್ಲಿ ಕೋವಿಡ್ ಸೋಂಕಿನಿಂದ 4.7 ಮಿಲಿಯನ್​ಗೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿತ್ತು. ಆದರೆ, ಈ ವಿಚಾರವನ್ನು ಕೇಂದ್ರ ಸರ್ಕಾರ ಅಲ್ಲಗಳೆದು, ಇದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿರುವುದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚು ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.