ಮಹಾರಾಷ್ಟ್ರ: ಜಲ್ಗಾಂವ್ ಜಿಲ್ಲೆಯ ತುಕಾರಂವಾಡಿಯಲ್ಲಿ ಮಂಗಳವಾರ ಶಾಲಾ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಚಿತ್ರ ಸಂಗತಿ ಎಂದರೆ ವಿದ್ಯಾರ್ಥಿ ಸಾಯುವ ಮುನ್ನ ಮೊಬೈಲ್ನಲ್ಲಿ ಸಾವಿಗೆ ಸಂಬಂಧಿಸಿದ ಮಾಹಿತಿ ಹುಡುಕಿದ್ದಾನೆ. ಅವನ ಮೊಬೈಲ್ ಇತಿಹಾಸವನ್ನು ಹುಡುಕಿದಾಗ ಈ ವಿಷಯ ಹೊರ ಬಂದಿದೆ.
ಹರ್ಷಲ್ ದೀಪಕ್ ಕುನ್ವಾರ್(13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆತ ಶಾಲೆಗಳು ಆರಂಭವಾಗದ ಕಾರಣ ಚಿಕ್ಕಪ್ಪನ ಮನೆಗೆ ಬಂದಿದ್ದ. ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಓದಿ:ರಾಜಸ್ಥಾನದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಘಟನೆಯ ಬಗ್ಗೆ ಮಾಹಿತಿ ಪಡೆದ ಎಂಐಡಿಸಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿಶಾಲ್ ಸೋನವಾನೆ ಮತ್ತು ಅವರ ಸಿಬ್ಬಂದಿ ಸ್ಥಳಕ್ಕೆ ಬಂದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಸಾವಿನ ಕಾರಣ ಏನು ಎಂಬುದರ ಬಗ್ಗೆ ಮಾಹಿತಿ ತಿಳಿದಿಲ್ಲ.