ನವದೆಹಲಿ: ಸದ್ಯ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧುಗೆ ಸಂಕಷ್ಟ ಎದುರಾಗಿದೆ. 1988ರಲ್ಲಿ ಪಂಜಾಬ್‌ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಸಿಧು ಅವರಿಗೆ ಕೇವಲ 1,000 ರೂ. ದಂಡ ವಿಧಿಸಿದ್ದ ಆದೇಶ ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯು ಸುಪ್ರೀಂಕೋರ್ಟ್ನಲ್ಲಿ ನಾಳೆ ನಡೆಯಲಿದೆ. ಘಟನೆಯಲ್ಲಿ ಪಟಿಯಾಲದ ನಿವಾಸಿಯೊಬ್ಬರು ಮೃತಪಟ್ಟಿದ್ದು, ಈ ಸಂಬಂಧ 2018ರ ಮೇ 15ರಂದು ತೀರ್ಪು ಹೊರಬಿದ್ದಿತ್ತು.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಸಂಜಯ್ ಕಿಶನ್ ಕೌಲ್ ಅವರು ಅರ್ಜಿ ವಿಚಾರಣೆ ನಡೆಸಲಿದ್ದು, ಸಂತ್ರಸ್ತ ಗುರ್ನಾಮ್ ಸಿಂಗ್ ಅವರ ಕುಟುಂಬವು ಆದೇಶ ಮರುಪರಿಶೀಲನೆಗೆ ಮನವಿ ಮಾಡಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಿಧು ವಿರುದ್ಧದ ಆರೋಪವು ನರಹತ್ಯೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದಿದ್ದ ಸುಪ್ರೀಂಕೋರ್ಟ್ ದಂಡ ವಿಧಿಸಿ ಕೈಬಿಟ್ಟಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323ರ ಅಡಿ ಪ್ರಕರಣ ದಾಖಲಾಗಿದ್ದರೂ ಕೂಡ ಕೇವಲ ದಂಡ ವಿಧಿಸಲಾಗಿತ್ತು.
ಘಟನೆಯು 30 ವರ್ಷಗಳಿಗಿಂತ ಹಿಂದೆ ನಡೆದಿದ್ದು, ಅಲ್ಲದೆ ಆರೋಪಿ ಮತ್ತು ಸಂತ್ರಸ್ತರ ಕುಟುಂಬದ ನಡುವೆ ಯಾವುದೇ ಹಳೆ ದ್ವೇಷವಿರಲಿಲ್ಲ. ಘಟನೆ ವೇಳೆ ಆರೋಪಿಗಳು ಯಾವುದೇ ಆಯುಧ ಬಳಸಿಲ್ಲ ಎಂಬುದನ್ನು ಸುಪ್ರೀಂ ಪರಿಗಣಿಸಿತ್ತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ಮೂರು ವರ್ಷಗಳ ಜೈಲು ಶಿಕ್ಷೆ ಆದೇಶವನ್ನು ಕೂಡ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ವೈದ್ಯಕೀಯ ದಾಖಲೆ ಸೇರಿದಂತೆ ಎಲ್ಲ ಪುರಾವೆಗಳನ್ನು ಪರಿಶೀಲಿಸಿದ ಬಳಿಕ ಸಿಧು ಅವರನ್ನು ತಪ್ಪಾಗಿ ದೋಷಿ ಎಂದು ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಇದನ್ನೂ ಓದಿ: ಬಿಎಸ್‌ವೈ ಯುಗ ಅಂತ್ಯವಾಗಿದೆ, ಇನ್ನೂ ಮೂರ್ನಾಲ್ಕು ಜನರ ಯುಗ ಮುಗಿಯಲಿದೆ : ಶಾಸಕ ಯತ್ನಾಳ್