ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಈಗಾಗಲೇ ಮುಕ್ತಾಯವಾಗಿದ್ದು, ಮಾರ್ಚ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಮತ ಎಣಿಕೆ ಮಾಡುವುದಕ್ಕೂ ಮುನ್ನ VVPAT ಪರಿಶೀಲನೆ ಮಾಡುವಂತೆ ಸಲ್ಲಿಕೆ ಮಾಡಲಾಗಿರುವ ಮನವಿ ವಿಚಾರಣೆ ನಾಳೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
EVM ಮತಗಳ ಎಣಿಕೆಯ ಕೊನೆಯಲ್ಲಿ ಪರಿಶೀಲನೆ ನಡೆಸುವ ಬದಲಿಗೆ ಎಣಿಕೆ ಆರಂಭವಾಗುವುದಕ್ಕೂ ಮೊದಲು VVPAT ಪರಿಶೀಲನೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ PIL ಸಲ್ಲಿಕೆಯಾಗಿದ್ದು, ನಾಳೆ ಅದರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ವಿವಿಪ್ಯಾಟ್ಗಳ ಪರಿಶೀಲನೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ನಡೆಸಲು ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್ ನಾಳೆ ಅರ್ಜಿ ವಿಚಾರಣೆ ನಡೆಸಲಿದೆ.
ಇಷ್ಟು ದಿನ ಮತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಹಿರಿಯ ವಕೀಲ ಮೀನಾಕ್ಷಿ ಆರೋರಾ ಹೇಳಿದ್ದಾರೆ. ಆದರೆ, ಎತ ಎಣಿಕೆ ಮುಗಿದ ನಂತರ ವಿವಿಪ್ಯಾಟ್ ಪರಿಶೀಲನೆಯಾಗುವ ವೇಳೆಗೆ ಎಲ್ಲ ಚುನಾವಣಾ ಎಜೆಂಟ್ಗಳು ತೆರಳುವ ಕಾರಣ ಅದರಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಇರಲ್ಲ ಎಂದು ಅರೋರಾ ತಿಳಿಸಿದ್ದಾರೆ.
ಇದನ್ನೂ ಓದಿರಿ: ಯುಪಿ ಮತ್ತೆ BJPಗೆ, AAP ಕೈಗೆ ಪಂಜಾಬ್: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೀಗಿದೆ..
ವಿವಿಪ್ಯಾಟ್ ಪರಿಶೀಲನೆ ವೇಳೆ ಲೋಪದೋಷಗಳು ಕಂಡುಬಂದಲ್ಲಿ, ಪ್ರತಿ ವಿಧಾನಸಭೆ ಕ್ಷೇತ್ರದ ಎಲ್ಲ ಮತ ಗಟ್ಟೆಗಳ ಶೇ.100 ರಷ್ಟು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿ ನಂತರ ಅವುಗಳನ್ನು ವಿದ್ಯುನ್ಮಾನ ಮತಯಂತ್ರದ ಜತೆ ತುಲನೆ ಮಾಡಬೇಕು ಎಂದು ಈಗಾಗಲೇ ವಿವಿಧ ಪಕ್ಷಗಳು ಸಹ ಒತ್ತಾಯ ಮಾಡಿವೆ.