ETV Bharat / bharat

ಜಾರ್ಖಂಡ್​ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ​ಗೆ ಮತ್ತೊಂದು ಕಂಟಕ.. ಭೂ ಅಕ್ರಮ ಹಂಚಿಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಗಣಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ಒಪ್ಪಿಕೊಂಡಿದೆ. ಜಾರ್ಖಂಡ್​ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್​ ಬಂಧನದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದ್ದು, ಮಹತ್ವ ಪಡೆದುಕೊಂಡಿದೆ.

sc-to-hear-plea
ಪೂಜಾ ಸಿಂಘಾಲ್​ಗೆ ಮತ್ತೊಂದು ಕಂಟಕ
author img

By

Published : May 12, 2022, 6:58 PM IST

ರಾಂಚಿ(ಜಾರ್ಖಂಡ್​): ಜಾರ್ಖಂಡ್​ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್​ ನರೇಗಾ ಹಣ ದುರ್ಬಳಕೆ ಆರೋಪದ ಮೇಲೆ ಬಂಧನವಾದ ಬಳಿಕ ಇದೀಗ, ಅವರ ವಿರುದ್ಧದ ಭೂಮಿ ಅಕ್ರಮ ಹಂಚಿಕೆ ಪ್ರಕರಣದ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್​ ಒಪ್ಪಿದೆ. ಇದರಿಂದ ಇ.ಡಿ. ಬಂಧನದಲ್ಲಿರುವ ಐಎಎಸ್​ ಅಧಿಕಾರಿಗೆ ಮತ್ತೊಂದು ಕಂಟಕ ಶುರುವಾಗಿದೆ.

ಗಣಿ ಭೂಮಿ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಎಐಟಿಯುಸಿಯ ರಾಜೀವ್ ಕುಮಾರ್ ಎಂಬುವರು 2017ರಲ್ಲಿ ಸುಪ್ರೀಂಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ 2019 ರಲ್ಲಿ ವಿಚಾರಣೆ ನಡೆದಿದ್ದರೂ ಯಾವುದೇ ತೀರ್ಪು ಬಂದಿರಲಿಲ್ಲ. ಇದೀಗ ಮತ್ತೆ ಅರ್ಜಿಯ ವಿಚಾರಣೆಗೆ ಸುಪ್ರೀಂ ದಿನ ನಿಗದಿ ಮಾಡಿದೆ. ಈ ಪ್ರಕರಣದಲ್ಲಿ ಪೂಜಾ ಸಿಂಘಾಲ್​ ಅಲ್ಲದೇ, ಮಾಜಿ ಮುಖ್ಯ ಕಾರ್ಯದರ್ಶಿ ರಾಜಬಾಲಾ ವರ್ಮಾ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಭಾಗಿಯಾದ ಶಂಕೆಯೂ ವ್ಯಕ್ತವಾಗಿದೆ.

ಪ್ರಕರಣ ಏನು?: ಕಲ್ಲಿದ್ದಲು ಗಣಿಗಳಿಗಾಗಿ 165 ಎಕರೆ ಭೂಮಿಯನ್ನು ಹಂಚಿಕೆ ಮಾಡಲಾಗಿತ್ತು. ಗಣಿಗಾರಿಕೆಗೆ ಮಂಜೂರಾದ ಭೂಮಿಯಲ್ಲಿ ಅರಣ್ಯ ಭೂಮಿ ಮತ್ತು ಭೂದಾನ ಭೂಮಿ ಸೇರಿತ್ತು. ಭೂ ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಎಐಟಿಯುಸಿಯ ರಾಜೀವ್​​ ಕುಮಾರ್ 2015ರಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ರಾಜ್ಯಪಾಲರು ಕಂದಾಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಕಾರ್ಯದರ್ಶಿಗೆ ತನಿಖೆಯ ಜವಾಬ್ದಾರಿಯನ್ನು ನೀಡಿದ್ದರು. ತನಿಖೆಯ ಬಳಿಕ ಮಂಜೂರಾದ ಭೂಮಿಗೆ ಸಂಬಂಧಿಸಿದಂತೆ ಹಲವು ಅವ್ಯವಹಾರಗಳ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇದರಲ್ಲಿ ಪೂಜಾ ಸಿಂಘಾಲ್, ಜಿಲ್ಲಾ ಭೂಸ್ವಾಧೀನಾಧಿಕಾರಿ ಉದಯ್ ಕಾಂತ್ ಪಾಠಕ್, ಪಾಡ್ವಾ ಸಿಒ ಅಲೋಕ್ ಕುಮಾರ್ ಮತ್ತಿತರರು ತಪ್ಪಿತಸ್ಥರೆಂದು ವರದಿ ಹೇಳಿತ್ತು.

ಸರ್ಕಾರ ಈ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಎಲ್ಲರಿಗೂ ಕ್ಲೀನ್ ಚಿಟ್ ನೀಡಿತ್ತು. ನಂತರ ರಾಜೀವ್​ ಕುಮಾರ್ 2016 ರಲ್ಲಿ ಈ ವಿಚಾರವಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್, ಕುಮಾರ್‌ಗೆ 50 ಸಾವಿರ ರೂ. ದಂಡ ಹಾಕಿತ್ತು. ಇದನ್ನು ಪ್ರಶ್ನಿಸಿ ರಾಜೀವ್​ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂಕೋರ್ಟ್​ ಅರ್ಜಿ ವಿಚಾರಣೆಗೆ ದಿನ ನಿಗದಿ ಮಾಡಿದೆ.

ಓದಿ: ಕೋಟ್ಯಂತರ ರೂ. ನರೇಗಾ ಹಣ ದುರ್ಬಳಕೆ ಪ್ರಕರಣ.. ಜಾರ್ಖಂಡ್​ ಗಣಿ ಕಾರ್ಯದರ್ಶಿ ಇ.ಡಿ. ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.