ETV Bharat / bharat

ಮನೀಶ್ ಕಶ್ಯಪ್ ಪ್ರಕರಣದ ವಿಚಾರಣೆಯನ್ನು ಮೇ 1ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ತಮಿಳುನಾಡಿನಲ್ಲಿ ಬಿಹಾರ ಮೂಲದ ಕಾರ್ಮಿಕರ ಮೇಲಿನ ಹಲ್ಲೆ ವಿಡಿಯೋ ವೈರೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಯೂಟ್ಯೂಬರ್ ಮನೀಷ್ ಕಶ್ಯಪ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಮೇ 1ಕ್ಕೆ ಮುಂದೂಡಿದೆ.

author img

By

Published : Apr 29, 2023, 6:30 AM IST

bihar YouTuber Manish Kashyap
ಮನೀಶ್ ಕಶ್ಯಪ್

ಪಾಟ್ನಾ (ಬಿಹಾರ): ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು. ಮನೀಶ್​ಗೆ ಪರಿಹಾರ ನೀಡುವಂತೆ ಮನೀಶ್ ಕಶ್ಯಪ್ ಪರ ವಕೀಲರು ಮನವಿ ಮಾಡಿದರು. ಪೊಲೀಸರು ಮನೀಶ್ ಕಶ್ಯಪ್ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ವಿಧಿಸಿದ್ದು, ಈ ಸಂಬಂಧ ಕೋರ್ಟ್,​ ತಮಿಳುನಾಡು ಸರ್ಕಾರಕ್ಕೆ ನೋಟಿಸ್​ ನೀಡಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ.

ವಿಚಾರಣೆ ಮೇ 1ಕ್ಕೆ ಮುಂದೂಡಿಕೆ: ರಾಷ್ಟ್ರೀಯ ಭದ್ರತಾ ಕಾಯ್ದೆ ವಿಧಿಸಲು ಸರ್ಕಾರದಿಂದ ಆಧಾರವನ್ನು ಕೇಳಲಾಗಿದೆ. ಮತ್ತೊಂದೆಡೆ, ಮನೀಶ್ ಕಶ್ಯಪ್ ತಮ್ಮ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಒಟ್ಟುಗೂಡಿಸಿ ಒಂದೇ ಸ್ಥಳದಲ್ಲಿ ವಿಚಾರಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮಹತ್ವದ ವಿಚಾರಣೆಯನ್ನು ಮೇ 1ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ: ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ದೋಷಿ, 200 ರೂಪಾಯಿ ದಂಡ

ತಮಿಳುನಾಡು ಸರ್ಕಾರಕ್ಕೆ ನೋಟಿಸ್ ನೀಡಿತ್ತು ಸುಪ್ರೀಂ: ಏಪ್ರಿಲ್ 5ರಂದು ಮನೀಷ್ ಕಶ್ಯಪ್ ಪರವಾಗಿ ವಕೀಲ ಎಪಿ ಸಿಂಗ್ ಅರ್ಜಿ ಸಲ್ಲಿಸಿದ್ದರು. ಬಿಹಾರದ ಎಲ್ಲಾ ಪ್ರಕರಣಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಏಕೆಂದರೆ ಎಲ್ಲಾ ವಿಷಯಗಳ ಹಿಂದಿನ ಕಾರಣ ಒಂದೇ. ತಮಿಳುನಾಡಿನಲ್ಲಿ ವಲಸಿಗ ಬಿಹಾರಿಗಳನ್ನು ಥಳಿಸಿರುವ ನಕಲಿ ವೀಡಿಯೊವನ್ನು ವೈರಲ್ ಮಾಡುವುದು ವಿಷಯ ಆಗಿದೆ. ಈ ಹಿಂದೆ, ಯೂಟ್ಯೂಬರ್ ಮನೀಶ್ ಕಶ್ಯಪ್‌ಗೆ ಬಿಗ್ ರಿಲೀಫ್ ನೀಡಿದ್ದ ಸುಪ್ರೀಂ ಕೋರ್ಟ್, ಅವರ ಮೇಲೆ ಎನ್‌ಎಸ್‌ಎ ಏಕೆ ಹೇರಲಾಗಿದೆ ಎಂದು ಕೇಳಿ ತಮಿಳುನಾಡು ಸರ್ಕಾರಕ್ಕೆ ನೋಟಿಸ್ ನೀಡಿತ್ತು.

ಇದನ್ನೂ ಓದಿ: ಇಂಟರ್​ ಎಕ್ಸಾಂ ರಿಸಲ್ಟ್​ ಔಟ್​.. ರಾಜ್ಯಾದ್ಯಂತ 9 ವಿದ್ಯಾರ್ಥಿಗಳ ಆತ್ಮಹತ್ಯೆ!

ಮನೀಶ್ ಕಶ್ಯಪ್ ಪರ ವಕೀಲ ಸಿದ್ಧಾರ್ಥ್ ದವೆ ಮನವಿ: ಯೂಟ್ಯೂಬರ್ ಮನೀಶ್ ಕಶ್ಯಪ್ ಅವರನ್ನು ಮಧುರೈ ಜೈಲಿನಿಂದ ಬೇರೆ ಜೈಲಿಗೆ ಕರೆದೊಯ್ಯದಂತೆ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಹೇಳಿದೆ. ಏಕೆಂದರೆ, ಮನೀಶ್ ವಿರುದ್ಧ ರಾಜ್ಯದಲ್ಲಿ ಅನೇಕ ಎಫ್‌ಐಆರ್‌ಗಳು ದಾಖಲಾಗಿವೆ. ಮನೀಶ್ ಕಶ್ಯಪ್ ಅವರ ವಕೀಲ ಸಿದ್ಧಾರ್ಥ್ ದವೆ ಅವರು, ತಮ್ಮ ಕಕ್ಷಿದಾರರ ವಿರುದ್ಧ ಎನ್‌ಎಸ್‌ಎ ಜಾರಿಗೊಳಿಸಲಾಗಿದೆ ಮತ್ತು ತಮಿಳುನಾಡಿನಲ್ಲಿ ಮನೀಶ್ ಕಶ್ಯಪ್ ವಿರುದ್ಧ ಆರು ಎಫ್‌ಐಆರ್‌ಗಳು ಹಾಗೂ ಬಿಹಾರದಲ್ಲಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲಾ ಪ್ರಕರಣಗಳು ಒಂದೇ ಸ್ವರೂಪದ್ದಾಗಿರುವುದರಿಂದ ಅವರ ಪ್ರಕರಣವನ್ನು ಬಿಹಾರ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರಿದ್ದ ಪೀಠಕ್ಕೆ ಅರ್ಜಿ ಸಲ್ಲಿಸಿ, ಮನವಿ ಮಾಡಿದ್ದರು.

ಇದನ್ನೂ ಓದಿ: ಪತ್ನಿಯನ್ನು ತುಂಡರಿಸಿ ಮುಂಡವನ್ನು ಸುಡಲು ಯತ್ನಿಸಿದ ಪತಿ.. ರುಂಡ, ಕೈಗಳನ್ನು ಪತ್ತೆ ಹಚ್ಚಿದ ಪೊಲೀಸರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.