ETV Bharat / bharat

ರೈಲ್ವೆ ಭೂಮಿ ಒತ್ತುವರಿ ತೆರವು ಆದೇಶ: ಉತ್ತರಾಖಂಡ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್​.. ನಿಟ್ಟುಸಿರು ಬಿಟ್ಟ ಜನ! - kannada top news

ಉತ್ತರಾಖಂಡ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ - ಕೆಲವು ಪರಿಹಾರ ಕಂಡುಕೊಳ್ಳಿ - ಇದು ಮಾನವೀಯತೆ ದೃಷ್ಟಿಕೋನದ ಪ್ರಕರಣ ಎಂದ ನ್ಯಾಯಪೀಠ

sc-stays-uttarakhand-hc-order-on-railway-land-eviction-notice
ರೈಲ್ವೆ ಭೂಮಿ ಒತ್ತುವರಿ ನೋಟಿಸ್‌: ಉತ್ತರಾಖಂಡ ಹೈaಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ
author img

By

Published : Jan 5, 2023, 7:52 PM IST

ನವದೆಹಲಿ: ರೈಲ್ವೆ ಭೂಮಿ ಒತ್ತುವರಿ ತೆರವು ನೋಟಿಸ್ ಕುರಿತು ಉತ್ತರಾಖಂಡ ಹೈಕೋರ್ಟ್ ಹೊರಡಿಸಿದ ಆದೇಶಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. ಹಲ್ದ್ವಾನಿಯ ಬನ್‌ಭೂಲ್‌ಪುರ ಪ್ರದೇಶದಲ್ಲಿ ಇರುವ ರೈಲ್ವೆ ಇಲಾಖೆ ಜಾಗದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್‌ನ ಅಧಿಕಾರಿಗಳು ಆದೇಶಿಸಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಕುರಿತು ಸುಪ್ರೀಂಕೋರ್ಟ್ ಉತ್ತರಾಖಂಡ ಸರ್ಕಾರ ಮತ್ತು ಭಾರತೀಯ ರೈಲ್ವೆಗೆ ನೋಟಿಸ್ ಜಾರಿ ಮಾಡಿದೆ. ಹಾಗೇ ಫೆಬ್ರವರಿ 7 ರಂದು ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದೆ.

ಜೊತೆಗೆ, 50,000 ಜನರನ್ನು ರಾತ್ರೋರಾತ್ರಿ ಎತ್ತಂಗಡಿ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಸುಪ್ರೀಂಕೊರ್ಟ್, ಹೈಕೋರ್ಟ್​ ಆದೇಶಕ್ಕೆ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ "ಅಲ್ಲಿ ವಾಸಿಸುತ್ತಿದ್ದ ಜನರಿಗೆ ನಾವು ಮೊದಲೇ ಇದು ಭಾರತೀಯ ರೈಲ್ವೆಗೆ ಸೇರಿದ ಜಾಗ ಎಂದು ಹೇಳಿದ್ದೆವು, ಈಗ ನ್ಯಾಯಾಲಯದ ಆದೇಶದ ಪ್ರಕಾರ ನಾವು ಮುಂದುವರಿಯುತ್ತೇವೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

1947 ರಿಂದ ಅಲ್ಲಿ ವಾಸವಾಗಿದ್ದವರನ್ನು ವಾರದಲ್ಲಿ ಹೇಗೆ ಖಾಲಿ ಮಾಡಿಸುತ್ತೀರಿ?: ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು ಕಳೆದ ಡಿಸೆಂಬರ್ 20 ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ವಿಶೇಷ ರಜೆ ಅರ್ಜಿಗಳ ವಿಚಾರಣೆ ನಡೆಸಿ, ಉತ್ತರಾಖಂಡ ರಾಜ್ಯ ಮತ್ತು ರೈಲ್ವೆಗೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಎರಡು ಸಮಸ್ಯೆಗಳಿವೆ. ಒಂದನೆಯದ್ದು, ತೆರವುಗೊಂಡ ಜನರು ಆ ಜಾಗದ ಗುತ್ತಿಗೆಯ ಹಕ್ಕುದಾರರಾಗಿದ್ದಾರೆ.

ಎರಡನೇಯದಾಗಿ, ಅವರು ಭಾರತಕ್ಕೆ 1947ರ ನಂತರ ವಲಸೆ ಬಂದವರು ಎಂದು ಹೇಳಿಕೊಂಡಿದ್ದಾರೆ. ಆ ಜನರು ಇಷ್ಟು ವರ್ಷಗಳ ಕಾಲ ಅಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಏಳು ದಿನಗಳಲ್ಲಿ ಅವರನ್ನು ತೆರವುಗೊಳಿಸಲು ನೀವು ಹೇಗೆ ಹೇಳುತ್ತೀರಿ?" ಎಂದು ನ್ಯಾಯಮೂರ್ತಿ ಎಸ್‌ಕೆ ಕೌಲ್ ಸರ್ಕಾರ ಮತ್ತು ರೈಲ್ವೆಯನ್ನು ಪ್ರಶ್ನಿಸಿದ್ದಾರೆ.

ಅಲ್ಲಿ ಬೀಡು ಬಿಟ್ಟ ಜನರ ಸ್ಥಳಾಂತರದ ಸನ್ನಿವೇಶವನ್ನು ನೀವು ಹೇಗೆ ನಿಭಾಯಿಸುತ್ತೀರಿ?: "ಹರಾಜಿನಲ್ಲಿ ಭೂಮಿಯನ್ನು ಖರೀದಿಸಿದ ಜನರ ಸನ್ನಿವೇಶವನ್ನು ನೀವು ಹೇಗೆ ಎದುರಿಸುತ್ತೀರಿ ಮತ್ತು ನೀವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ಅದನ್ನು ಬಳಸಿಕೊಳ್ಳಬಹುದು. ಆದರೆ, 50-60 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಜನರು, ಇದು ರೈಲ್ವೆ ಭೂಮಿ ಎಂದು ಗೊತ್ತಿದ್ದರೂ ಕೆಲವು ಪುನರ್ವಸತಿ ಯೋಜನೆಗಳನ್ನು ರೂಪಿಸಿಕೊಂಡಿದ್ದು ಏಕೆ, ಇದಕ್ಕೆ ಕಾರಣರಾದವರು ಯಾರು ಎಂದು ರೈಲ್ಬೆ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರವನ್ನು ಪ್ರಶ್ನಿಸಿದೆ. ''ಹಾಗೆಯೇ ಇದರಲ್ಲಿ ಮಾನವೀಯ ದೃಷ್ಟಿಕೋನವಿದೆ, ಕೆಲವು ಪರಿಹಾರವನ್ನು ಕಂಡುಕೊಳ್ಳಿ. ಇದು ಮಾನವ ಸಮಸ್ಯೆ" ಎಂದು ರೈಲ್ವೆ ಇಲಾಖೆಗೆ ನ್ಯಾಯಮೂರ್ತಿ ಓಕಾ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಲ್ದ್ವಾನಿಯಲ್ಲಿ 5,000 ಕ್ಕೂ ಹೆಚ್ಚು ಮನೆಗಳನ್ನು ಅತಿಕ್ರಮಣದ ಹೆಸರಿನಲ್ಲಿ ಕೆಡವಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ತೀವ್ರತೆಯನ್ನು ಗಮನಿಸಿದ ಸುಪ್ರೀಂಕೋರ್ಟ್​, ಅರ್ಜಿ ವಿಚಾರಣೆಗೆ ಅನುಮತಿ ನೀಡಿತ್ತು. ಇದಕ್ಕೂ ಮೊದಲು ತೆರವುಗೊಳಿಸುವ ವಿಚಾರವಾಗಿ ಕೆಲವು ಹಲ್ದ್ವಾನಿ ನಿವಾಸಿಗಳು ಸುಪ್ರೀಂಕೋರ್ಟ್​​ಗೆ ಉತ್ತರಾಖಂಡ್​ ಹೈಕೋರ್ಟ್​ ನೀಡಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಬಂಭೂಲಪುರ ಪಟ್ಟಣ ಪ್ರದೇಶದಲ್ಲಿ 29 ಎಕರೆ ರೈಲ್ವೆ ಭೂಮಿ ಒತ್ತುವರಿದಾರರಿಗೆ ಒಂದು ವಾರದ ಮುಂಗಡ ಸೂಚನೆ ನೀಡಿ ನಿವಾಸಗಳನ್ನು ತೆರವುಗೊಳಿಸುವಂತೆ ಉತ್ತರಾಖಂಡ ಹೈಕೋರ್ಟ್ ಡಿಸೆಂಬರ್ 20 ರಂದು ಆದೇಶ ನೀಡಿತ್ತು. ಕೋರ್ಟ್​ನ​ ಆದೇಶವನ್ನು ವಿರೋಧಿಸಿದ ಬಂಭೂಲಪುರದ ಸಾವಿರಾರು ನಿವಾಸಿಗಳು ಪ್ರತಿಭಟನೆ ನಡೆಸಿದ್ದರು. ಇದರಿಂದ ತೆರವುಗೊಳಿಸಿದರೆ ನಿರಾಶ್ರಿತರಾಗುತ್ತೇವೆ ಮತ್ತು ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ವಿಮಾನದಲ್ಲಿ ಮತ್ತೊಂದು ಮೂತ್ರ ವಿಸರ್ಜನೆ ಕೇಸ್​.. ಮಹಿಳೆಯ ಹೊದಿಕೆ ಮೇಲೆ ಕುಡಿದ ನಶೆಯಲ್ಲಿ ಯೂರಿನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.