ETV Bharat / bharat

'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆ ತಡೆಗೆ ಸುಪ್ರೀಂ ಕೋರ್ಟ್​ ನಕಾರ - SC refuses to against plea The Kerala Story

ದೊಡ್ಡ ಸದ್ದು ಮಾಡುತ್ತಿರುವ ಲವ್​ ಜಿಹಾದ್​ ಹಿನ್ನೆಲೆಯ ದಿ ಕೇರಳ ಸ್ಟೋರಿ ಸಿನಿಮಾ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಿಚಾರಣೆ ನಡೆಸಲು ತಿರಸ್ಕರಿಸಿದೆ.

ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆ ತಡೆಗೆ ಸುಪ್ರೀಂಕೋರ್ಟ್​ ನಕಾರ

author img

By

Published : May 2, 2023, 12:56 PM IST

ನವದೆಹಲಿ: ಲವ್​ ಜಿಹಾದ್​ ಹಿನ್ನೆಲೆಯಿರುವ "ದಿ ಕೇರಳ ಸ್ಟೋರಿ" ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಇಂದು (ಮಂಗಳವಾರ) ವಜಾ ಮಾಡಿದೆ. ಸಿನಿಮಾ ಸೆನ್ಸಾರ್​ ಮಂಡಳಿಯಿಂದ ಪ್ರಮಾಣಪತ್ರ ಪಡೆದಿದೆ. ಹೀಗಾಗಿ ತಡೆ ನೀಡಲು ಅಸಾಧ್ಯ ಎಂದು ಹೇಳಿದೆ.

ಕೇರಳ ಸ್ಟೋರಿ ಸಿನಿಮಾ ದ್ವೇಷ ಭಾಷಣ ಮತ್ತು ಇದೊಂದು ದೃಶ್ಯ ಮತ್ತು ಶ್ರಾವ್ಯ ಪ್ರಚಾರ ಹುಚ್ಚು ಹೊಂದಿದೆ. ಕೋಮು ಸೌಹಾರ್ದತೆಯನ್ನು ಕೆಡಿಸಲಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಬ್ರೇಕ್​ ಹಾಕಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಮೇ 5 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೆ ಶೀಘ್ರವೇ ತಡೆ ನೀಡಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲ ನಿಜಾಮ್ ಪಾಷಾ ಅವರು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠದ ಮುಂದೆ ಮನವಿ ಮಾಡಿದರು. ಸಿನಿಮಾವು ಅತ್ಯಂತ ಕೆಟ್ಟ ರೀತಿಯ ದ್ವೇಷದ ಭಾಷಣವನ್ನು ಹೊಂದಿದೆ. ಇದು ಸಂಪೂರ್ಣವಾಗಿ ಪ್ರಚಾರದ ಕಾರಣಕ್ಕಾಗಿ ನಿರ್ಮಿಸಲಾಗಿದೆ ಎಂದು ವಕೀಲ ಪಾಷಾ ಅವರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದ್ವೇಷದ ಭಾಷಣಗಳಲ್ಲಿ ವೈವಿಧ್ಯಗಳಿವೆ. ಸಿನಿಮಾ ಬಿಡುಗಡೆಗೆ ಪ್ರಮಾಣಪತ್ರವನ್ನೂ ಪಡೆಯಲಾಗಿದೆ. ಸೆನ್ಸಾರ್​ ಮಂಡಳಿಯಿಂದ ಅನುಮತಿಯೂ ಸಿಕ್ಕಿದೆ. ಒಬ್ಬ ವ್ಯಕ್ತಿ ವೇದಿಕೆಯ ಮೇಲೆ ಬಂದು ಅನಿಯಂತ್ರಿತವಾಗಿ ಭಾಷಣ ಮಾಡಿದಷ್ಟು ಸುಲಭವಲ್ಲ. ಸಿನಿಮಾದ ಬಿಡುಗಡೆಯನ್ನು ಸವಾಲು ಮಾಡಲು ಬಯಸಿದಲ್ಲಿ, ಸೂಕ್ತ ವೇದಿಕೆಯ ಮೂಲಕ ಅದರ ವಿರುದ್ಧ ಸವಾಲು ಹಾಕಬೇಕು ಎಂದು ಹೇಳಿತು.

ಇದಕ್ಕೆ ಹಿರಿಯ ವಕೀಲ ಕಪಿಲ್​ ಸಿಬಲ್, ಸಿನಿಮಾ ವಿರುದ್ಧ ನಾವು ಯಾವ ರೀತಿಯ ಸವಾಲಿಗೂ ಸಿದ್ಧ ಎಂದರು. ಇದಕ್ಕೆ ನ್ಯಾಯಮೂರ್ತಿ ನಾಗರತ್ನ ಅವರು, ನೀವು ಮೊದಲು ಹೈಕೋರ್ಟ್​ನಲ್ಲಿ ತಕರಾರು ಅರ್ಜಿ ಸಲ್ಲಿಸಿ ಎಂದರು. ಶುಕ್ರವಾರವೇ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಅಷ್ಟು ಸಮಯ ಉಳಿದಿಲ್ಲ. ಈಗಲೇ ತಡೆ ನೀಡಬೇಕಿದೆ ಎಂದು ವಕೀಲ ಪಾಷಾ ಹೇಳಿದರು.

ಈ ವೇಳೆ ಪೀಠ, ಯಾವುದೇ ಅರ್ಜಿಗಳು ಬಂದರೂ ಸ್ವೀಕರಿಸಲು ಇದು ಆಟದ ಮೈದಾನವಲ್ಲ. ಯಾವುದೇ ಪ್ರಕರಣದ ವಿರುದ್ಧ ತಕರಾರು ಇದ್ದಲ್ಲಿ ವ್ಯವಸ್ಥಿತವಾಗಿ ಅರ್ಜಿ ಸಲ್ಲಿಸಬೇಕು. ಇದನ್ನು ನಾವೀಗ ಪರಿಗಣಿಸಿದರೆ, ಎಲ್ಲರೂ ಸುಪ್ರೀಂ ಕೋರ್ಟ್‌ಗೆ ಬರಲು ಪ್ರಾರಂಭಿಸುತ್ತಾರೆ'' ಎಂದು ಹೇಳಿತು.

ತುರ್ತು ಅಗತ್ಯದ ಕಾರಣ ದ್ವೇಷ ಭಾಷಣದ ಆಧಾರದ ಮೇಲೆ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲ ಪಾಷಾ ಹೇಳಿದರು. ಈ ವೇಳೆ ನ್ಯಾಯಮೂರ್ತಿ ಜೋಸೆಫ್ ಅವರು ಅರ್ಜಿಯನ್ನು ಸ್ವೀಕರಿಸಲು ಒಪ್ಪದಿದ್ದರೂ, ಇದರ ವಿರುದ್ಧ ರಿಟ್​ ಅರ್ಜಿಯನ್ನು ಸಲ್ಲಿಸುವ ಅಗತ್ಯವಿದೆ ಎಂದು ಹೇಳಿದರು.

ಕೇರಳ ಸ್ಟೋರಿಯ ತಿರುಳೇನು?: ಶುಕ್ರವಾರ(ಏಪ್ರಿಲ್​ 5 ರಂದು) ಬಿಡುಗಡೆಯಾಗಲಿರುವ ದಿ ಕೇರಳ ಸ್ಟೋರಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, 16 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದಿ ಕೇರಳ ಸ್ಟೋರಿ ಕೇರಳದ ಸುಮಾರು 36 ಸಾವಿರ ಹುಡುಗಿಯರ ನಾಪತ್ತೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗಿದೆ. ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ಮತಾಂತರ ಮತ್ತು ಐಸಿಸ್ ಉಗ್ರಗಾಮಿಗಳನ್ನಾಗಿ ಮಾಡುವ ಕುರಿತು ಸಿನಿಮಾ ಒಳಗೊಂಡಿದೆ.

ಮೊದಲು ದಿ ಕೇರಳ ಸ್ಟೋರಿ ಟೀಸರ್ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದು, ತೀವ್ರ ಚರ್ಚೆ ಹುಟ್ಟುಹಾಕಿದೆ. ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು ಎಂದು ಕೇರಳ ಮುಖ್ಯಮಂತ್ರಿಗೆ ಮನವಿ ಕೂಡ ಮಾಡಲಾಗಿದೆ. ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಸಲಾಗಿದೆ.

ಸದ್ದು ಮಾಡುತ್ತಿರುವ ಡೈಲಾಗ್​: ಇನ್ನು ಟೀಸರ್‌ನಲ್ಲಿ ಬುರ್ಖಾ ಧರಿಸಿದ ಪ್ರಧಾನ ಪಾತ್ರಧಾರಿ ‘ನಾನು ಶಾಲಿನಿ, ನರ್ಸ್ ಆಗಿ ಜನಸೇವೆ ಮಾಡಬೇಕು ಅಂದುಕೊಂಡಿದ್ದೆ. ಆದರೆ, ನಾನು ಫಾತಿಮಾ ಆಗಿ ಐಸಿಎಸ್ ಉಗ್ರ ಸಂಘಟನೆಗೆ ಸೇರಿಕೊಂಡು ಭಯೋತ್ಪಾದಕಿ ಆಗಿದ್ದೇನೆ’ ಎಂಬ ಸಂಭಾಷಣೆ ಇದೆ. ಈ ಮಾತು ಇದೀಗ ವಾದ- ಪ್ರತಿವಾದಕ್ಕೆ ಕಾರಣವಾಗಿದೆ.

ಮುಸ್ಲಿಂ ಯೂಥ್​ ಲೀಗ್ ಸವಾಲು: ದಿ ಕೇರಳ ಸ್ಟೋರಿಯಲ್ಲಿ ಹೇಳಿದಂತೆ ಯುವತಿಯರನ್ನು ಐಸಿಎಸ್​ ಉಗ್ರಗಾಮಿ ಸಂಘಟನೆಗೆ ಸೇರಿಸಲಾಗುತ್ತಿದೆ ಎಂಬ ಆರೋಪವನ್ನು ಮುಸ್ಲಿಂ ಯೂತ್ ಲೀಗ್ ವಿರೋಧಿಸಿದೆ. ಆರೋಪವನ್ನು ಸಾಬೀತು ಮಾಡಿದಲ್ಲಿ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.

ರಾಜ್ಯದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರು ಉಗ್ರಗಾಮಿ ಸಂಘಟನೆಗೆ ಐಎಸ್​ ಸೇರ್ಪಡೆಗೊಂಡಿದ್ದನ್ನು 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ತೋರಿಸಲಾಗಿದೆ. ಹೀಗೊಂದು ವೇಳೆ ಅದು ನಿಜವೆಂದು ಸಾಬೀತುಪಡಿಸಿ. ಇದಕ್ಕಾಗಿ ಮೇ 4 ರಂದು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಾಕ್ಷ್ಯಗಳನ್ನು ಒದಗಿಸಲು ಸಂಗ್ರಹ ಕೇಂದ್ರಗಳನ್ನು ತೆರೆಯಲಾಗುತ್ತದೆ. ಯಾರ ಬಳಿ ಸಾಕ್ಷಿ ಇದೆಯೋ ಅವರು ಅದನ್ನು ಕೌಂಟರ್​ಗಳಲ್ಲಿ ಸಲ್ಲಿಸಿ. ಅದು ಸತ್ಯವಾದಲ್ಲಿ 1 ಕೋಟಿ ರೂಪಾಯಿ ಪಡೆಯಿರಿ ಎಂದು ಮುಸ್ಲಿಂ ಯೂತ್ ಲೀಗ್ ನಾಯಕ ಪಿಕೆ ಫಿರೋಜ್ ಅವರು ಹೇಳಿದ್ದಾರೆ.

ಓದಿ: 'ದಿ ಕೇರಳ ಸ್ಟೋರಿ'ಯಲ್ಲಿನ ಆರೋಪ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ: ಎಂವೈಎಲ್ ಮುಖಂಡ ಫಿರೋಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.