ETV Bharat / bharat

31 ವರ್ಷ ಜೈಲುವಾಸದ ಬಳಿಕ ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಪೆರಾರಿವಾಲನ್ ಬಿಡುಗಡೆ

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಸುಮಾರು 31 ವರ್ಷ ಸೆರೆವಾಸ ಅನುಭವಿಸಿದ್ದ ಅಪರಾಧಿ ಪೆರಾರಿವಾಲನ್‌ನನ್ನು ಸುಪ್ರೀಂಕೋರ್ಟ್ ಇಂದು ಬಿಡುಗಡೆಗೊಳಿಸಿ ಮಹತ್ವದ ಆದೇಶ ನೀಡಿದೆ.

31 ವರ್ಷ ಜೈಲುವಾಸದ ಬಳಿಕ ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಪೆರಾರಿವಾಲನ್ ಬಿಡುಗಡೆ
31 ವರ್ಷ ಜೈಲುವಾಸದ ಬಳಿಕ ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಪೆರಾರಿವಾಲನ್ ಬಿಡುಗಡೆ
author img

By

Published : May 18, 2022, 12:10 PM IST

Updated : May 18, 2022, 3:33 PM IST

ನವದೆಹಲಿ: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೀವಾವಧಿ ಅಪರಾಧಿಗಳಲ್ಲಿ ಒಬ್ಬನಾದ ಎ.ಜಿ.ಪೆರಾರಿವಾಲನ್‌ನನ್ನು ಸುಪ್ರೀಂಕೋರ್ಟ್‌ ಬಿಡುಗಡೆಗೊಳಿಸಿ ಮಹತ್ವದ ಆದೇಶ ನೀಡಿತು. ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಬಿ.ಆರ್.ಬವಾಯಿ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ಪ್ರಕಟಿಸಿದೆ. ಈ ಆದೇಶ ಶ್ರೀಲಂಕಾ ಪ್ರಜೆಯಾದ ನಳಿನಿ ಶ್ರೀಹರನ್ ಹಾಗೂ ಆಕೆಯ ಪತಿ ಮುರುಗನ್ ಸೇರಿದಂತೆ ಇತರ ಆರು ಅಪರಾಧಿಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಎ.ಜಿ.ಪೆರಾರಿವಾಲನ್ ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ್ದರಿಂದ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರಾರಿವಾಲನ್ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದನು. ಹತ್ಯೆಯ ಸಮಯದಲ್ಲಿ 19 ವರ್ಷ ವಯಸ್ಸಿನವನಾಗಿದ್ದ ಈತ ಹತ್ಯೆಯ ಮಾಸ್ಟರ್‌ಮೈಂಡ್‌ ಎಲ್‌ಟಿಟಿಇ ವ್ಯಕ್ತಿ ಶಿವರಾಸನ್‌ಗಾಗಿ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದನೆಂದು ಆರೋಪಿಸಲಾಗಿತ್ತು.

31 ವರ್ಷ ಜೈಲುವಾಸದ ಬಳಿಕ ರಾಜೀವ್‌ ಗಾಂಧಿ ಹತ್ಯೆ ಅಪರಾಧಿ ಪೆರಾರಿವಾಲನ್ ಬಿಡುಗಡೆ

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ: 29 ವರ್ಷದ ನೋವಿನ ಕಥೆ ಬಿಚ್ಚಿಟ್ಟ ಅಪರಾಧಿಯ ತಾಯಿ

1998ರಲ್ಲಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಪೆರಾರಿವಾಲನ್‌ಗೆ ಮರಣದಂಡನೆ ವಿಧಿಸಿತ್ತು. ಮರು ವರ್ಷ ಸುಪ್ರೀಂಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ 2014ರಲ್ಲಿ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು. ಈ ವರ್ಷದ ಮಾರ್ಚ್‌ನಲ್ಲಿ, ಸರ್ವೋಚ್ಛ ನ್ಯಾಯಾಲಯವು ಪೆರಾರಿವಾಲನ್​​ಗೆ ಜಾಮೀನು ನೀಡಿದೆ. ನಂತರ ಪೆರಾರಿವಾಲನ್ ಜೈಲಿನಿಂದ ಬೇಗನೆ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದ್ದ.

ಪೆರಾರಿವಾಲನ್ ಮನವಿ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರವು, ತಮಿಳುನಾಡು ರಾಜ್ಯಪಾಲರು ಈ ವಿಷಯವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ವರ್ಗಾಯಿಸಿದ್ದು, ಅವರು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿತ್ತು. ಪ್ರಕರಣದ ವಿಳಂಬ ಹಾಗೂ ರಾಜ್ಯಪಾಲರ ಕ್ರಮವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿತ್ತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆಗೀಡಾಗಿದ್ದರು.

ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಅಪರಾಧಿಗೆ 30 ದಿನ ರಜೆ ಘೋಷಿಸಿದ ಸಿಎಂ ಸ್ಟಾಲಿನ್

Last Updated : May 18, 2022, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.