ETV Bharat / bharat

ಆಕ್ಸಿಜನ್​ ಪೂರೈಕೆಗಾಗಿ ಸುಪ್ರೀಂನಿಂದ ಟಾಸ್ಕ್​ ಫೋರ್ಸ್.. ಕರ್ನಾಟಕದ ದೇವಿಶೆಟ್ಟಿಗೂ ಅವಕಾಶ - ಆಕ್ಸಿಜನ್​ ಪೂರೈಕೆ

ದೇಶಾದ್ಯಂತ ಆಕ್ಸಿಜನ್​ ಹಾಗೂ ಡ್ರಗ್ಸ್​ ಹಂಚಿಕೆ ಉಸ್ತುವಾರಿಯನ್ನ ಈ ಟಾಸ್ಕ್​ ಫೋರ್ಸ್​ ನೋಡಿಕೊಳ್ಳಲಿದ್ದು, ಕೇಂದ್ರ ಸಂಪುಟ ಕಾರ್ಯದರ್ಶಿ ಇದರ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ.

SUPREME COURT
SUPREME COURT
author img

By

Published : May 8, 2021, 9:02 PM IST

ನವದೆಹಲಿ: ಎರಡನೇ ಹಂತದ ಕೋವಿಡ್​ ಅಲೆ ಜೋರಾಗುತ್ತಿದ್ದಂತೆ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಹೀಗಾಗಿ ಆಸ್ಪತ್ರೆಗಳಲ್ಲಿ ಸರಿಯಾದ ಆಮ್ಲಜನಕ ಲಭ್ಯವಾಗದೇ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನ ಮನಗೊಂಡಿರುವ ಸುಪ್ರೀಂಕೋರ್ಟ್​ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದು, 12 ಸದಸ್ಯರ ರಾಷ್ಟ್ರೀಯ ಟಾಸ್ಕ್​ ಫೋರ್ಸ್​​ ರಚನೆ ಮಾಡಿದೆ. ಜಸ್ಟೀಸ್​ ಚಂದ್ರಚೂಡ್​ ನೇತೃತ್ವದ ಸುಪ್ರೀಂಕೋರ್ಟ್​​​ ಪೀಠ ಈ ಟಾಸ್ಕ್ ಫೋರ್ಸ್​ ರಚನೆ ಮಾಡಿದ್ದು, ಆಕ್ಸಿಜನ್​ ಹಂಚಿಕೆ ವಿಚಾರವಾಗಿ ಕೆಲಸ ಮಾಡಲಿದೆ. ಜತೆಗೆ ಸುಪ್ರೀಂಕೋರ್ಟ್​ಗೆ ನೇರವಾಗಿ ವರದಿ ಸಲ್ಲಿಕೆ ಮಾಡಲಿದೆ.

SUPREME COURT
ಸುಪ್ರೀಂಕೋರ್ಟ್​

ಇದನ್ನೂ ಓದಿ: 860 ಕೋಟಿ ರೂ. ಮೌಲ್ಯದ 126 ಕೆಜಿ ಹೆರಾಯಿನ್​ ವಶ, ದಂಪತಿ ಬಂಧನ

ದೇಶದ ವಿವಿಧ ಆಸ್ಪತ್ರೆಗಳಿಗೆ ಸಮಪರ್ಕವಾಗಿ ಹಾಗೂ ತ್ವರಿತಗತಿಯಲ್ಲಿ ಆಕ್ಸಿಜನ್ ಪೂರೈಕೆ ಮಾಡಲು ಈ ಟಾಸ್ಕ್​ಫೋರ್ಸ್​ ನೇತೃತ್ವ ವಹಿಸಲಿದೆ. ಇದರಲ್ಲಿ ಬೆಂಗಳೂರಿನ ಡಾ. ದೇವಿಶೆಟ್ಟಿಗೂ ಅವಕಾಶ ನೀಡಲಾಗಿದೆ.

ಟಾಸ್ಕ್​ ಫೋರ್ಸ್​ನಲ್ಲಿ ಯಾರಿಗೆ ಅವಕಾಶ

  • ಡಾ. ಬವತೋಷ ಬಿಸ್ವಾಸ್​; ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ವಿಜ್ಞಾನ ವಿವಿ ಮಾಜಿ ಉಪಕುಲಪತಿ
  • ಡಾ. ದೇವೇಂದ್ರ ಸಿಂಗ್ ರಾಣಾ; ದೆಹಲಿ ಗಂಗಾ ರಾಮ್​ ಆಸ್ಪತ್ರೆ ಅಧ್ಯಕ್ಷರು
  • ಡಾ. ದೇವಿ ಶೆಟ್ಟಿ; ನಾರಾಯಣ ಹೇಲ್ತ್​ ಕೇರ್​ನ ಡೈರಕ್ಟರ್​, ಬೆಂಗಳೂರು
  • ಡಾ. ಗಗನ್​ ದೀಪ್​​; ವೆಲ್ಲೂರು ಕ್ರಿಸ್ಚಿಯನ್​ ಮೆಡಿಕಲ್ ಕಾಲೇಜ್​ನ ಪ್ರೊಪೆಸರ್​
  • ಡಾ. ಜೆವಿ ಪಟಿರ್​; ವೆಲ್ಲೂರು ಮೆಡಿಕಲ್​​ ಕಾಲೇಜ್​ ಡೈರೆಕ್ಟರ್​
  • ಡಾ. ನರೇಶ್ ತೆಹ್ರಾನ್​​​; ಗುರುಗ್ರಾಮ್​ನ ಮೇದಾಂತ್​​​ ಆಸ್ಪತ್ರೆ ಹಾಗೂ ಹಾರ್ಟ್​ ಇನ್ಸ್​ಟ್ಯೂಟ್​
  • ಡಾ. ರಾಹುಲ್​ ಪಂಡಿತ್​; ಕ್ರಿಟಿಕಲ್​ ಕೇರ್​ ಮೆಡಿಸಿನ್​ ಹಾಗೂ ಪೋರ್ಟಿಸ್​ ಆಸ್ಪತ್ರೆ ಮುಂಬೈನ ಡೈರೆಕ್ಟರ್
  • ಡಾ. ಸುಮಿತ್ರಾ ರಾವತ್​; ದೆಹಲಿ ಗಂಗಾ ರಾಮ್​ ಆಸ್ಪತ್ರೆ
  • ಡಾ. ಶಿವ ಕುಮಾರ್​ ಸರ್ನಾ; ದೆಹಲಿ
  • ಡಾ. ಜಾರೀರ್​ ಉದ್ವಾದಿ; ಹಿಂದೂಜಾ ಆಸ್ಪತ್ರೆ ಮುಂಬೈ

ಟಾಸ್ಕ್​ಪೋರ್ಸ್​ಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಈಗಾಗಲೇ ಸೂಚನೆ ಸಹ ನೀಡಿದೆ. ಮುಂದಿನ ಒಂದು ವಾರದಲ್ಲಿ ಟಾಸ್ಕ್​ಪೋರ್ಸ್​​ ತನ್ನ ಕೆಲಸ ಆರಂಭ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.