ನವದೆಹಲಿ: ಅರುಣ್ ಗೋಯಲ್ ಅವರನ್ನು ಕೇಂದ್ರ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಪೀಠ ಇಂದು (ಸೋಮವಾರ) ಹಿಂದೆ ಸರಿಯಿತು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಈ ಬಗ್ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಜೋಸೆಫ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠವು, ಈ ವಿಷಯವನ್ನು ಇನ್ನೊಂದು ಪೀಠದ ಮುಂದೆ ಪಟ್ಟಿ ಮಾಡುವಂತೆ ತಿಳಿಸಿತು.
ಇದನ್ನೂ ಓದಿ: 62 ದಿನಗಳ ಅಮರನಾಥ ಯಾತ್ರೆಗೆ ಆನ್‌ಲೈನ್, ಆಫ್‌ಲೈನ್ ನೋಂದಣಿ ಆರಂಭ
ಗೋಯಲ್ ಅವರ ನೇಮಕಾತಿ ಪ್ರಶ್ನಿಸಿದ್ದಕ್ಕಾಗಿ ಅರ್ಜಿದಾರ ಎನ್‌ಜಿಒ ಎಡಿಆರ್ ಅನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ನೇಮಕಾತಿಯಲ್ಲಿ ಯಾವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ತೋರಿಸುವಂತೆ ಕೇಳಿತು. ಒಬ್ಬ ವ್ಯಕ್ತಿಯನ್ನು ಸಾಂವಿಧಾನಿಕ ಹುದ್ದೆಗೆ ನೇಮಿಸಿದ ನಂತರ, ಆತ ಅನ್ಯಾಯವಾಗಿ ಮತ್ತು ನಿರಂಕುಶವಾಗಿ ವರ್ತಿಸುತ್ತಾನೆಂದೆ ಊಹಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: ಭಾರತದಲ್ಲಿ 145 ಟ್ರಿಲಿಯನ್ ರೂಪಾಯಿ ಮೊತ್ತದ ಆನ್ಲೈನ್ ವಹಿವಾಟು
ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯೋಗಗಳ ನೇಮಕವನ್ನು ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಮಾಡಿದ್ದಾರೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಮಾರ್ಚ್ 2ರ ತೀರ್ಪಿನ ಮೇಲೆ ಅರ್ಜಿ ಅವಲಂಬಿತವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಬಿಹಾರದಲ್ಲಿ ನಕಲಿ ಮದ್ಯ ಸೇವನೆ ಪ್ರಕರಣ: ಮೃತರ ಸಂಖ್ಯೆ 26ಕ್ಕೆ ಏರಿಕೆ
ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ವಿರೋಧ
ಎನ್‌ಜಿಒ ಪರ ಹಾಜರಾದ ವಕೀಲ ಪ್ರಶಾಂತ್ ಭೂಷಣ್: ವಿಚಾರಣೆಯ ಸಂದರ್ಭದಲ್ಲಿ, ಎನ್‌ಜಿಒ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ಗೋಯಲ್ ಅವರ ನೇಮಕಾತಿ ಪ್ರಕ್ರಿಯೆಯು ಅಸಮರ್ಪಕ ಮತ್ತು ಅನಿಯಂತ್ರಿತವಾಗಿದೆ ಎಂದರು.
ಇದನ್ನೂ ಓದಿ: ವಿವೇಕಾನಂದ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದು ಭಾಸ್ಕರ್ ರೆಡ್ಡಿ.. ಚಾರ್ಜ್ ಶೀಟ್ನಲ್ಲಿ ಸಿಬಿಐ ಉಲ್ಲೇಖ!
ಇದನ್ನೂ ಓದಿ: ಜನಗಣತಿ ನಡೆಸಿ, ಜಾತಿ ಆಧಾರಿತ ವರದಿ ಬಿಡುಗಡೆಗಾಗಿ ಪ್ರಧಾನಿಗೆ ಮಲ್ಲಿಕಾರ್ಜುನ್ ಖರ್ಗೆ ಪತ್ರ