ಇಂದಿನ ಪಂಚಾಂಗ :
ದಿನ : 24-06-2023 ಶನಿವಾರ
ಸಂವತ್ಸರ : ಶುಭಕೃತ್
ಆಯನ : ದಕ್ಷಿಣಾಯಣ
ಋತು : ವರ್ಷಾ
ಮಾಸ : ಆಷಾಢ
ನಕ್ಷತ್ರ : ಮಾಘ
ತಿಥಿ : ಷಷ್ಠಿ
ಪಕ್ಷ : ಶುಕ್ಲ
ಸೂರ್ಯೋದಯ : ಬೆಳಗ್ಗೆ 5:52 ಗಂಟೆಗೆ
ಅಮೃತಕಾಲ : ಬೆಳಗ್ಗೆ 7:29 ರಿಂದ 9:06 ಗಂಟೆವರೆಗೆ
ವರ್ಜ್ಯಂ : ಸಂಜೆ 5.52 ರಿಂದ 7.29 ಗಂಟೆವರೆಗೆ
ದುರ್ಮುಹೂರ್ತ : ಬೆಳಗ್ಗೆ 7:28 ರಿಂದ 8:16 ಗಂಟೆವರೆಗೆ ಹಾಗೂ ಸಂಜೆ 6:15 ರಿಂದ 7:50 ಗಂಟೆ ತನಕ
ರಾಹುಕಾಲ : ಮಧ್ಯಾಹ್ನ 9:06 ರಿಂದ 10:43 ಗಂಟೆವರೆಗೆ
ಸೂರ್ಯಾಸ್ತ : ಸಂಜೆ 6:48 ಗಂಟೆಗೆ
ಇಂದಿನ ರಾಶಿ ಭವಿಷ್ಯ :
ಮೇಷ : ನೀವು ಇಂದು ನಿಮ್ಮ ಮಕ್ಕಳ ಬೇಡಿಕೆಗೆ ಗಮನ ನೀಡುತ್ತೀರಿ. ಇಂತಹ ಸಮಯದಲ್ಲಿ ನಿಮ್ಮ ಶ್ರಮ ಅತ್ಯಂತ ಕಠಿಣವಾಗಿರುತ್ತದೆ. ನೀವು ಸುದೀರ್ಘ ಕಾಲದಿಂದ ಮುಂದೂಡುತ್ತಿದ್ದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೈದ್ಯಕೀಯ ಕ್ಷೇತ್ರ ಹಾಗು ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಇದು ಒಳ್ಳೆಯ ದಿನ.
ವೃಷಭ : ಇಂದು, ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತಿರಿ. ನಿಮ್ಮ ಕೆಲಸದ ಶೈಲಿ, ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಲ್ಲಿ ವಿಸ್ಮಯ ಮತ್ತು ಅಚ್ಚರಿಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರು ಮತ್ತು ಪ್ರೇರೇಪಣೆ ಹೊಂದುತ್ತಾರೆ.
ಮಿಥುನ : ನೀವು ಇಂದು ಬುದ್ಧಿಗಿಂತ ಹೃದಯದ ಮಾತು ಕೇಳುತ್ತೀರಿ, ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರಿ. ಇದರ ಅರ್ಥ ನೀವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ವ್ಯತ್ಯಾಸ ಕಂಡುಕೊಳ್ಳಲು ಅಶಕ್ತರಾಗುತ್ತೀರಿ. ಆದರೆ, ಸಂಜೆಯ ವೇಳೆಗೆ ಸಂಗತಿಗಳು ಸುಧಾರಿಸುತ್ತವೆ.
ಕರ್ಕಾಟಕ : ಈ ದಿನವನ್ನು ನೀವು ಉಜ್ವಲ ಭವಿಷ್ಯಕ್ಕಾಗಿ ಖಚಿತವಾದ ಯೋಜನೆಯಿಂದ ಪ್ರಾರಂಭಿಸುತ್ತೀರಿ. ನೀವು ಆಲೋಚನಾಯುಕ್ತವಾಗಿ ರೂಪಿಸಿದ ಕಾರ್ಯತಂತ್ರಗಳನ್ನು ದೃಢವಾಗಿ ಅನುಷ್ಠಾನಗೊಳಿಸುತ್ತೀರಿ. ಅಂತಹ ವಿಧಾನಾತ್ಮಕ ನಿರ್ಧಾರಗಳು ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಸಮಯ ಉಳಿಸುತ್ತವೆ. ಇಂದು ನೀವು ಪ್ರತಿ ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ.
ಸಿಂಹ : ಇಂದು ನೀವು ನಿಮ್ಮ ಸಾಮರ್ಥ್ಯ ಮೀರಿ ಹೊಸ ಯೋಜನೆಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಎಲ್ಲ ಗುರಿಗಳನ್ನು ಇಂದು ಯಶಸ್ವಿಯಾಗಿ ಪೂರೈಸುತ್ತೀರಿ. ನಿಮ್ಮ ವೈಯಕ್ತಿಕ ಬಾಂಧವ್ಯಗಳಲ್ಲಿ ನೀವು ಕೊಂಚ ಅಸ್ಥಿರತೆ ಎದುರಿಸಿದರೂ ಎಲ್ಲ ಸಮಸ್ಯೆಗಳನ್ನೂ ಯಶಸ್ವಿಯಾಗಿ ಪರಿಹರಿಸಿಕೊಳ್ಳಲು ಸಮರ್ಥರಾಗುತ್ತೀರಿ.
ಕನ್ಯಾ : ನೀವು ಇಂದು ಕೌಟುಂಬಿಕ ವಿಷಯಗಳ ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತೀರಿ. ಸಂಧಾನ ಮಾತುಕತೆಗಳಲ್ಲಿ ನಿಮಗೆ ಮಹತ್ತರ ಕೌಶಲ್ಯಗಳಿವೆ, ಮತ್ತು ಅದನ್ನು ನೀವು ವಿವಾದಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಬಳಸುತ್ತೀರ. ನೀವು ಶಾಂತಿ ಮತ್ತು ಸಮಚಿತ್ತತೆಯಿಂದ ಇರುವ ಮೂಲಕ ಜೀವನದ ಪಾಠಗಳನ್ನು ಕಲಿಯುತ್ತೀರಿ.
ತುಲಾ : ಇಂದು ನೀವು ನಿಮ್ಮಲ್ಲಿ ಅಂತರ್ಗತವಾಗಿದ್ದ ಭೋಜನ ಸವಿಯುವ ಆನಂದದ ರೈಡ್ ನಡೆಸುತ್ತೀರಿ. ನೀವು ಏನು ತಿನ್ನುತ್ತೀರೋ ಅದನ್ನು ಸವಿಯಿರಿ, ಮತ್ತು ಈ ಅದೃಷ್ಟಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ. ವೃತ್ತಿಯಲ್ಲಿ ನೀವು ಕವಲುದಾರಿಯಲ್ಲಿ ನಿಂತಿರುವುದನ್ನು ಕಾಣುತ್ತೀರಿ. ಆದರೆ ಆಯ್ಕೆ ಮಾಡಿಕೊಳ್ಳಲು ಹಲವು ದಾರಿಗಳಿವೆ ಎನ್ನುವುದು ಗಮನಿಸಬೇಕಾದ ಅಂಶ.
ವೃಶ್ಚಿಕ : ನೀವು ಇಂದು ಸಾಮಾಜಿಕ ಚಿಟ್ಟೆಯಾಗಿರುತ್ತೀರಿ. ಆದಾಗ್ಯೂ, ಗಾಸಿಪ್ ಗಳಿಗೆ ತಡೆಯೊಡ್ಡಿ ನಿಮ್ಮ ಸಾಮಾಜಿಕ ಗುಂಪುಗಳಲ್ಲಿ ಕರುಣೆ ಮತ್ತು ಸಂತೋಷ ಹರಡುತ್ತೀರಿ. ಜನರು ಇಂದು ಇದೇ ಕಾರಣಕ್ಕೆ ನಿಮ್ಮತ್ತ ನೋಡುತ್ತಾರೆ. ಏನನ್ನು ಬಿತ್ತುತ್ತೀರೋ ಅದನ್ನೇ ಬೆಳೆಯುತ್ತೀರಿ; ಆನಂದವನ್ನು ಹರಡಿ ಮತ್ತು ನೀವು ಖಂಡಿತಾ ಸಂತೋಷ ಸ್ವೀಕರಿಸುತ್ತೀರಿ.
ಧನು : ಕೆಲಸದ ವಿಷಯಕ್ಕೆ ಬಂದರೆ ದೃಢಸಂಕಲ್ಪ ಮತ್ತು ಬದ್ಧತೆ ಹೊಂದಿರುತ್ತೀರಿ. ಇದು ನಿಮ್ಮನ್ನು ನೀವು ಫೈಲುಗಳ ರಾಶಿ ಹಾಗೂ ಅಪಾರ ಕೆಲಸಗಳ ನಡುವೆ ಕಾಣುತ್ತೀರಿ. ನೀವು ವರ್ಕೊಹಾಲಿಕ್ ಆಗುವುದರಲ್ಲಿ ಆಶ್ಚರ್ಯವಿಲ್ಲ. ದಿನದ ನಂತರದ ಭಾಗವನ್ನು ನೀವು ಆನಂದಿಸುತ್ತೀರಿ. ವಿನೋದ ತುಂಬಿದ ಸಂಜೆ ನಿಮ್ಮದಾಗುತ್ತದೆ!
ಮಕರ : ನೀವು ಇಂದು ನಿಮ್ಮ ದಾರಿಯಲ್ಲ ಬರುವ ಯಾವುದೇ ಅವಕಾಶವನ್ನೂ ಬಿಡದೇ ಇದ್ದರೂ ಕಾನೂನು ವಿಷಯಕ್ಕೆ ಬಂದರೆ ನೀವು ಎಚ್ಚರವಾಗಿರಬೇಕು. ಆರ್ಥಿಕವಾಗಿ ನಿಮಗೆ ಅಪಾರ ನಷ್ಟಗಳಾಗುವ ಸಾಧ್ಯತೆ ಇದೆ, ಮತ್ತು ನೀವು ಡೀಲರ್ ಅಥವಾ ದಲ್ಲಾಳಿಯಾಗಿದ್ದರೆ, ಅದರಿಂದ ಹಾನಿಗೊಳಗಾಗುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ.
ಕುಂಭ : ನೀವು ನಿಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದೀರಿ, ಮತ್ತು ಈಗ ಮನೆಯಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಆನಂದಿಸಲು ಇದು ಸೂಕ್ತ ಕಾಲ. ನೀವು ಅವರನ್ನು ಶಾಪಿಂಗ್ ಗೆ ಕರೆದೊಯ್ಯುತ್ತೀರಿ, ಅವರೊಂದಿಗೆ ಪಿಕ್ ನಿಕ್ ಮಾಡುವುದಲ್ಲದೆ ಸಾಧ್ಯವಿರುವ ಎಲ್ಲ ವಿಧಾನದಲ್ಲೂ ಅವರನ್ನು ಅತಿಯಾಗಿ ಪ್ರೀತಿ ಮಾಡುತ್ತೀರಿ.
ಮೀನ : ನೀವು ಜನರೊಂದಿಗೆ ಸಹಾನುಭೂತಿ ಹೊಂದುತ್ತೀರಿ. ಇದರಿಂದ ನಿಮಗೆ ಜನರ ಶುಭ ಹಾರೈಕೆಗಳು ದೊರೆಯಲು ನೆರವಾಗುತ್ತದೆ. ನೀವು ಒಳ್ಳೆಯ ಬಾಸ್, ಸಹ-ಕೆಲಸಗಾರ, ಪತಿ ಅಥವಾ ಪತ್ನಿ ಮತ್ತು ಪುತ್ರ ಅಥವಾ ಪುತ್ರಿಯಾಗುತ್ತೀರಿ. ನೀವು ಈ ಸದ್ಗುಣಗಳನ್ನು ಮುಂದಕ್ಕೆ ಕೊಂಡೊಯ್ಯುವುದು ಸೂಕ್ತ.