ಸತ್ನಾ(ಮಧ್ಯಪ್ರದೇಶ): ಜಿಲ್ಲೆಯ ಹಿನೌತಾ ಗ್ರಾಮದಲ್ಲಿ ಶಾಲೆಯೊಂದು ಇದೆ. ಈ ಶಾಲೆಗೆ ಒಬ್ಬರೇ ವಿದ್ಯಾರ್ಥಿ ಮತ್ತು ಒಬ್ಬರೇ ಶಿಕ್ಷಕರು. ಅಷ್ಟೇ ಅಲ್ಲ ಕಳೆದ 5 ವರ್ಷಗಳಿಂದ ಈ ಶಾಲೆಯ ಬೀಗವೇ ತೆರೆದಿಲ್ಲ, ಕಪ್ಪು ಹಲಗೆಯ ಮೇಲೆ ಒಂದು ಅಕ್ಷರವೂ ಮೂಡಿಲ್ಲ. ಈ ವಿಚಾರದಲ್ಲಿ ಉಸ್ತುವಾರಿ ಸಚಿವರು ತಮ್ಮದೇ ರಾಗ ನುಡಿಯುತ್ತಿದ್ರೆ, ಜಿಲ್ಲಾ ಪಂಚಾಯಿತಿ ಸಿಇಒ ಕ್ರಮದ ಬಗ್ಗೆ ಮಾತನಾಡ್ತಿದ್ದಾರೆ.
ರಾಜ್ಯ ಸರ್ಕಾರವು ಶಿಕ್ಷಣವನ್ನು ಉತ್ತೇಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬೇಕಾದ ಸೌಲಭ್ಯಗಳನ್ನು ಸಹ ಒದಗಿಸಲು ಯತ್ನಿಸುತ್ತಿದೆ. ಆದ್ರೆ ಕೆಲ ಶಿಕ್ಷಕರು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಆಯಾಗಿ ನಿದ್ದೆ ಮಾಡ್ತಿದ್ದಾರೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ಸತ್ನಾ ಪ್ರಧಾನ ಕಚೇರಿಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಬಿರ್ಸಿಂಗ್‌ಪುರ ತಾಲೂಕಿನ ಹಿನೌತಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದಿದೆ. . ಶಾಲೆಗೆ ತೆರಳಲು ರಸ್ತೆಯೇ ಇಲ್ಲ. ಶಾಲೆ ಸುತ್ತ-ಮುತ್ತ ರೈತರು ಉಳುಮೆ ಮಾಡಿದ್ದಾರೆ.
ಒಬ್ಬ ವಿದ್ಯಾರ್ಥಿಗೆ ಒಬ್ಬನೇ ಶಿಕ್ಷಕ: ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇರೋದು ಒಬ್ಬ ವಿದ್ಯಾರ್ಥಿ. ಆ ವಿದ್ಯಾರ್ಥಿಗೆ ಒಬ್ಬ ಶಿಕ್ಷಕನನ್ನು ಸರ್ಕಾರ ನೇಮಿಸಿದೆ. ಆದರೆ ವಿಪರ್ಯಾಸ ಎಂದರೆ ಕಳೆದ 5 ವರ್ಷಗಳಿಂದ ಈ ಶಾಲೆಯ ಬಾಗಿಲೇ ತೆರೆದಿಲ್ಲ. ಹಾಗಾಗಿ ಶಾಲೆಯ ಕುರ್ಚಿ - ಮೇಜಿನ ಮೇಲೆ ಧೂಳಿನ ರಾಶಿ ಬಿದ್ದಿದೆ. ಈ ಶಾಲೆಯ ಶಿಕ್ಷಕ ವಿದ್ಯಾರ್ಥಿಗಳ ಹಾಜರಾತಿಯನ್ನು ತಮ್ಮ ಇಷ್ಟದಂತೆ ತಪ್ಪಾಗಿ ನಮೂದಿಸಿ ಸರ್ಕಾರದಿಂದ ಸಂಬಂಳ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಆ ಒಬ್ಬ ವಿದ್ಯಾರ್ಥಿಯೂ ಸಹ ಇತನ ಸ್ನೇಹಿತನಾಗಿದ್ದು, ಆತನಿಗೆ 45 ವರ್ಷ ವಯಸ್ಸಾಗಿದೆ.
ಸ್ನೇಹಿತನನ್ನೇ ವಿದ್ಯಾರ್ಥಿಯನ್ನಾಗಿ ಮಾಡಿದ ಶಿಕ್ಷಕ: ಶಾಲೆಯ ಶಿಕ್ಷಕ ವಿಜಯ್ ಕುಮಾರ್ ವರ್ಮಾ ಗ್ರಾಮದ ನಿವಾಸಿಯಾಗಿರುವ ದೀಪು ಮಿಶ್ರಾ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಅಷ್ಟೇ ಅಲ್ಲ ಇತನ ಹೆಸರನ್ನು ತಮ್ಮ ಶಾಲೆಯಲ್ಲಿ ನೊಂದಾಯಿಸಿದ್ದಾರೆ. 1 ಮತ್ತು 2 ನೇ ತರಗತಿಯ ವಿದ್ಯಾರ್ಥಿ ಎಂದು ತಪ್ಪಾಗಿ ನೋಂದಾಯಿಸಿ ಶಾಲೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದಾನೆ ಈ ಶಿಕ್ಷಕ.
ಈ ವಿಷಯ ತಿಳಿದ ಗ್ರಾಮಸ್ಥರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದಾದ ನಂತರ ಶಿಕ್ಷಕರು ಅವರ ಹೆಸರನ್ನು ತೆಗೆದುಹಾಕಿದರು. ಇನ್ನು ಹಾಜರಿ ಪುಸ್ತಕದಲ್ಲಿ ಮತ್ತು ನೊಂದಣಿ ಬುಕ್ನಲ್ಲಿ ಯಾವ್ಯಾವ ವಿದ್ಯಾರ್ಥಿಯ ಹೆಸರುಗಳನ್ನು ನೋಂದಾಯಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿದಿಲ್ಲ. ಆದರೆ ಕಳೆದ ಹಲವು ವರ್ಷಗಳಿಂದ ಶಾಲೆ ಮುಚ್ಚಲಾಗಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ.
ಅಧಿಕಾರಿ ಹೇಳಿಕೆ: ವಿಜಯ್ ಕುಮಾರ್ ವರ್ಮಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದು, ಒಬ್ಬ ವಿದ್ಯಾರ್ಥಿ ಮಾತ್ರ ಅಲ್ಲಿ ಓದುತ್ತಿದ್ದಾನೆ. ಆದರೆ ಶಾಲೆ ಮುಚ್ಚಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಬಂದಿಲ್ಲ. ವಿಜಯ್ ಕುಮಾರ್ ವರ್ಮಾ ಅವರು ತಮ್ಮ ಮನೆಯಲ್ಲಿ ಕುಳಿತು ಪ್ರತಿ ತಿಂಗಳು 40,000 ಸಂಬಳ ಪಡೆಯುವ ಮೂಲಕ ಸಂಪೂರ್ಣ ಲಾಭವನ್ನು ಅನುಭವಿಸುತ್ತಿದ್ದಾರೆ. ಈ ಘಟನೆ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಪರೀಕ್ಷಿತ್ ರಾವ್ ಜಾಡೆ ಹೇಳಿದ್ದಾರೆ.
3 ವಿದ್ಯಾರ್ಥಿಗಳಿಗೆ 3 ಶಿಕ್ಷಕರ ನಿಯೋಜನೆ: ಬಿರ್ಸಿಂಗ್‌ಪುರ ತಾಲೂಕಿನ ಹರ್ದುವಾ ಸರ್ಕಾರಿ ಮಾಧ್ಯಮಿಕ ಶಾಲೆ ಸಹ ಇಂತಹದೇ ಪರಿಸ್ಥಿತಿ. ಅಲ್ಲಿ 3 ವಿದ್ಯಾರ್ಥಿಗಳಿಗೆ 3 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇದರಲ್ಲಿ ವಿಶೇಷವೆಂದರೆ ಶಾಲೆಯಲ್ಲಿ ವಿದ್ಯಾರ್ಥಿಗಳ ವಿಳಾಸ ಅಥವಾ ಶಿಕ್ಷಕರ ವಿಳಾಸವೇ ಇಲ್ಲ. ವಿನೀತಾ ಸಿಂಗ್, ಸಹಾಯಕ ಶಿಕ್ಷಕ ಅಶೋಕ್ ತಿವಾರಿ ಮತ್ತು ಮುಖ್ಯೋಪಾಧ್ಯಾಯ ಹಾಗೂ ಪ್ರಾಥಮಿಕ ಶಿಕ್ಷಕ ರಾಮ್ ಪ್ರಭಾ ತ್ರಿಪಾಠಿ ಸೇರಿದಂತೆ ಮೂವರೂ ಶಿಕ್ಷಕರು ಸರ್ಕಾರದ 1.25 ಲಕ್ಷಕ್ಕೂ ಹೆಚ್ಚು ವೇತನವನ್ನು ಪಡೆಯುತ್ತಿದ್ದಾರೆ.
ಸ್ಥಳೀಯರ ಪ್ರಕಾರ, ಹರ್ದುವಾ ಸರ್ಕಾರಿ ಮಾಧ್ಯಮಿಕ ಶಾಲೆ ಹಲವಾರು ತಿಂಗಳಿಂದ ತೆರೆದಿಲ್ಲ. ಇಲ್ಲಿ ಕಲಿಯುವ 3 ವಿದ್ಯಾರ್ಥಿಗಳು ಸಹ ಶಾಲೆ ಬರುವುದಿಲ್ಲ. ಮಕ್ಕಳನ್ನು ಶಾಲೆಗೆ ಕರೆ ತರುವ ಪ್ರಯತ್ನವೂ ಸಹ ಶಿಕ್ಷಕರು ಮಾಡುವುದಿಲ್ಲ. ಇಲ್ಲಿ ಯಾವಾಗಲೂ ಬೀಗ ನೇತಾಡುತ್ತಿರುವುದು ಕಂಡು ಬರುತ್ತದೆ ಎನ್ನುತ್ತಾರೆ ಇವರೆಲ್ಲ