ETV Bharat / bharat

ನ್ಯಾನೊ ಉಪಗ್ರಹ ತಯಾರಿಸಿದ ಇಂಜಿನಿಯರ್​ ವಿದ್ಯಾರ್ಥಿನಿಯರು: ಅಕ್ಟೋಬರ್​ ಕೊನೆಯಲ್ಲಿ ಉಡವಾಣೆ ಸಾಧ್ಯತೆ - ನ್ಯಾನೋ ಉಪಗ್ರಹ ತಯಾರಿಸಿದ ವಿದ್ಯಾರ್ಥಿನಿಯರು

ಕೇರಳದ ಇಂಜಿನಿಯರ್​ ವಿದ್ಯಾರ್ಥಿನಿಯರು ನ್ಯಾನೊ ಉಪಗ್ರಹವನ್ನು ಸಿದ್ದಪಡಿಸಿದ್ದಾರೆ.

ನ್ಯಾನೊ ಉಪಗ್ರಹ ತಯಾರಿಸಿದ ಇಂಜಿನಿಯರ್​ ವಿದ್ಯಾರ್ಥಿನಿಯರು

author img

By ETV Bharat Karnataka Team

Published : Sep 14, 2023, 10:44 PM IST

ತಿರುವನಂತಪುರಂ (ಕೇರಳ): ತಿರುವನಂತಪುರಂನ ಪೂಜಾಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫಾರ್ ವುಮೆನ್ (ಎಲ್​ಬಿಎಸ್​ಐಟಿಡಬ್ಲೂ) ಎಸ್​ ಕಾಲೇಜಿನ ವಿದ್ಯಾರ್ಥಿನಿಯರು ಉಪಗ್ರಹವನ್ನು ನಿರ್ಮಾಣ ಮಾಡಿದ್ದಾರೆ. ನೇರಳಾತೀತ ವಿಕಿರಣ ಮತ್ತು ಅದರ ಪರಿಣಾಮಗಳ ಕುರಿತು ಅಧ್ಯಯನ ಮಾಡಲು ನ್ಯಾನೊ ಉಪಗ್ರಹವನ್ನು ಸಿದ್ದಪಡಿಸಿದ್ದಾರೆ.

ಮಹೀಳಾ ಇಂಜಿನಿಯರ್​ಗಳಿಂದ ನಿರ್ಮಾಣಗೊಂಡ ಈ ಉಪಗ್ರಹಕ್ಕೆ WESAT (Women Engineered Satellite) ಎಂದು ಹೆಸರಿಡಲಾಗಿದೆ. ಅಕ್ಟೋಬರ್​ ಕೊನೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಪೋಲಾರ್​ ಸ್ಯಾಟಲೈಟ್​ ಲಾಂಚ್​ ವೆಹಿಕಲ್​ (PSLV) ಮೂಲಕ ನ್ಯಾನೋ ಉಪಗ್ರಹ ಉಡಾವಣೆ ಮಾಡಲಾಗುತ್ತದೆ.

ಇನ್​​ಸ್ಟಿಟ್ಯೂಟ್​ನ​ ಸ್ಪೇಸ್ ಕ್ಲಬ್​ನಲ್ಲಿ ಸಿದ್ದಗೊಂಡ 1ಕೆಜಿ ತೂಕದ ನ್ಯಾನೊ ಉಪಗ್ರಹ ಸಂಪೂರ್ಣವಾಗಿ ಮಹಿಳೆಯರಿಂದಲೇ ವಿನ್ಯಾಸಗೊಳಿಸಿದ ಮೊದಲ ಉಪಗ್ರಹ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೇರಳದ ಹವಾಮಾನ ಬದಲಾವಣೆಯ ಮೇಲೆ ನೇರಳಾತೀತ ವಿಕಿರಣಗಳ ಪ್ರಭಾವವನ್ನು ಗಮನಿಸುವ ಉದ್ದೇಶದಿಂದ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಬಾಹ್ಯಾಕಾಶದಲ್ಲಿ ಮತ್ತು ಭೂಮಿಯ ಮೇಲ್ಮೈಯಲ್ಲಿ ನೇರಳಾತೀತ ವಿಕಿರಣದ ಮಟ್ಟವನ್ನು ಅಳೆಯುವುದು ಮತ್ತು ಇದರಿಂದ ಉಂಟಾಗುವ ಹವಾಮಾನ ಬದಲಾವಣೆಗಳನ್ನು ಅಧ್ಯಯನ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಪ್ರಸ್ತುತ ಕ್ಯಾಂಪಸ್‌ನಲ್ಲಿ ಅಳವಡಿಸಲಾಗಿರುವ ಯಂತ್ರದ ಮೂಲಕ ಈ ಚಟುವಟಿಕೆಗಳನ್ನು ಮಾಡಲಾಗುತ್ತಿದೆ.

ಈ ಉಪಗ್ರಹ ತಯಾರಿಸಲು ವಿದ್ಯಾರ್ಥಿನಿಯರು ಮೂರು ವರ್ಷಗಳ ಕಾಲ ಶ್ರಮವಹಿಸಿದ್ದಾರೆ. ಇದಕ್ಕೂ ಮೊದಲು ವಿದ್ಯಾರ್ಥಿನಿಯರು ಇಸ್ರೋಗೆ ಪತ್ರ ಬರೆದಿದು ಉಪಗ್ರಹವನ್ನು ನಿರ್ಮಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ನಂತರ ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಸಹಯೋಗದೊಂದಿಗೆ ಉಪಗ್ರಹವನ್ನು ಸಿದ್ದಪಡಿಸಿದ್ದಾರೆ. ಉಪಗ್ರಹ ಉಡಾವಣೆಗಾಗಿ ಇಸ್ರೋ ಮತ್ತು ಎಲ್‌ಬಿಎಸ್ ಕಾಲೇಜು ಒಂದಕ್ಕೆ ಸಹಿ ಹಾಕಿದ್ದು, ಮುಂದಿನ ತಿಂಗಳ ಅಂತ್ಯದ ವೇಳೆಗೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಈ ನ್ಯಾನೊ ಉಪಗ್ರಹ ಉಡಾವಣೆಗೊಳ್ಳುವ ಸಾಧ್ಯತೆ ಇದೆ.

ಉಪಗ್ರಹಕ್ಕೆ ಚಿಪ್​ ತಯಾರಿಸಿದ ವಿದ್ಯಾರ್ಥಿನಿಯರು: ಪಂಜಾಬ್​ನ ಅಮೃತಸರದ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ಉಪಗ್ರಹಕ್ಕೆ ಅಳವಡಿಸುವ ಚಿಪ್​​ ತಯಾರಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದರು. ಸಿನಿಯರ್​ ಸೆಕ್ರೆಟರಿ ಸ್ಮಾರ್ಟ್​ ಶಾಲೆಯ 10 ವಿದ್ಯಾರ್ಥಿನಿಯರು "ಟೆಸ್ಬರಿ ಪೈ ಪೀಕ್" ಎಂಬ ಚಿಪ್ ತಯಾರಿಸಿದ್ದರು. ಅದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಆಜಾದಿಸ್ಯಾಟ್​-2' ಉಪಗ್ರಹದಲ್ಲಿ ಅಳವಡಿಸಲಾಗಿತ್ತು. ವಿದ್ಯಾರ್ಥಿನಿಯರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ​ಇಸ್ರೋ ಉಪಗ್ರಹಕ್ಕೆ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರು ತಯಾರಿಸಿದ ಚಿಪ್ ಅಳವಡಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.