ETV Bharat / bharat

ಪ್ರಧಾನಿಗೆ ಬಹಿರಂಗ ಪತ್ರ ಬರೆದ ಸಂಯುಕ್ತ ಕಿಸಾನ್‌ ಮೋರ್ಚಾ.. ಬೇಡಿಕೆಗಳು ಹೀಗಿವೆ..

ತಮ್ಮ ಆರು ಬೇಡಿಕೆಗಳ ಬಗ್ಗೆ ಸರ್ಕಾರವು ತಕ್ಷಣವೇ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಮಾತುಕತೆಯನ್ನು ನಡೆಸಬೇಕು ಎಂದು ರೈತ ಸಂಘಟನೆ ಹೇಳಿದೆ. ಮಾತುಕತೆ ನಡೆಯುವವರೆಗೆ, ಎಸ್‌ಕೆಎಂ ತಮ್ಮ ಚಳವಳಿಯನ್ನು ಮುಂದುವರಿಸುತ್ತದೆ ಎಂದಿದೆ..

sanyukta-kisan-morcha-wrote-an-open-letter-to-pm-modi
ಎಸ್​ಕೆಎಂ
author img

By

Published : Nov 21, 2021, 11:01 PM IST

ನವದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾವು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ (kisan morcha wrote letter to PM Modi) ಪತ್ರ ಬರೆದಿದೆ. ಎಂಎಸ್‌ಪಿ ಖಾತರಿ ಕಾನೂನನ್ನು ಒಳಗೊಂಡಿರುವ ತಮ್ಮ ಆರು ಬೇಡಿಕೆಗಳ ಬಗ್ಗೆ ಸರ್ಕಾರ ಚರ್ಚೆ ನಡೆಸಿದರೆ ಮಾತ್ರ ಪ್ರತಿಭಟನೆಯನ್ನು ನಿಲ್ಲಿಸುವುದಾಗಿ ತಿಳಿಸಿದ್ದಾರೆ.

ತಮ್ಮ ಆರು ಬೇಡಿಕೆಗಳ ಬಗ್ಗೆ ಸರ್ಕಾರವು ತಕ್ಷಣವೇ ಸಂಯುಕ್ತ ಕಿಸಾನ್ ಮೋರ್ಚಾ(sanyukta kisan morcha) ದೊಂದಿಗೆ ಮಾತುಕತೆಯನ್ನು ನಡೆಸಬೇಕು ಎಂದು ರೈತ ಸಂಘಟನೆ ಹೇಳಿದೆ. ಮಾತುಕತೆ ನಡೆಯುವವರೆಗೆ, ಎಸ್‌ಕೆಎಂ ತಮ್ಮ ಚಳವಳಿಯನ್ನು ಮುಂದುವರಿಸುತ್ತದೆ ಎಂದಿದೆ.

sanyukta-kisan-morcha-wrote-an-open-letter-to-pm-modi
ಪಿಎಂಗೆ ಬಹಿರಂಗ ಪತ್ರ

ಬೇಡಿಕೆಗಳೇನು?

ಸರ್ಕಾರವು ಎಲ್ಲಾ ರೈತರಿಗೆ (C2+50%) ಸೂತ್ರದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಕಾನೂನುಬದ್ಧಗೊಳಿಸಬೇಕು.

ರೈತರು ಪ್ರಸ್ತಾಪಿಸಿದ 'ವಿದ್ಯುತ್ ತಿದ್ದುಪಡಿ ಮಸೂದೆ, 2020/2021' ಕರಡನ್ನು ಹಿಂಪಡೆಯುವಂತೆ ಸರ್ಕಾರವನ್ನು ಕೋರಿದ್ದಾರೆ.

ಬೆಳೆ ತ್ಯಾಜ್ಯ ಸುಡುವ ರೈತರ ಮೇಲಿನ ದಂಡದ ನಿಬಂಧನೆಗಳನ್ನು ತೆಗೆದು ಹಾಕುವಂತೆ ಮೋರ್ಚಾ ತನ್ನ ಪತ್ರದಲ್ಲಿ ಸರ್ಕಾರವನ್ನು ಕೇಳಿದೆ.

ಆಂದೋಲನದಲ್ಲಿ ತಮ್ಮ ಪಾತ್ರಕ್ಕಾಗಿ ದೆಹಲಿ, ಹರಿಯಾಣ, ಚಂಡೀಗಢ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳ ಸಾವಿರಾರು ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ತನ್ನ ಬೇಡಿಕೆಯನ್ನು ಪುನರುಚ್ಚರಿಸಿರುವ ಮೋರ್ಚಾ, ಸರ್ಕಾರವು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಮತ್ತು ಘಟನೆಯಲ್ಲಿನ ಅವರ ಪಾತ್ರಕ್ಕಾಗಿ ಅವರನ್ನು ತಕ್ಷಣವೇ ಬಂಧಿಸಬೇಕು ಎಂದಿದೆ.

ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಸುಮಾರು 700 ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಬೆಂಬಲಕ್ಕಾಗಿ ಸರ್ಕಾರವನ್ನು ಕೇಳಿದೆ. ಅಲ್ಲದೇ, ಪ್ರತ್ಯೇಕವಾಗಿ ಈ ರೈತರ ಸ್ಮರಣಾರ್ಥ ಹುತಾತ್ಮರ ಸ್ಮಾರಕ ನಿರ್ಮಿಸಿ, ಸಿಂಗು ಗಡಿಯಲ್ಲಿ ಭೂಮಿ ಮಂಜೂರು ಮಾಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.

ಓದಿ: ವಿಧಾನ ಪರಿಷತ್ ‌ಚುನಾವಣೆ ಬಳಿಕ ರಾಜ್ಯ ಪ್ರವಾಸ : ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.