ETV Bharat / bharat

ಮನ್ಸುಖ್ ಹಿರೆನ್ ಸಾವಿನ ವಿಚಾರ, ಪ್ರತಿಪಕ್ಷ ಪ್ರಶ್ನೆ ಎತ್ತಿದರೆ ತನಿಖೆ: ಸಂಜಯ್ ರಾವತ್ - ಸಚಿನ್​ ವಾಜಿ

ಅಂಬಾನಿ ಮನೆ ಮುಂದೆ ನಿಲ್ಲಿಸಿದ್ದ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕನ ಸಾವಿನ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್​, " ಪ್ರತಿಪಕ್ಷದ ನಾಯಕರು ಮನ್ಸುಖ್ ಹಿರೆನ್ ಸಾವಿನ ಕುರಿತಂತೆ ಯಾವುದೇ ಪ್ರಶ್ನೆಯನ್ನು ಎತ್ತಿದ್ದರೆ, ಅದನ್ನು ತನಿಖೆ ಮಾಡಬೇಕು" ಎಂದು ಹೇಳಿದ್ದಾರೆ.

Sanjay Raut reaction
ಸಂಜಯ್ ರಾವತ್
author img

By

Published : Mar 6, 2021, 2:18 PM IST

ಮುಂಬೈ: ಅಂಬಾನಿ ನಿವಾಸ ಎದುರು ನಿಲ್ಲಿಸಿದ್ದ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್ ರಾವತ್​ , "ಪ್ರತಿಪಕ್ಷದ ನಾಯಕರು ಮನ್ಸುಖ್ ಹಿರೆನ್ ಸಾವಿನ ಕುರಿತು ಯಾವುದೇ ಪ್ರಶ್ನೆಯನ್ನು ಎತ್ತಿದ್ದರೆ, ಅದನ್ನು ತನಿಖೆ ಮಾಡಲೇಬೇಕಾಗುತ್ತದೆ" ಎಂದು ಹೇಳಿದ್ದಾರೆ.

ಮನ್ಸುಖ್ ಹಿರೆನ್ ಸಾವು ಆಘಾತಕಾರಿ ಮತ್ತು ದುರದೃಷ್ಟಕರ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಅನುಮಾನಗಳಿವೆ ಎಂದು ಸಂಜಯ್​ ಇದೇ ವೇಳೆ ಹೇಳಿದ್ರು. ಘಟನೆ ಸಂಬಂಧ ಮುಂಬೈ ಅಪರಾಧ ವಿಭಾಗದ ಪೊಲೀಸ್​ ಅಧಿಕಾರಿ ಸಚಿನ್​ ವಾಜಿ ಅವರ ವಿರುದ್ಧ ಟೀಕೆಗಳು ಕೇಳಿ ಬರುತ್ತಿದ್ದು, ಪ್ರತಿಪಕ್ಷದ ನಾಯಕರು ಯಾವುದೇ ಮನ್ಸುಖ್ ಹಿರೆನ್ ಸಾವಿನ ಪ್ರಕರಣದ ಕುರಿತು ಪ್ರಶ್ನೆ ಎತ್ತಿದ್ದರೆ, ಅದನ್ನು ತನಿಖೆ ಮಾಡಬೇಕು" ಎಂದು ರಾವತ್​ ಹೇಳಿದ್ರು.

ಉದ್ಯಮಿ ಮುಕೇಶ್​ ಅಂಬಾನಿ ನಿವಾಸದ ಬಳಿ ಸ್ಕಾರ್ಪಿಯೋವೊಂದರಲ್ಲಿ ಸ್ಫೋಟಕ ತುಂಬಿಸಿ ನಿಲ್ಲಿಸಿರುವುದು ಪತ್ತೆಯಾಗಿತ್ತು. ಈ ಕುರಿತು ತನಿಖೆ ನಡೆಯುತ್ತಿರುವಾಗಲೇ ಈ ಕಾರಿನ ಮಾಲೀಕ ಮೃತಪಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.