ETV Bharat / bharat

ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್​ ಮಲಿಕ್​ 'ಸ್ಫೋಟಕ ಸತ್ಯ' ಹೊರ ಹಾಕಿದ್ದಾರೆ: ಸಂಜಯ್​​ ರಾವತ್

ಪುಲ್ವಾಮಾ ಭಯೋತ್ಪಾದಕರ ಸ್ಫೋಟಕ್ಕಿಂತ ದೊಡ್ಡದಾಡ ಸ್ಫೋಟಕ ಸತ್ಯವನ್ನು ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ಅವರು ಹೊರ ಹಾಕಿದ್ದಾರೆ ಎಂದು ಶಿವಸೇನೆಯ ಉದ್ಧವ್​ ಬಾಳಾಸಾಹೇಬ್​ ಠಾಕ್ರೆ ಬಣದ ಸಂಸದ ಸಂಜಯ್​​ ರಾವತ್​ ಹೇಳಿದ್ದಾರೆ.

Sanjay Raut alleged that the Pulwama terror attack was a scam to win elections
ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್​ ಮಲಿಕ್​ 'ಸ್ಫೋಟಕ ಸತ್ಯ' ಹೊರ ಹಾಕಿದ್ದಾರೆ: ಸಂಜಯ್​​ ರಾವತ್
author img

By

Published : Apr 15, 2023, 1:19 PM IST

ನಾಗ್ಪುರ (ಮಹಾರಾಷ್ಟ್ರ): 2019ರ ಲೋಕಸಭೆ ಚುನಾವಣೆಗೂ ಮುನ್ನ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿ ಬಗ್ಗೆ ಅಂದಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್​ ಮಲಿಕ್​ ನಿಜವಾದ ಸತ್ಯ ಬೆಳಕಿಗೆ ತಂದಿದ್ದಾರೆ. ಸತ್ಯಪಾಲ್​ ಮಲಿಕ್​ ಅವರು ಪುಲ್ವಾಮಾ ಸ್ಫೋಟಕ್ಕಿಂತ ದೊಡ್ಡದಾದ ಸ್ಫೋಟಕ ಸತ್ಯವನ್ನು ಹೊರ ಹಾಕಿದ್ದಾರೆ ಎಂದು ಶಿವಸೇನೆಯ ಉದ್ಧವ್​ ಬಾಳಾಸಾಹೇಬ್​ ಠಾಕ್ರೆ ಬಣದ ರಾಜ್ಯಸಭಾ ಸದಸ್ಯ ಸಂಜಯ್​​ ರಾವತ್​ ಹೇಳಿದ್ದಾರೆ.

ಪುಲ್ವಾಮಾ ದಾಳಿಗೆ ಕಾರಣವಾದ ಲೋಪಗಳ ಬಗ್ಗೆ ಮಾತನಾಡದಂತೆ ತಮಗೆ ಸೂಚಿಸಲಾಗಿತ್ತು ಎಂದು ಸತ್ಯಪಾಲ್​ ಮಲಿಕ್ ಅವರು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಕುರಿತು ಮಹಾರಾಷ್ಟ್ರದ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಂಜಯ್​ ರಾವತ್​, 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ಪುಲ್ವಾಮಾ ದಾಳಿ ಬಗ್ಗೆ ಅನೇಕ ಬಾರಿ ಪ್ರಶ್ನೆಗಳು ಎದ್ದಿದ್ದವು. ಆದರೆ, ಇಂತಹ ಪ್ರಶ್ನೆಗಳನ್ನು ಕೇಳುವವರನ್ನು ಪಾಕಿಸ್ತಾನ ಪರವಾಗಿ ಮಾತನಾಡುವ ದೇಶದ್ರೋಹಿಗಳೆಂದು ಬಿಂಬಿಸುವ ಕೆಲಸವಾಗುತ್ತಿತ್ತು. ಈ ದಾಳಿ ಒಂದು ರೀತಿಯ ಹಗರಣ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ದೇಶದಲ್ಲಿ 'ಕೈ' ಬಲವರ್ಧನೆಗೆ ಖರ್ಗೆ ರಣತಂತ್ರ: ಪಕ್ಷ, ಪ್ರತಿಪಕ್ಷಗಳ ಒಗ್ಗಟ್ಟಿಗೆ ಏಕಕಾಲದಲ್ಲಿ ರೂಪುರೇಷೆ

ಈಗ ಸತ್ಯಪಾಲ್​ ಮಲಿಕ್​ ಪುಲ್ವಾಮಾ ಘಟನೆ ಬಗ್ಗೆ ಸ್ಫೋಟಕ ಸತ್ಯ ಹೊರ ಹಾಕಿದ್ದಾರೆ. ಇಂದು ಅಧಿಕಾರದಲ್ಲಿ ಕುಳಿತಿರುವ ಕೆಲವರು ಯಾವುದೇ ತಪ್ಪು ಮಾಡಲು ಸಿದ್ಧರಿದ್ದಾರೆ. ರಾಜಕೀಯ ಲಾಭಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಹೆಸರಲ್ಲಿ ಘಟನೆಗಳನ್ನು ಸೃಷ್ಟಿಸುತ್ತಾರೆ. ಬಿಗಿ ಭದ್ರತೆ ಇರುವಾಗ ಸುಮಾರು 300 ಕೆಜಿ ಆರ್‌ಡಿಎಕ್ಸ್ ಪುಲ್ವಾಮಾ ತಲುಪಿದ್ದು ಹೇಗೆ ಎಂದೂ ಸಂಜಯ್ ರಾವತ್ ಪ್ರಶ್ನಿಸಿದರು.

ಅಲ್ಲದೇ, ಯೋಧರಿಗೆ ವಾಯುಸೇನೆ ಮತ್ತು ಸರ್ಕಾರ ಏಕೆ ವಿಮಾನ ನೀಡಲಿಲ್ಲ?. ಪುಲ್ವಾಮಾ ದಾಳಿಯನ್ನು ರಾಜಕೀಯಗೊಳಿಸಿ ಚುನಾವಣೆ ಗೆಲ್ಲುವ ಯೋಜನೆಯಾಗಿತ್ತೇ?. ಈ ವಿಷಯದಲ್ಲಿ ಸರ್ಕಾರವನ್ನು ದೇಶದ್ರೋಹದಡಿ ವಿಚಾರಣೆ ನಡೆಸಬೇಕು. ಇಡೀ ಘಟನೆಗೆ ಕಾರಣವಾದ ಸಚಿವರನ್ನು ಕೋರ್ಟ್ ಮಾರ್ಷಲ್ ಮಾಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್​ಗೆ ಸಿಬಿಐ ಸಮನ್ಸ್

ವಿಜಯ್​ ಮಲ್ಯ ಎಲ್ಲಿ?: ಇದೇ ವೇಳೆ, ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸಿಎಂ ಕೇಜ್ರಿವಾಲ್​ ಅವರಿಗೆ ಸಿಬಿಐ ಸಮನ್ಸ್​ ಮಾಡಿರುವ ವಿಷಯ ಬಗ್ಗೆ ಮಾತನಾಡಿದ ಸಂಜಯ್​ ರಾವತ್​, ಪರಾರಿಯಾದ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಮರಳಿ ಕರೆತರಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಸಿಬಿಐ ತಂಡ ವಿಶೇಷ ಜೆಟ್‌ನಲ್ಲಿ ವಿಜಿಲೆನ್ಸ್‌ಗಾಗಿ ತೆರಳಿತ್ತು. ನೀರವ್ ಮೋದಿ ಅವರನ್ನೂ ಭಾರತಕ್ಕೆ ಕರೆ ತರಲು ಸಾಧ್ಯವಾಗಿಲ್ಲ. ಕಪ್ಪುಹಣವನ್ನೂ ತರಲು ಆಗಿಲ್ಲ. ಇವೆಲ್ಲ ಸರ್ಕಾರದ ವೈಫಲ್ಯಗಳು ಆಗಿವೆ. ಆದರೆ, ಭ್ರಷ್ಟಾಚಾರದ ಆರೋಪದ ಮೂಲಕ ಪ್ರತಿಪಕ್ಷ ನಾಯಕರಿಗೆ ಕಿರುಕುಳ ನೀಡುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಪ್ರತಿಪಕ್ಷಗಳ ಒಗ್ಗಟ್ಟು ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಈ ನಿಲುವನ್ನು ನಾವು ಸ್ವಾಗತಿಸುತ್ತೇವೆ. 2024ರ ವೇಳೆಗೆ ಇಡೀ ವಿಪಕ್ಷಗಳು ಒಂದೇ ವೇದಿಕೆ ಅಡಿಯಲ್ಲಿ ಒಂದಾಗಬೇಕು. ಎಲ್ಲ ಪ್ರಮುಖ ವಿಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಾನು ದೇಶಾದ್ಯಂತ ಸಂಚರಿಸುವೆ: ನಿತೀಶ್​ ಕುಮಾರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.