ಗುಂಟೂರು: ಭೀಕರ ರಸ್ತೆ ಅಪಘಾತದಲ್ಲಿ ತಂದೆ, ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ವೇಮುಲುಉರಿಪಾಡು ಬಳಿ ನಡೆದಿದೆ.
ಪಿರಂಗಿಪುರಂ ತಾಲೂಕಿನ ತಾಳ್ಲೂರಿನ ನಿವಾಸಿ ಶೇಖ್ ಚಿನ ಮಸ್ತಾನ್ ಮತ್ತು ಆತನ ಹೆಂಡ್ತಿ ನೂರ್ಜಹಾನ್ ಹಾಗೂ ಆತನ ಮಗ ಹುಸೇನ್ ಕೆಲಸದ ನಿಯಮಿತ ಬೈಕ್ ಮೇಲೆ ಗುಂಟೂರಿಗೆ ಹೋಗುತ್ತಿದ್ದರು. ಈ ವೇಳೆ ವೇಮುಲುರಿಪಾಡು ಪ್ರದೇಶದ ತುಳಸಿ ಸೀಡ್ಸ್ ಕಂಪನಿ ಹತ್ತಿರ ಗುಂಟೂರಿನಿಂದ ನರಸರಾವು ಪೇಟಕ್ಕೆ ಹೋಗುತ್ತಿದ್ದ ಕಾರು ಇವರಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ತಂದೆ, ತಾಯಿ ಮತ್ತು ಮಗ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಮೂವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿದ ಸಂಬಂಧಿಕರು ಆಸ್ಪತ್ರೆಗೆ ದೌಡಾಯಿಸಿದ್ದರು. ಈ ವೇಳೆ ಸಂಬಂಧಿಕರ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.