ETV Bharat / bharat

ಶ್ವಾಸಕೋಶ ಸೋಂಕು..175 ಕಿ.ಮೀ ಗ್ರೀನ್ ಕಾರಿಡಾರ್​ ಮೂಲಕ ಭೋಪಾಲ್​ನಿಂದ ಹೈದರಾಬಾದ್​ಗೆ ವೈದ್ಯನ ರವಾನೆ! - madhya pradesh

ಕೊರೊನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡ್ತಿದ್ದ ಡಾ. ಸತ್ಯೇಂದ್ರ ಮಿಶ್ರಾ ಇದೀಗ ಡೆಡ್ಲಿ ವೈರಸ್​ಗೊಳಗಾಗಿದ್ದು, ವಿಶೇಷ ಚಿಕಿತ್ಸೆ ನೀಡುವ ಉದ್ದೇಶದಿಂದ ಹೈದರಾಬಾದ್​ಗೆ ಕರೆ ತರಲಾಗಿದೆ.

Dr. Satyendra mishra
Dr. Satyendra mishra
author img

By

Published : Apr 19, 2021, 5:59 PM IST

ಭೋಪಾಲ್​(ಮಧ್ಯಪ್ರದೇಶ): ಕಳೆದ ಒಂದು ವರ್ಷದಿಂದ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​ ಹಾವಳಿ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಕೊರೊನಾ ಸೋಂಕಿತರಿಗೆ ವೈದ್ಯರು ದೇವರ ರೂಪದಲ್ಲಿ ಚಿಕಿತ್ಸೆ ನೀಡ್ತಿದ್ದಾರೆ.

ಡಾ. ಸತ್ಯೇಂದ್ರ ಮಿಶ್ರಾ ಅವರಿಗೆ ಚಿಕಿತ್ಸೆಗಾಗಿ ಹೈದರಾಬಾದ್​ಗೆ

ಮಧ್ಯಪ್ರದೇಶದ ಭೋಪಾಲ್​​ನಲ್ಲಿನ ಕೊರೊನಾ ರೋಗಿಗಳ ಪಾಲಿಗೆ ದೇವರಾಗಿರುವ ಡಾ. ಸತ್ಯಂಧ್ರ ಮಿಶ್ರಾ ಇದೀಗ ಕೊರೊನಾ ಸೋಂಕಿಗೊಳಗಾಗಿದ್ದು, ಅವರ ಶ್ವಾಸಕೋಶ ಶೇ. 80ರಷ್ಟು ಸೋಂಕಿಗೊಳಗಾಗಿದೆ. ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸಹೋದ್ಯೋಗಿಗಳು ಧ್ವನಿ ಎತ್ತುತ್ತಿದ್ದಂತೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಹೈದರಾಬಾದ್​​ನಲ್ಲಿರುವ ದೇಶದ ಖ್ಯಾತ ಶ್ವಾಸಕೋಶ ತಜ್ಞ ಅಪರ್ ಜಿಂದಾಲ್​​ ಅವರ ಬಳಿ ಕಳುಹಿಸಲು ನಿರ್ಧರಿಸಿದ್ದಾರೆ.

Dr. Satyendra mishra
ಏರ್ ಆ್ಯಂಬುಲೆನ್ಸ್​​​ ಮೂಲಕ ಹೈದರಾಬಾದ್​ಗೆ

ಭಾನುವಾರ-ಸೋಮವಾರ ಮಧ್ಯರಾತ್ರಿ ಹೈದರಾಬಾದ್​ನ ತಜ್ಞರ ತಂಡ ಸಾಗರ್​ ತಲುಪಿತು. ಅಲ್ಲಿಂದ ಭೋಪಾಲ್​ಗೆ ಡಾ. ಸತ್ಯೇಂದ್ರ ಮಿಶ್ರಾ ಅವನ್ನ ಕರೆತರಲಾಗಿದ್ದು, ಅಲ್ಲಿಂದ ಏರ್​ ಆ್ಯಂಬುಲೆನ್ಸ್​​ ಮೂಲಕ ಹೈದರಾಬಾದ್​ಗೆ ಕರೆತರಲಾಗಿದ್ದು, ಇದೀಗ ಚಿಕಿತ್ಸೆ ಆರಂಭಗೊಂಡಿದೆ.

Dr. Satyendra mishra
ಏರ್​ ಆಂಬ್ಯುಲೆನ್ಸ್​​ನಲ್ಲಿ ಚಿಕಿತ್ಸೆ

ಅವರನ್ನ ಕರೆತರುವ ಉದ್ದೇಶದಿಂದ 175 ಕಿಲೋ ಮೀಟರ್​ ಉದ್ಧದ ಹಸಿರು ಕಾರಿಡಾರ್​ ನಿರ್ಮಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ದೀಪಕ್​ ಸಿಂಗ್ ತಿಳಿಸಿದ್ದಾರೆ. ಬುಂದೇಲ್​ಖಂಡ್​​ದ ವೈದ್ಯಕೀಯ ಕಾಲೇಜ್​​ನಲ್ಲಿ ಡಾ. ಸತ್ಯೇಂದ್ರ ಮಿಶ್ರಾ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಅವರಿಗೆ ಶೇ.80ರಷ್ಟು ಶ್ವಾಸಕೋಶ ಕೊರೊನಾದಿಂದ ಸೋಂಕಿಗೊಳಗಾಗಿದೆ. ವಿಶೇಷ ಚಿಕಿತ್ಸೆಗಾಗಿ ಮಧ್ಯಪ್ರದೇಶ ಸರ್ಕಾರ ಆಂಬ್ಯುಲೆನ್ಸ್​​ ಒದಗಿಸಿದ್ದು, ಅದರಲ್ಲೇ ಹೈದರಾಬಾದ್​ಗೆ ಕಳುಹಿಸಲಾಗಿದೆ. ಈಗಾಗಲೇ ಹೈದರಾಬಾದ್​ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.