ETV Bharat / bharat

ಒಂದೇ ದಿನದಲ್ಲಿ ಮಿಲಿಯನೇರ್ ಆದ ಸಾಮಾನ್ಯ ವ್ಯಕ್ತಿ..! ಕೆಬಿಸಿಯಲ್ಲಿ ಜಾಕ್ ಪಾಟ್ ಹೊಡೆದ ಜಾಣ

ಕೌನ್ ಬನೇಗಾ ಕರೋಡ್ ಪತಿ ಶೋ ಮೂಲಕ ವ್ಯಕ್ತಿಯೊಬ್ಬ ಒಂದೇ ದಿನದಲ್ಲಿ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಅವರು, ತಮ್ಮ 22 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Sagar bhupendra chaudhary won 50 lakhs rupees in kbc big b amitabh bachhan show

author img

By

Published : Nov 9, 2022, 5:39 PM IST

ಭೋಪಾಲ್​( ಮಧ್ಯಪ್ರದೇಶ): ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ ಪತಿ ಶೋದಲ್ಲಿ ಭೂಪೇಂದ್ರ ಚೌಧರಿ ಎಂಬ ಸಾಮಾನ್ಯ ವ್ಯಕ್ತಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದು ಅಚ್ಚರಿಗೆ ಕಾರಣರಾಗಿದ್ದಾರೆ. ಈ ಮೂಲಕ ತನ್ನ 22 ವರ್ಷದ ಕನಸನ್ನು ಲಕ್ಷಾಧಪತಿ ಯಾಗುವ ಮೂಲಕ ನನಸಾಗಿಸಿಕೊಂಡಿದ್ದಾರೆ.

Sagar bhupendra chaudhary won 50 lakhs rupees in kbc big b amitabh bachhan show
ಕೆಬಿಸಿಯಲ್ಲಿ ಜಾಕ್ ಪಾಟ್ ಹೊಡೆದ ಜಾಣ

16ನೇ ವಯಸ್ಸಿನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದರು. ತನ್ನ 38ನೇ ವಯಸ್ಸಿನಲ್ಲಿ ಆಸೆ ಪೂರ್ಣಗೊಂಡಿದ್ದಕ್ಕೆ ಮನೆಯವರು ಖುಷಿ ವ್ಯಕ್ತಪಡಿಸಿದ್ದಾರೆ.

ಭೂಪೇಂದ್ರ ಬಾಲ್ಯದಿಂದಲೂ ಕೆಬಿಸಿ (ಕೌನ್ ಬನೇಗಾ ಕರೋಡ್ ಪತಿ) ಶೋ ನೋಡಿಕೊಂಡು ಬಂದವರು. ಶೋದಲ್ಲಿ ಪಾಲ್ಗೊಳ್ಳುವ ಆಸೆ ಹೊತ್ತುಕೊಂಡಿದ್ದ ಅವರು ಹಲವು ಬಾರಿ ಪ್ರಯತ್ನ ಸಹ ಮಾಡಿದ್ದರು. ಆದರೆ, ಅದ್ಯಾವುದು ಕೈಗೂಡಿರಲಿಲ್ಲ. 16ನೇ ವಯಸ್ಸಿನಲ್ಲಿ ಪ್ರಾರಂಭಿಸಿದ್ದ ಪ್ರಯತ್ನ ಅಂತಿಮವಾಗಿ ತನ್ನ 38ನೇ ವಯಸ್ಸಿನಲ್ಲಿ ಫಲ ನೀಡಿದೆ.

ಸಾಮಾಜಿಕ ಜಾಲತಾಣದಲ್ಲಿ ಕೆಬಿಸಿ ಕಾರ್ಯಕ್ರಮದ ಪ್ರೋಮೋ ಹರಿದಾಡುತ್ತಿದ್ದು, ನವೆಂಬರ್ 10 ರಂದು ಪ್ರಸಾರವಾಗಲಿದೆ. ಸುತ್ತಿನಂದ ಸುತ್ತಿಗೆ ಅರ್ಹತೆ ಪಡೆದಿರುವ ಭೂಪೇಂದ್ರ 50 ಲಕ್ಷ ರೂಪಾಯಿ ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ. ಗುಜರಾತಿನ ದಾಹೋದ್​​ನಲ್ಲಿ ಕೃಷಿ ತಜ್ಞರಾಗಿ ಕೆಲಸ ಮಾಡುತ್ತಿರುವ ಭೂಪೇಂದ್ರಗೆ ಈ ಹಾಟ್ ಸೀಟ್ ಅಷ್ಟು ಸುಲಭದ್ದಾಗಿರಲಿಲ್ಲ. ಸುಮಾರು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಟಾಪ್ 10 ಸ್ಪರ್ಧಿಯಾಗಿದ್ದರು. ಕಾರ್ಯಕ್ರಮ ರಾತ್ರಿ 9 ರಿಂದ ಪ್ರಸಾರವಾಗಲಿದೆ.

ಭೂಪೇಂದ್ರ ಅವರ ತಂದೆ ಬಸಂತ್ ಚೌಧರಿ ನೀರಾವರಿ ಇಲಾಖೆಯಲ್ಲಿ ಸಬ್ ಇಂಜಿನಿಯರ್ ಆಗಿ ನಿವೃತ್ತರಾಗಿದ್ದಾರೆ. ತಾಯಿ ಪನ್ಬಾಯಿ ಚೌಧರಿ ಗೃಹಿಣಿಯಾಗಿದ್ದರೆ. ಕೌನ್ ಬನೇಗಾ ಕರೋಡ್ ಪತಿ ಶೋಗೆ ಆಯ್ಕೆ ಆಗಿದ್ದಕ್ಕೆ ಅವರ ಕುಟುಂಬ ಸೇರಿದಂತೆ ಇಡೀ ಸಾಗರ ಜಿಲ್ಲೆ ಹೆಮ್ಮೆಪಡುತ್ತಿದೆ. ಎಲ್ಲರೂ ಕಾರ್ಯಕ್ರಮ ಪ್ರಸಾರಕ್ಕಾಗಿ ಕಾಯುತ್ತಿದ್ದಾರೆ.

ಕೆಬಿಸಿ ಸಂಚಿಕೆಯಲ್ಲಿ ಅಮಿತಾಬ್ ಬಚ್ಚನ್ ಅವರು ಖುರೈ ಬಗ್ಗೆ ತಿಳಿಸಿಕೊಡಲು ಕೇಳಿದರು. ಕಾರ್ಯಕ್ರಮದಲ್ಲಿ ನಾನು ಅವರಿಗೆ ಖುರೈ ಕಿ ದೋಹೆಲಾ, ಕೃಷಿ ಯಂತ್ರ ಮತ್ತು ಖುರೈ ಅವರ ಶರ್ಬತಿ ಗೋಧಿ ಮತ್ತು ಎರಾನ್ ಬಗ್ಗೆ ವಿವರವಾದ ಮಾಹಿತಿ ನೀಡಿದ್ದೇನೆ. ಈ ಪ್ರದೇಶದಿಂದ ಈಗ ಇಬ್ಬರು ಭೂಪೇಂದ್ರರು ಪ್ರಸಿದ್ಧಿಯಾಗಿದ್ದಾರೆ. ಒಬ್ಬರು ನಗರ ಆಡಳಿತ ಸಚಿವ ಭೂಪೇಂದ್ರ ಸಿಂಗ್ ಮತ್ತು ಎರಡನೇಯದಾಗಿ ಕೆಬಿಸಿಗೆ ಬಂದ ನಂತರ ನಾನು ಎಂದು ಹೇಳಿರುವುದಾಗಿ ಅವರು ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಉಚ್ಛಾಟನೆ ಮಾಡದಿದ್ದರೆ ಕಾಂಗ್ರೆಸ್ ಹಿಂದೂ ವಿರೋಧಿ ಅನ್ನೋದು ಸಾಬೀತಾಗುತ್ತೆ: ಛಲವಾದಿ ನಾರಾಯಣಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.