ETV Bharat / bharat

ಮತ್ತೆರಡು ದಿನ ಸಚಿನ್ ವಾಜೆ ಎನ್​ಐಎ ಕಸ್ಟಡಿಗೆ

author img

By

Published : Apr 7, 2021, 4:37 PM IST

ಸಚಿನ್ ವಾಜೆ ಮಾರ್ಚ್​​​ 13 ರಂದು ಬಂಧಿತನಾಗಿದ್ದ. ಇದಕ್ಕೂ ಮೊದಲು ಹೆಚ್ಚಿನ ವಿಚಾರಣೆಗೆ ಎನ್​ಐಎ ಅಧಿಕಾರಿಗಳು ಎನ್ಐಎ ಕೋರ್ಟ್​ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ಏಪ್ರಿಲ್ 7ರವರೆಗೆ ಆರೋಪಿಯನ್ನು ಎನ್​ಐಎ ಕಸ್ಟಡಿಗೆ ನೀಡಿತ್ತು..

Sachin Vaze to remain in NIA custody till April 9, orders court
ಸಚಿನ್ ವಾಜೆಗೆ ಮತ್ತೆರಡು ದಿನ ಎನ್​ಐಎ ಕಸ್ಟಡಿ ವಿಸ್ತರಣೆ

ಮುಂಬೈ : ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆ ಪ್ರಕರಣ ಮತ್ತು ಮನ್ಸುಖ್ ಹಿರೇನ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಮಾನತುಗೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ವಶದಲ್ಲಿರುವ ಮಾಜಿ ಪೊಲೀಸ್​ ಅಧಿಕಾರಿ ಸಚಿನ್ ವಾಜೆ ಅವರ ಕಸ್ಟಡಿ ಅವಧಿಯನ್ನು ಮತ್ತೆ ಎರಡು ದಿನಗಳವರೆಗೆ ವಿಸ್ತರಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯ ಈ ಆದೇಶ ನೀಡಿದೆ. ಮುಂಬೈನ ಮುಖೇಶ್​ ಅಂಬಾನಿಯ ನಿವಾಸ ಆ್ಯಂಟಿಲಿಯಾ ಹೊರಗೆ ಸ್ಫೋಟಕ ಇರಿಸಿದ್ದ ಆರೋಪದಲ್ಲಿ ವಿಚಾರಣೆಗಾಗಿ ಸಚಿನ್ ವಾಜೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಬಹುಭಾಷಾ ನಟ ಶರತ್​ಕುಮಾರ್ ದಂಪತಿಗೆ ಒಂದು ವರ್ಷ ಜೈಲು ಶಿಕ್ಷೆ: ಕಾರಣ?

ಸಚಿನ್ ವಾಜೆ ಮಾರ್ಚ್​​​ 13 ರಂದು ಬಂಧಿತನಾಗಿದ್ದ. ಇದಕ್ಕೂ ಮೊದಲು ಹೆಚ್ಚಿನ ವಿಚಾರಣೆಗೆ ಎನ್​ಐಎ ಅಧಿಕಾರಿಗಳು ಎನ್ಐಎ ಕೋರ್ಟ್​ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ಏಪ್ರಿಲ್ 7ರವರೆಗೆ ಆರೋಪಿಯನ್ನು ಎನ್​ಐಎ ಕಸ್ಟಡಿಗೆ ನೀಡಿತ್ತು.

ಇಂದಿಗೆ ಎನ್​ಐಎ ಅವಧಿ ಮುಕ್ತಾಯವಾಗಿರುವ ಹಿನ್ನೆಲೆ ಮತ್ತಷ್ಟು ವಿಚಾರಣೆಗಾಗಿ ಕೋರ್ಟ್​ಗೆ ಮನವಿ ಮಾಡಲಾದ ಹಿನ್ನೆಲೆ ಎನ್​ಐಎ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ನ್ಯಾಯಾಲಯವು ಮತ್ತೆರಡು ದಿನಗಳ ಕಾಲ ಕಸ್ಟಡಿ ಅವಧಿ ವಿಸ್ತರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.