ETV Bharat / bharat

ಬಾಲಕಿಯನ್ನು ಬಸ್ಸಿನಲ್ಲಿಯೇ ಮರೆತ ಶಬರಿಮಲೆ ಯಾತ್ರಿಕರ ಗುಂಪು: ಬಾಲಕಿ ಸಿಕ್ಕಿದ್ದು ಹೇಗೆ? - etv bharat karnataka

Sabarimala Pilgrims: ಅಯ್ಯಪ್ಪನ ದರ್ಶನಕ್ಕೆಂದು ತಮಿಳುನಾಡಿನಿಂದ ಪಂಪಾಕ್ಕೆ ಬಂದಿದ್ದ ಯಾತ್ರಿಕರ ಗುಂಪೊಂದು ಬಾಲಕಿಯನ್ನು ಬಸ್ಸಿನಲ್ಲಿಯೇ ಮರೆತ ಘಟನೆ ನಡೆದಿದೆ.

Etv Bharatsabarimala-pilgrims-from-tamil-nadu-forgot-a-nine-year-old-girl-in-the-bus
ಬಾಲಕಿಯನ್ನು ಬಸ್ಸಿನಲ್ಲಿಯೇ ಮರೆತ ಶಬರಿಮಲೆ ಯಾತ್ರಿಕರು: ಬಾಲಕಿ ತನ್ನವರನ್ನು ಸೇರಿದ್ದು ಹೇಗೆ ಗೊತ್ತಾ?
author img

By ETV Bharat Karnataka Team

Published : Nov 22, 2023, 3:55 PM IST

ಪತ್ತನಂತಿಟ್ಟ(ಕೇರಳ): ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆಂದು ತಮಿಳುನಾಡಿನಿಂದ ಪಂಪಾಕ್ಕೆ ಬಂದಿದ್ದ ಭಕ್ತರ ಗುಂಪೊಂದು ಒಂಬತ್ತು ವರ್ಷದ ಬಾಲಕಿಯನ್ನು ಬಸ್ಸಿನಲ್ಲಿಯೇ ಮರೆತ ಘಟನೆ ನಡೆದಿದೆ. ತಮಿಳುನಾಡು ಮೂಲದ ನಾಲ್ಕನೇ ತರಗತಿ ವಿದ್ಯಾರ್ಥಿನಿ ತನ್ನ ತಂದೆ, ತಾತ ಮತ್ತು ಇತರೆ ಯಾತ್ರಿಕರೊಂದಿಗೆ ಆಂಧ್ರಪ್ರದೇಶದ ಸರ್ಕಾರಿ ಬಸ್‌ನಲ್ಲಿ ಅಯ್ಯಪ್ಪನ ದರ್ಶನಕ್ಕೆ ಬಂದಿದ್ದರು.

ಪಂಪಾದಲ್ಲಿ ಎಲ್ಲರೂ ಇಳಿದಿದ್ದಾರೆ, ಆಗ ಬಾಲಕಿ ನಾಪತ್ತೆಯಾಗುರುವುದು ತಿಳಿದುಬಂದಿದೆ. ತಕ್ಷಣ ಬಾಲಕಿಯ ತಂದೆ ಪಂಪಾದಲ್ಲಿರುವ ಪೊಲೀಸ್ ಕಂಟ್ರೋಲ್ ರೂಂಗೆ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಈ ಕುರಿತು ಸಂಚಾರಿ ಪೊಲೀಸರಿಗೆ ಸಂದೇಶ ರವಾನಿಸಿದ್ದಾರೆ. ಸಂದೇಶವನ್ನು ಸ್ವೀಕರಿಸಿದ ಅಟಿಂಗಲ್ ಎಎಂವಿಐ ಆರ್ ರಾಜೇಶ್ ಮತ್ತು ನಿಲಕ್ಕಲ್ - ಪಂಪಾ ಮಾರ್ಗದಲ್ಲಿ ಗಸ್ತಿನಲ್ಲಿದ್ದ ಕುನ್ನತ್ತೂರು ಎಎಂವಿಐ ಜಿ.ಅನಿಲ್‌ಕುಮಾರ್ ಬಾಲಕಿಗಾಗಿ ಹುಡುಕಾಟ ಆರಂಭಿಸಿದ್ದರು.

ಈ ವೇಳೆ ಆಂಧ್ರಪ್ರದೇಶದ ಬಸ್‌ ಈ ಮಾರ್ಗದಲ್ಲಿ ತೆರಳುತ್ತಿರುವುದನ್ನು ಗುರುತಿಸಿದ್ದಾರೆ. ಸಂಚಾರಿ ಪೊಲೀಸರು ಬಸ್​ಅನ್ನು ತಡೆದು ನಿಲ್ಲಿಸಿ ಚಾಲಕ ಮತ್ತು ಕಂಡಕ್ಟರ್​ ಬಳಿ ಬಾಲಕಿ ಬಗ್ಗೆ ವಿಚಾರಿಸಿದ್ದಾರೆ. ಅವರು, ಎಲ್ಲರೂ ಪಂಪಾದಲ್ಲೇ ಇಳಿದಿದ್ದಾರೆ, ಬಸ್‌ನಲ್ಲಿ ಯಾರೂ ಇಲ್ಲ, ಬಸ್ಸನ್ನು ನಿಲಕ್ಕಲ್​ನಲ್ಲಿ ಪಾರ್ಕಿಂಗ್‌ ಮಾಡಲು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ನಂತರ ಪೊಲೀಸರು ಬಸ್​ನ ಒಳಗೆ ಪರಿಶೀಲಿಸಿದಾಗ ಬಾಲಕಿ ಬಸ್ಸಿನ ಹಿಂದಿನ ಸೀಟಿನಲ್ಲಿ ಮಲಗಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಕಂಟ್ರೋಲ್ ರೂಂಗೆ ಕರೆತರಲಾಗಿದೆ.

ಕಂಟ್ರೋಲ್ ರೂಂ ಧಾವಿಸಿದ ಬಾಲಕಿಯ ತಂದೆ ಹಾಗೂ ಯಾತ್ರಿಕರು ಬಾಲಕಿಯನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಬಾಲಕಿಯನ್ನು ಜೋಪಾನವಾಗಿ ತಮ್ಮೊಂದಿಗೆ ಕರೆದುಕೊಂಡು ಅಯ್ಯಪ್ಪನ ಸನ್ನಿಧಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: ಉತ್ತರಕಾಶಿ ಸುರಂಗ ಕುಸಿತ: 11ನೇ ದಿನದ ರಕ್ಷಣಾ ಕಾರ್ಯಾಚರಣೆ; ಹೊಸ ರಸ್ತೆ ನಿರ್ಮಾಣ, ಆಂಬ್ಯುಲೆನ್ಸ್‌ಗಳು ರೆಡಿ

ಅಯ್ಯಪ್ಪನ ಭಕ್ತರಿಗೆ 22 ವಿಶೇಷ ರೈಲುಗಳ ಸೇವೆ(ಹೈದರಾಬಾದ್​) : ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗಾಗಿ ಅನುಕೂಲವಾಗಲಿ ಎಂದು 22 ವಿಶೇಷ ರೈಲುಗಳನ್ನು ಬಿಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆಯಲ್ಲಿ ನಿನ್ನೆ ತಿಳಿಸಿತ್ತು.

ಯಾವ ದಿನ, ಎಲ್ಲಿಂದ ಎಲ್ಲಿಗೆ ರೈಲು?: ಸಿಕಂದರಾಬಾದ್ ನಿಂದ ಕೊಲ್ಲಂಗೆ ಈ ತಿಂಗಳ 26 ಮತ್ತು ಡಿಸೆಂಬರ್ 3, ಕೊಲ್ಲಂ-ಸಿಕಂದರಾಬಾದ್​ಗೆ ನ.28 ಹಾಗೂ ಡಿ.5, ನರಸಾಪುರ- ಕೊಟ್ಟಾಯಂಗೆ ನ.26 ಹಾಗೂ ಡಿ.3, ಕೊಟ್ಟಾಯಂ-ನರಸಾಪುರಗೆ ನ.27 ಹಾಗೂ ಡಿ.4, ಕಾಚಿಗುಡ-ಕೊಲ್ಲಂಗೆ ನ.22, 29 ಹಾಗೂ ಡಿ.6, ಕೊಲ್ಲಂ-ಕಾಚಿಗುಡಕ್ಕೆ ನ. 24 ಹಾಗೂ ಡಿ.1 ಮತ್ತು 8, ಕಾಕಿನಾಡ-ಕೊಟ್ಟಾಯಂಗೆ ನ.23 ಮತ್ತು 30, ಕೊಟ್ಟಾಯಂ-ಕಾಕಿನಾಡಕ್ಕೆ ನ.25 ಮತ್ತು ಡಿ.2, ಸಿಕಂದರಾಬಾದ್-ಕೊಲ್ಲಂಗೆ ನ.24 ಮತ್ತು ಡಿ.1, ನ.25 ಮತ್ತು ಡಿ.2 ರಂದು ಕೊಲ್ಲಂ ನಿಂದ ಸಿಕಂದರಾಬಾದ್​ಗೆ ವಿಶೇಷ ರೈಲುಗಳ ಸಂಚಾರ ಇರಲಿದೆ ರೈಲ್ವೆ ಮಾಹಿತಿ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.