ETV Bharat / bharat

ಕ್ರೂಸ್‌ ಡ್ರಗ್ಸ್‌ ಪಾರ್ಟಿ ಕೇಸ್​​​: ಶಾರುಖ್ ಪುತ್ರ ಆರ್ಯನ್‌ ಖಾನ್‌ ಸೇರಿ 7 ಮಂದಿಗೆ 14 ದಿನ ನ್ಯಾಯಾಂಗ ಬಂಧನ

author img

By

Published : Oct 7, 2021, 7:27 PM IST

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಆರ್ಯನ್ ಖಾನ್​ ಸೇರಿದಂತೆ ಇತರೆ ಏಳು ಮಂದಿಗೆ ಮುಂಬೈ ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ನಡುವೆ ಜಾಮೀನುಕೋರಿ ಆರ್ಯನ್​ ಖಾನ್​ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧದ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.

Aryan Khan
Aryan Khan

ಮುಂಬೈ: ಡ್ರಗ್ಸ್‌ ಪಾರ್ಟಿಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನವಾಗಿರುವ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ರನ್ನು ಅಕ್ಟೋಬರ್‌ 7ರ ವರೆಗೆ ಎನ್‌ಸಿಬಿ ವಶಕ್ಕೆ ನೀಡಿ ಈ ಹಿಂದೆ ಆದೇಶ ಹೊರಡಿಸಿದ್ದ ಮುಂಬೈ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಇಂದು ಮಹತ್ವದ ನಿರ್ಧಾರ ಹೊರಡಿಸಿದೆ.

ಶಾರೂಖ್ ಖಾನ್​ ಪುತ್ರ ಆರ್ಯನ್​ ಸೇರಿದಂತೆ ಇತರೆ 7 ಮಂದಿಗೆ ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ, ಆದೇಶ ಹೊರಹಾಕಿದೆ. ಕ್ರೂಸ್‌ ಹಡಗಿನಲ್ಲಿ ಡ್ರಗ್ಸ್‌ ಪಾರ್ಟಿಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನವಾಗಿದ್ದು, ಇದೀಗ ಎನ್​ಸಿಬಿ ಮತ್ತಷ್ಟು ಮಾಹಿತಿ ಕಲೆಹಾಕಲಿದೆ.

  • #UPDATE | Mumbai court sends Aryan Khan, Arbaz Merchant and 6 others to judicial custody for 14 days in drugs seizure at cruise ship

    Court says the case will now be heard by special NDPS court https://t.co/8rqko8epsc

    — ANI (@ANI) October 7, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ರೈಲ್ವೆ ಪ್ಲಾಟ್​ ಫಾರ್ಮ್​, ರೈಲಿನಲ್ಲಿ ಸಂಚರಿಸುವಾಗ ಮಾಸ್ಕ್​ ಕಡ್ಡಾಯ.. ಇಲ್ಲದಿದ್ದರೆ 500 ರೂ. ದಂಡ

23 ವರ್ಷದ ಆರ್ಯನ್‌ ಖಾನ್‌ ಬಳಿ ಡ್ರಗ್ಸ್‌ ಪತ್ತೆಯಾಗಿರಲಿಲ್ಲ. ಆದರೆ, ಅವರ ಫೋನ್‌ ಚಾಟ್‌ಗಳನ್ನು ಆಧರಿಸಿ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯ ಬಗ್ಗೆ ತನಿಖೆ ಮಾಡಬೇಕು. ಹೀಗಾಗಿ ಇನ್ನೂ 1 ವಾರ ಕಾಲ ತಮ್ಮ ವಶಕ್ಕೆ ನೀಡುವಂತೆ ಈ ಹಿಂದೆ ಮಾದಕ ವಸ್ತು ನಿಯಂತ್ರಣ ದಳ - ಎನ್‌ಸಿಬಿ ಕೋರ್ಟ್‌ಗೆ ಮನವಿ ಮಾಡಿತು.ಈ ವೇಳೆ ಕೋರ್ಟ್​​ ಎರಡು ದಿನಗಳ ಕಾಲ ವಶಕ್ಕೆ ನೀಡಿತ್ತು. ಆದರೆ ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.

ಜಾಮೀನು ಅರ್ಜಿ ಸಲ್ಲಿಸಿದ ಆರ್ಯನ್​ ಖಾನ್

ಈ ನಡುವೆ ಜಾಮೀನುಕೋರಿ ಆರ್ಯನ್​ ಖಾನ್​ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧದ ಅರ್ಜಿ ವಿಚಾರಣೆ ನಾಳೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.