ನವದೆಹಲಿ: ಚೀನಾದೊಂದಿಗೆ ಸೇನಾ ಮೈತ್ರಿಯ ಒಪ್ಪಂದಕ್ಕೆ ಸಹಿ ಹಾಕಲು ಚಿಂತನೆ ನಡೆಸಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಮತ್ತು ಲಾವ್ರೋವ್ ಮಂಗಳವಾರ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದು, ಈ ವೇಳೆ ತಾವು ಚೀನಾದೊಂದಿಗೆ ಸೇನಾ ಮೈತ್ರಿಯ ಒಪ್ಪಂದಕ್ಕೆ ಸಹಿ ಹಾಕಲು ಚಿಂತನೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ 'ಇಲ್ಲ' ಎಂದು ಉತ್ತರ ನೀಡಿದ್ದಾರೆ.
-
#WATCH | "No," says Russian Foreign Minister Sergey Lavrov on being asked if Russia is planning to sign a military alliance with China pic.twitter.com/xwYgO7ErZ1
— ANI (@ANI) April 6, 2021 " class="align-text-top noRightClick twitterSection" data="
">#WATCH | "No," says Russian Foreign Minister Sergey Lavrov on being asked if Russia is planning to sign a military alliance with China pic.twitter.com/xwYgO7ErZ1
— ANI (@ANI) April 6, 2021#WATCH | "No," says Russian Foreign Minister Sergey Lavrov on being asked if Russia is planning to sign a military alliance with China pic.twitter.com/xwYgO7ErZ1
— ANI (@ANI) April 6, 2021
ಇದ ಜೊತೆಗೆ ಅಮೆರಿಕದ ಹೇಳಿಕೆಗಳ ಬಗ್ಗೆ ನಾವು ಚರ್ಚೆ ನಡೆಸಿಲ್ಲ. ಇದಕ್ಕೆ ಬದಲಾಗಿ ನಾವು ನಮ್ಮ ಸೇನಾ ಸಹಕಾರವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಸೇನೆಯ ತಾಂತ್ರಿಕ ಸಹಕಾರಕ್ಕೆ ಅಂತರ್ ಸರ್ಕಾರಿ ಸಮಿತಿ ಹೊಂದಿದ್ದು, ಅದು ಅಗತ್ಯ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಲಾವ್ರೋವ್ ಈ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ‘6ನೇ ವೇತನ ಆಯೋಗ ಜಾರಿಯಿಲ್ಲ, ಸಂಧಾನವೂ ಇಲ್ಲ; ಮುಷ್ಕರ ನಡೆಸಿದ್ರೆ ಕಠಿಣ ಕ್ರಮ’
'ಮೇಡ್ ಇನ್ ಇಂಡಿಯಾ' ಪರಿಕಲ್ಪನೆಯೊಳಗೆ ಭಾರತದಲ್ಲಿ ರಷ್ಯಾದ ಮಿಲಿಟರಿ ಉಪಕರಣಗಳನ್ನು ತಯಾರಿಸುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಭಾರತೀಯ ಪಾಲುದಾರರು ಅಥವಾ ಸ್ನೇಹಿತರಿಂದ ನಾವು ಯಾವುದೇ ಬಯಸುವುದಿಲ್ಲ ಎಂದು ಲಾವ್ರೋವ್ ಸ್ಪಷ್ಟನೆ ನೀಡಿದ್ದಾರೆ.
ಉಭಯ ದೇಶಗಳ ವಿದೇಶಾಂಗ ಮಂತ್ರಿಗಳ ನಡುವೆ ಆಫ್ಘಾನಿಸ್ತಾನದ ಈಗಿನ ಪರಿಸ್ಥಿತಿ, ರಷ್ಯಾ ಭಾರತದ ಗಗನಯಾನ ಮಿಷನ್ ಬಗ್ಗೆ ಸಹಕಾರ ಮುಂತಾದ ವಿಚಾರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.