ETV Bharat / bharat

ರೂಪಾಯಿ ಮೌಲ್ಯ ಪಾತಾಳದತ್ತ: ಅತಿ ಕನಿಷ್ಠ ಮಟ್ಟದ ಹೊಸ ದಾಖಲೆ ! - ಯುಎಸ್​ ಡಾಲರ್ ಸೂಚ್ಯಂಕ

ಯುಎಸ್​ ಫೆಡರಲ್ ರಿಸರ್ವ್ ಹೊಸದಾಗಿ ಬಿಗಿಯಾದ ವಿತ್ತೀಯ ನೀತಿ ನಿಯಂತ್ರಕ ಕ್ರಮಗಳನ್ನು ಜಾರಿ ಮಾಡಿದ್ದು ಕೂಡ ಡಾಲರ್​​ಗೆ ಬೆಂಬಲ ನೀಡಿದೆ. ಈ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಇತರ ಕರೆನ್ಸಿಗಳು ದುರ್ಬಲವಾಗುತ್ತಿವೆ.

ರೂಪಾಯಿ ಮೌಲ್ಯ ಪಾತಾಳದತ್ತ:
Rupee value falls to rock bottom
author img

By

Published : Sep 26, 2022, 12:40 PM IST

ನವದೆಹಲಿ: ಇಂದು ಕೂಡ ರೂಪಾಯಿ ಮೌಲ್ಯದಲ್ಲಿನ ಕುಸಿತ ಮುಂದುವರೆದಿದ್ದು, ರೂಪಾಯಿ ಕಳೆದ ವಾರದ ಕನಿಷ್ಠ ಮಟ್ಟದಿಂದ ಮತ್ತಷ್ಟು ಕೆಳಕ್ಕಿಳಿದಿದೆ. ಸೋಮವಾರ ಬೆಳಗ್ಗೆ ಜೀವಮಾನದ ಮತ್ತೊಂದು ಕನಿಷ್ಠ ಮಟ್ಟಕ್ಕೆ ತಲುಪಿದೆ. ಯುಎಸ್​ ಡಾಲರ್ ಸೂಚ್ಯಂಕ ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿತ ನಿರಂತರವಾಗಿ ಮುಂದುವರೆದಿದೆ. ಡಾಲರ್‌ನಂಥ ಸುರಕ್ಷಿತ ಕರೆನ್ಸಿಗೆ ಬೇಡಿಕೆಯು ಇನ್ನೂ ಹೆಚ್ಚಾಗಲಿದೆ ಎಂಬ ಭರವಸೆಯ ಮೇಲೆ ಡಾಲರ್ ಸೂಚ್ಯಂಕ ಬಲವಾಗುತ್ತಿದೆ.

ಇಂದು ಬೆಳಗ್ಗೆ ಯುಎಸ್ ಡಾಲರ್ ಎದುರು ರೂಪಾಯಿ 81.50 ದಾಟಿದೆ. ಶುಕ್ರವಾರ ಅದು 81.25 ಕ್ಕೆ ಕೊನೆಗೊಂಡಿತ್ತು. ಕಳೆದ ಗುರುವಾರದ ಇಳಿಕೆಯು ಫೆಬ್ರವರಿ 24 ರ ನಂತರ ರೂಪಾಯಿಯ ಅತಿದೊಡ್ಡ ಏಕದಿನ ಕುಸಿತವಾಗಿದೆ ಎಂಬುದು ಗಮನಾರ್ಹ.

ಯುಎಸ್​ ಫೆಡರಲ್ ರಿಸರ್ವ್ ಹೊಸದಾಗಿ ಬಿಗಿಯಾದ ವಿತ್ತೀಯ ನೀತಿ ನಿಯಂತ್ರಕ ಕ್ರಮಗಳನ್ನು ಜಾರಿ ಮಾಡಿದ್ದು ಕೂಡ ಡಾಲರ್​​ಗೆ ಬೆಂಬಲ ನೀಡಿದೆ. ಈ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಇತರ ಕರೆನ್ಸಿಗಳು ದುರ್ಬಲವಾಗುತ್ತಿವೆ.

ಬಡ್ಡಿದರ ಏರಿಕೆ ಚಕ್ರಗಳು ಮತ್ತು ಹಣದುಬ್ಬರದಿಂದ ರಕ್ಷಣೆ ಪಡೆಯುವ ಕಾರಣಗಳಿಂದ ಅತ್ಯಧಿಕ ಖರೀದಿಗೆ ಸಾಕ್ಷಿಯಾದ ಡಾಲರ್​ ಸೂಚ್ಯಂಕದಿಂದ ಆತಂಕ ಸೃಷ್ಟಿಯಾಗಿದೆ. ಹಣದುಬ್ಬರದ ವಿಚಾರದಲ್ಲಿ ಉತ್ತಮ ಸೂಚನೆಗಳು ಕಂಡುಬರುವವರೆಗೂ ರೂಪಾಯಿ ಇಳಿಕೆ ಮುಂದುವರಿಯಲಿದೆ. ಮುಂದಿನ ವಾರ ಆರ್​ಬಿಐ ನೀತಿ ಪ್ರಕಟಗೊಳ್ಳಲಿದ್ದು ರೂಪಾಯಿ ಕುಸಿತದ ತಡೆಗೆ ಕ್ರಮಗಳನ್ನು ನಿರೀಕ್ಷಿಸಲಾಗಿದೆ. ಆರ್​ಬಿಐ ನೀತಿಗಳ ಪ್ರಕಟಣೆಗೂ ಮುನ್ನ ರೂಪಾಯಿ 80.50-81.55 ಮಧ್ಯದಲ್ಲಿ ಚಲಿಸುತ್ತಿರಬಹುದು ಎಂದು ಎಲ್​ಕೆಪಿ ಸೆಕ್ಯೂರಿಟೀಸ್​​ನ ವಿಪಿ ರಿಸರ್ಚ್ ಅನಲಿಸ್ಟ್​ ಆಗಿರುವ ಜತಿನ್ ತ್ರಿವೇದಿ ಹೇಳಿದರು.

ಹಿಂದಿನ ಮಾಹಿತಿಯನ್ನು ನೋಡುವುದಾದರೆ- ಯುಎಸ್ ಫೆಡರಲ್ ರಿಸರ್ವ್ ರೆಪೋ ದರವನ್ನು 75 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ - ಇದು ಅದೇ ಪ್ರಮಾಣದಲ್ಲಿ ಸತತ ಮೂರನೇ ಏರಿಕೆಯಾಗಿದೆ. ಅಲ್ಲದೆ ಇದು ನಿರೀಕ್ಷಿತವೂ ಆಗಿದೆ. ಇದರರ್ಥ ಹೂಡಿಕೆದಾರರು ವಿತ್ತೀಯ ನೀತಿ ಬಿಗಿಗೊಳಿಸುವಿಕೆಯ ಕಾರಣದಿಂದ ಉತ್ತಮ ಮತ್ತು ಸ್ಥಿರ ಆದಾಯಕ್ಕಾಗಿ ಯುಎಸ್​ ಮಾರುಕಟ್ಟೆಗಳ ಕಡೆಗೆ ವಾಲುತ್ತಿದ್ದಾರೆ. ಇನ್ನಷ್ಟು ದರ ಏರಿಕೆಗಳು ಬರಲಿವೆ ಮತ್ತು ಈ ಏರಿಕೆಗಳು 2024ರವರೆಗೆ ಮುಂದುವರಿಯಲಿವೆ ಎಂದು ಫೆಡ್​ ಸೂಚನೆ ನೀಡಿದೆ.

ಏತನ್ಮಧ್ಯೆ, ಭಾರತದ ವಿದೇಶಿ ವಿನಿಮಯ ಮೀಸಲು ಎರಡು ವರ್ಷಗಳ ಕನಿಷ್ಠ ಮಟ್ಟದಲ್ಲಿದೆ. ಈ ವರ್ಷದ ಆರಂಭದಲ್ಲಿ ರಷ್ಯಾ-ಉಕ್ರೇನ್ ಮಧ್ಯೆ ಉದ್ವಿಗ್ನತೆಗಳು ಉಲ್ಬಣಗೊಂಡ ನಂತರ ವಿದೇಶಿ ಮೀಸಲು ಸುಮಾರು 80 ಶತಕೋಟಿ ಯುಎಸ್​ ಡಾಲರ್​​ಗಳಷ್ಟು ಕಡಿಮೆಯಾಗಿದೆ

ರೂಪಾಯಿ ಮೌಲ್ಯ ಇಳಿಕೆ ತಡೆಗಟ್ಟಲು ಮತ್ತು ಟ್ರೇಡ್ ಸೆಟ್ಲಮೆಂಟ್​​ಗಳಿಗಾಗಿ ಆರ್​ಬಿಐ ಮಾರುಕಟ್ಟೆಯಲ್ಲಿ ಮಧ್ಯ ಪ್ರವೇಶಿಸುತ್ತಿರುವುದರಿಂದ ಕಳೆದ ಕೆಲವು ತಿಂಗಳುಗಳಿಂದ ಭಾರತದ ವಿದೇಶಿ ವಿನಿಮಯ ಮೀಸಲು ನಿರಂತರವಾಗಿ ಬರಿದಾಗುತ್ತಿದೆ ಎನ್ನಲಾಗಿದೆ. ಈ ಕುಸಿತವು ರೂಪಾಯಿ ದುರ್ಬಲಗೊಳ್ಳಲು ಮತ್ತೊಂದು ಸಂಭವನೀಯ ಕಾರಣವಾಗಿದೆ.

ವೇಳಾಪಟ್ಟಿಯ ಪ್ರಕಾರ ಮುಂದಿನ ಹಣಕಾಸು ನೀತಿ ಸಭೆಯು ಸೆಪ್ಟೆಂಬರ್ 28-30ರ ಅವಧಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

ಇದನ್ನೂ ಓದಿ: ಎಪಿಎಂಪಿ ಮಾರುಕಟ್ಟೆಗಳಲ್ಲಿ ಮಧ್ಯಸ್ಥಗಾರರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.