ETV Bharat / bharat

ಮಾರುತಿ ಸುಜುಕಿಗೆ 200 ಕೋಟಿ ರೂ. ದಂಡ... ಕಾರಣ?

ಸ್ಪರ್ಧಾ ವಿರೋಧಿ ನೀತಿ ಅನುಸರಣೆ ಮಾಡಿದಕ್ಕಾಗಿ ಭಾರತದ ಮಾರುತಿ ಸುಜುಕಿ ಕಂಪನಿಗೆ 200 ಕೋಟಿ ರೂ. ದಂಡ ವಿಧಿಸಿ ಇದೀಗ ಆದೇಶ ಹೊರಡಿಸಲಾಗಿದೆ.

maruti suzuki
maruti suzuki
author img

By

Published : Aug 23, 2021, 7:08 PM IST

ಮುಂಬೈ: ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಗೆ ಇದೀಗ 200 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಭಾರತದ ಸ್ಪರ್ಧಾ ಆಯೋಗ(CCI) ಈ ಕ್ರಮ ಕೈಗೊಂಡಿದೆ.

ಗ್ರಾಹಕರಿಗೆ ನೀಡಬಹುದಾಗಿರುವ ರಿಯಾಯತಿ ಮೀರಿ ಕೆಲವೊಂದು ನೀತಿ ಕೈಗೊಂಡಿದ್ದು, ಸ್ಪರ್ಧಾ ವಿರೋಧಿ ನೀತಿ ಅನುಸರಣೆ ಮಾಡಿರುವ ಕಾರಣದಿಂದಾಗಿ ಈ ದಂಡ ವಿಧಿಸಲಾಗಿದೆ ಎಂದು ಸಿಸಿಐ ತಿಳಿಸಿದ್ದು, ಇದರಿಂದ ಮಾರುಕಟ್ಟೆಯಲ್ಲಿ ವಿವಿಧ ಕಂಪನಿ ಕಾರುಗಳ ಮಾರಾಟ ಕುಂಠಿತಗೊಳ್ಳಲು ಕಾರಣವಾಗಿದೆ ಎಂಬುದು ಖಚಿತಗೊಂಡಿದೆ.

  • Competition Commission of India imposed a penalty of Rs 200 crores upon Maruti Suzuki India Limited for indulging in anti-competitive conduct of Resale Price Maintenance in passenger vehicle segment by implementing discount control policy: Ministry of Corporate Affairs pic.twitter.com/8jDkJWjvw8

    — ANI (@ANI) August 23, 2021 " class="align-text-top noRightClick twitterSection" data=" ">

ತಕ್ಷಣದಿಂದಲೇ ತಾನು ತೆಗೆದುಕೊಂಡಿರುವ ನಿರ್ಧಾರ ಹಿಂಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಿಸಿಐ ತಿಳಿಸಿದೆ. 2019ರಿಂದಲೂ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಅನೇಕ ರಿಯಾಯತಿ ತೆಗೆದುಕೊಂಡಿದ್ದು, ಇದರಿಂದ ಇತರ ಡೀಲರ್​ಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂಬುದು ಇದೀಗ ಖಚಿತಗೊಂಡಿದೆ.

ಹೀಗಾಗಿ $27 ಮಿಲಿಯನ್ ಡಾಲರ್​ ದಂಡ ವಿಧಿಸಲಾಗಿದೆ. ವಿಶೇಷವೆಂದರೆ ವರಮಹಾಲಕ್ಷ್ಮಿ ದಿನದಂದೇ ಮಾರುತಿ ಸುಜುಕಿಯ 1,400 ಕಾರುಗಳು ಕರ್ನಾಟಕದಲ್ಲಿ ಮಾರಾಟವಾಗಿದ್ದವು.

ಇದನ್ನೂ ಓದಿರಿ: ಕೇವಲ 6 ಗಂಟೆಯಲ್ಲಿ ಮುರಿದು ಬಿತ್ತು ಪ್ರೇಮಿಗಳ​ ಮದುವೆ​; ಪತ್ನಿಯ ಹಣೆಗಿಟ್ಟ ಸಿಂಧೂರ ಅಳಿಸಿ ಹಾಕಿದ ಗಂಡ!

ಕಳೆದ ಕೆಲ ದಿನಗಳ ಹಿಂದೆ ಫ್ಲಿಪ್​ಕಾರ್ಟ್, ಹಾಗೂ ಅಮೆಜಾನ್​ಗೂ ಭಾರತದ ಸ್ಪರ್ಧಾ ಆಯೋಗ (ಸಿಸಿಐ)ದಿಂದ ಪ್ರಾಥಮಿಕ ವಿಚಾರಣೆಗೆ ಆದೇಶ ನೀಡಲಾಗಿದೆ. ಸ್ಪರ್ಧಾ ವಿರೋಧಿ ಪದ್ಧತಿ ಅನುಸರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆದೇಶ ನೀಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.