ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಸರ್ಕಾರವು 15,477 ಕೋಟಿ ರೂಪಾಯಿ ವೆಚ್ಚದಲ್ಲಿ 2,088 ಕಿ.ಮೀ ಉದ್ದದ ರಸ್ತೆಗಳನ್ನು ಚೀನಾದ ಗಡಿ ಪ್ರದೇಶಗಳಲ್ಲಿ ನಿರ್ಮಿಸಿದೆ ಎಂದು ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಒದಗಿಸಿದ ವಿವರಗಳ ಪ್ರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಡಿಯಲ್ಲಿನ ಪ್ರದೇಶಗಳಲ್ಲಿ ಒಳಗೊಂಡಿರುವ ಭಾಗದಲ್ಲಿ 3,595 ಕಿಮೀ ಗಡಿ ರಸ್ತೆಗಳನ್ನು ನಿರ್ಮಿಸಲು ಸರ್ಕಾರವು 20,767 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ವಿವರಿಸಲಾಗಿದೆ.
15,477.06 ಕೋಟಿ ವೆಚ್ಚದಲ್ಲಿ ಚೀನಾ ಗಡಿಯಲ್ಲಿ ಸರ್ಕಾರ 2,088.57 ಕಿಮೀ ರಸ್ತೆ ನಿರ್ಮಿಸಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಹೇಳಿದ್ದಾರೆ. ಅವರು ನೀಡಿದ ವಿವರಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನದ ಗಡಿಯಲ್ಲಿ 1,336.09 ಕಿಮೀ ರಸ್ತೆ ನಿರ್ಮಿಸಲು 4,242.38 ಕೋಟಿ ರೂ., ಮ್ಯಾನ್ಮಾರ್ ಗಡಿಯಲ್ಲಿ 151.15 ಕಿ.ಮೀ ರಸ್ತೆ ನಿರ್ಮಿಸಲು 882.52 ಕೋಟಿ ರೂ., 165.45 ಕೋಟಿ ವೆಚ್ಚದಲ್ಲಿ ಬಾಂಗ್ಲಾದೇಶದ ಗಡಿಯಲ್ಲಿ 19.25 ಕಿಮೀ ರಸ್ತೆ ನಿರ್ಮಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.
ಪೂರ್ವ ಲಡಾಖ್ ಬಿಕ್ಕಟ್ಟಿನ ನಂತರ ಚೀನಾದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಗಮನ ಹರಿಸಲಾಗಿದೆ. ಮೇ 5, 2020 ರಂದು ಪ್ಯಾಂಗಾಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಭುಗಿಲೆದ್ದಿತ್ತು.
ಇದನ್ನೂ ಓದಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಅವಧಿ ವಿಸ್ತರಣೆ ಇಲ್ಲ: ನೀವು ತಿಳಿದುಕೊಳ್ಳಲೇ ಬೇಕಾದದ್ದುಇಲ್ಲಿದೆ!