ನವ ದೆಹಲಿ: ತಲೆಮರೆಸಿಕೊಂಡಿರುವ ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿಯ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ ನಗದು ಬಹುಮಾನ ನೀಡುವುದಾಗಿ ಕೇಂದ್ರ ತನಿಖಾ ದಳ(ಸಿಬಿಐ) ಘೋಷಿಸಿದೆ.
ಅಹಮದಾಬಾದ್ನ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಕರ್ಣನಿ ಎಂಬ ಅಧಿಕಾರಿಗೆ ಹುಡುಕಾಟ ನಡೆಸಲಾಗುತ್ತಿದೆ. 30 ಲಕ್ಷ ರೂ ಲಂಚ ಪಡೆದ ಪ್ರಕರಣದಲ್ಲಿ ಸಿಬಿಐ ಇವರ ಮೇಲೆ ದಾಳಿ ನಡೆಸಿದೆ. ಅಧಿಕಾರಿಯ ವಿರುದ್ಧ ಅರೆಸ್ಟ್ ವಾರೆಂಟ್ ಕೂಡ ಜಾರಿ ಮಾಡಲಾಗಿದೆ. ಆರೋಪಿಯ ಮನೆ ಸೇರಿದಂತೆ ಸಂಬಂಧಿಕರ ನಿಸವಾಸಗಳ ಮೇಲೆ ನ.19 ಮತ್ತು 21ರಂದು ದಾಳಿ ನಡೆದಿತ್ತು. ಈ ವೇಳೆ ಪ್ರಮುಖ ದಾಖಲೆಗಳೂ ಸೇರಿದಂತೆ 41,96,743 ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಅಧಿಕಾರಿ ತಲೆಮರೆಸಿಕೊಂಡಿದ್ದಾರೆ.
ಅಧಿಕಾರಿಯ ಕುರಿತು ಸಾರ್ವಜನಿಕರು ಯಾವುದೇ ಸುಳಿವು ನೀಡದರೂ ಅವರಿಗೆ 1 ಲಕ್ಷ ನಗದು ಬಹುಮಾನ ನೀಡುವುದಾಗಿ ಸಿಬಿಐ ಘೋಷಿಸಿದೆ. ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: ಲೋಕಾಯುಕ್ತರಿಂದ ಭ್ರಷ್ಟರ ಬೇಟೆ: ಬಲೆಗೆ ಬಿದ್ದ ವಿಜಯಪುರ ಎಪಿಎಂಸಿ ಅಧಿಕಾರಿ