ETV Bharat / bharat

ದೇವಾಲಯಕ್ಕೆ ಹೊರಟ ಆಟೋಗೆ ಲಾರಿ ಡಿಕ್ಕಿ: ನದಿಗೆ ಬಿದ್ದು ಬಾಲಕಿ ಸಾವು, ಐವರು ಕಣ್ಮರೆ - ಅಪಘಾತದಲ್ಲಿ ನದಿಗೆ ಬಿದ್ದ ಐವರು ನಾಪತ್ತೆ

ದೇವಾಲಯಕ್ಕೆ ಹೊರಟಿದ್ದ ಆಟೋ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐವರು ನದಿಗೆ ಬಿದ್ದು ಕಣ್ಣರೆಯಾಗಿದ್ದಾರೆ. ಅಲ್ಲದೆ ರಕ್ಷಿಸಲ್ಪಟ್ಟ 7 ಮಂದಿಯಲ್ಲಿ ಬಾಲಕಿಯೋರ್ವಳು ಅಸುನೀಗಿದ್ದಾಳೆ.

Road accident near nellore
ನೆಲ್ಲೂರು ಆಟೋ ಅಪಘಾತ
author img

By

Published : Dec 10, 2021, 4:55 AM IST

ನೆಲ್ಲೂರು : ಸೇತುವೆ ಮೇಲೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಆಟೋ ರಿಕ್ಷಾ ನದಿಗೆ ಬಿದ್ದಿದ್ದು, ಬಾಲಕಿ ಸಾವನ್ನಪ್ಪಿ, ಇತರ ಐವರು ಕಣ್ಮರೆಯಾಗಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಗುರುವಾರ ರಾತ್ರಿ ಘಟನೆ ಸಂಭವಿಸಿದೆ.

ಸುಮಾರು 12 ಮಂದಿ ಆತ್ಮಕೂರ್ ಪಟ್ಟಣದಿಂದ ಸಮೀಪದ ಶಿವ ದೇವಾಲಯಕ್ಕೆ ವಿಶೇಷ ಪೂಜೆಗೆಂದು ಆಟೋದಲ್ಲಿ ತೆರಳುತ್ತಿದ್ದರು. ರಾತ್ರಿ 9.30ರ ಸುಮಾರಿಗೆ ನೆಲ್ಲೂರಿನ ಸಂಗೆಮ್ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ನೀರಿನಲ್ಲಿ ಮುಳುಗಿದ್ದ 12 ಜನರಲ್ಲಿ 7 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಅವರಲ್ಲಿ ಒಬ್ಬ ಬಾಲಕಿ ಮೃತಪಟ್ಟಿದ್ದಾಳೆ. ಆಟೋದಲ್ಲಿದ್ದ ಉಳಿದ ಐವರು ನಾಪತ್ತೆಯಾಗಿದ್ದಾರೆ. ರಕ್ಷಿಸಲ್ಪಟ್ಟ 6 ಮಂದಿಯನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಗ್ರಾಮಸ್ಥರು ಏಳು ಜನರನ್ನು ರಕ್ಷಿಸಿದ್ದರು. ಇತರರು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ. ರಾತ್ರಿಯಾಗಿರುವುದರಿಂದ ಶೋಧ ಕಾರ್ಯಾಚರಣೆಗೆ ಅಡಚಣೆಯುಂಟಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: CCTV Video: ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.