ETV Bharat / bharat

ಡಿಕ್ಕಿ ಹೊಡೆದು ಆಟೋ ಮೇಲೆ ಉರುಳಿ ಬಿದ್ದ ಟ್ರಕ್​: ಇಬ್ಬರು ಮಹಿಳೆಯರು ಸೇರಿ 7 ಜನರ ದುರ್ಮರಣ - ಆಟೋ ಮೇಲೆ ಉರುಳಿ ಬಿದ್ದ ಟ್ರಕ್

ಹರಿಯಾಣದಲ್ಲಿ ನುಹ್‌ ಜಿಲ್ಲೆಯಲ್ಲಿ ಟ್ರಕ್ ಮತ್ತು ಆಟೋ ಡಿಕ್ಕಿ ಸಂಭವಿಸಿ ಏಳು ಜನರು ದುರ್ಮರಣ ಹೊಂದಿದ್ದಾರೆ.

road-accident-in-nuh-nagina-panhana-road-truck-auto-collision-madhiaki-village
ಆಟೋ ಮೇಲೆ ಉರುಳಿ ಬಿದ್ದ ಟ್ರಕ್​: ಇಬ್ಬರು ಮಹಿಳೆಯರು ಸೇರಿ 7 ಜನರ ದುರ್ಮರಣ
author img

By

Published : Jul 22, 2022, 9:46 PM IST

ನುಹ್ (ಹರಿಯಾಣ): ಹರಿಯಾಣದಲ್ಲಿ ಇಂದು ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೇ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನುಹ್‌ ಜಿಲ್ಲೆಯ ಮಧಿಯಾಕಿ ಗ್ರಾಮದ ಬಳಿ ಟ್ರಕ್ ಮತ್ತು ಆಟೋ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಜರುಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ರಸ್ತೆಯ ಬದಿಯ ಹೊಂಡಕ್ಕೆ ಬಿದ್ದಿವೆ. ಅಲ್ಲದೇ, ಆಟೋ ಮೇಲೆಯೇ ಟ್ರಕ್​ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿವೆ.

ಟ್ರಕ್​ ಉರುಳಿ ಬಿದ್ದಿರುವುದಿಂದ ಆಟೋ ನಜ್ಜು - ಗುಜ್ಜಾಗಿದೆ. ಹೀಗಾಗಿ ಕ್ರೇನ್​ ಮತ್ತು ಜೆಸಿಬಿಗಳ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಗಿದೆ. ನಾಲ್ವರು ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಘಟನೆಯ ಸುದ್ದಿ ತಿಳಿದ ಸುತ್ತ - ಮುತ್ತಲಿನ ಗ್ರಾಮಗಳ ಸಾಕಷ್ಟು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಇದರಿಂದ ಹೊಡಲ್ - ಪುನ್ಹಾನ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ, ಟ್ರಕ್ ಚಾಲಕನ ಪತ್ತೆಯಾಗಿ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಅಡ್ಡ ಬಂದ ನಾಯಿ: ಬೈಕಿನಿಂದ ಬಿದ್ದು ಇಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.