ETV Bharat / bharat

ಪ.ಬಂಗಾಳ ಚುನಾವಣೆ: ಬಿಜೆಪಿಗೆ ಕಡಿವಾಣ ಹಾಕಲು ಮಮತಾಗೆ ತೇಜಸ್ವಿ ಬೆಂಬಲ!

ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಇದೀಗ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ಗೆ ಬೆಂಬಲ ನೀಡಲು ಮುಂದಾಗಿದ್ದು, ಘೋಷಣೆ ಹೊರಹಾಕಿದ್ದಾರೆ.

RJD leader Tejashwi Yadav
RJD leader Tejashwi Yadav
author img

By

Published : Mar 1, 2021, 8:14 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್​ಗೆ ಟಾಂಗ್​ ನೀಡಲು ಇದೀಗ ಭಾರತೀಯ ಜನತಾ ಪಾರ್ಟಿ ಭರ್ಜರಿಯಾಗಿ ತಯಾರಿ ನಡೆಸಿದೆ.

ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯಲಿದ್ದು, ಅದಕ್ಕಾಗಿ ತೃಣಮೂಲ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ತಯಾರಿ ನಡೆಸಿವೆ. ಇದರ ಮಧ್ಯೆ ಇದೀಗ ಮಮತಾ ಬ್ಯಾನರ್ಜಿ ಭೇಟಿ ಮಾಡಿರುವ ತೇಜಸ್ವಿ ಯಾದವ್​ ಕುತೂಹಲ ಮೂಡಿಸಿದ್ದಾರೆ.

  • Kolkata: RJD leader Tejashwi Yadav met West Bengal CM and TMC leader Mamata Banerjee today

    It is Lalu Ji's decision to provide full support to Mamata Ji. Our first priority is to stop BJP from coming to power in Bengal, said Yadav pic.twitter.com/c2pyKV3HUX

    — ANI (@ANI) March 1, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಪಶ್ಚಿಮ ಬಂಗಾಳ ಫೈಟ್​: ಬಿಜೆಪಿ ಸೇರಿದ ಫೇಮಸ್ ನಟಿ ಶ್ರಬಂತಿ ಚಟರ್ಜಿ!

ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್​ಗೆ ಬೆಂಬಲ ಘೋಷಣೆ ಮಾಡುವುದಾಗಿ ಅವರು ಹೇಳಿಕೊಂಡಿದ್ದು, ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ನಡೆಸಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಮಮತಾಜೀ ಅವರಿಗೆ ಬೆಂಬಲ ನೀಡುವುದು ಲಾಲೂಜೀ ಅವರ ನಿರ್ಧಾರವಾಗಿದ್ದು, ಇದೇ ಕಾರಣಕ್ಕಾಗಿ ತಾವು ಟಿಎಂಸಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಆರ್​ಜೆಡಡಿ ಪಕ್ಷದಿಂದ ಬೆಂಬಲ ಸಿಗುತ್ತಿದ್ದಂತೆ ಸಂತೋಷಗೊಂಡಿರುವ ಮಮತಾ ಬ್ಯಾನರ್ಜಿ ಬಿಜೆಪಿ ಹೊರಹಾಕಲು ಎರಡು ಪಕ್ಷಗಳು ಒಟ್ಟಿಗೆ ಸೇರಿ ಹೋರಾಟ ನಡೆಸಲಿವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.