ETV Bharat / bharat

ಹೊಸ ಸಂಸತ್ ಭವನದ ಜೊತೆ ಶವಪೆಟ್ಟಿಯ ಚಿತ್ರ ಹೋಲಿಕೆ ಮಾಡಿದ ಆರ್​ಜೆಡಿ

ಇಂದು ಉದ್ಘಾಟನೆಯಾದ ಹೊಸ ಸಂಸತ್ ಭವನದ ಕಟ್ಟಡವನ್ನು ಆರ್​ಜೆಡಿ ಶವಪೆಟ್ಟಿಗೆಗೆ ಹೋಲಿಕೆ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

RJD makes coffin jibe at new Parliament building

author img

By

Published : May 28, 2023, 3:52 PM IST

ನವದೆಹಲಿ : ನೂತನ ಸಂಸತ್ ಭವನವು ಶವಪೆಟ್ಟಿಗೆಯ ರೀತಿಯಲ್ಲಿ ಕಾಣಿಸುತ್ತದೆ ಎಂದು ರಾಷ್ಟ್ರೀಯ ಜನತಾ ದಳ ಅವಹೇಳನ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರ್​ಜೆಡಿ, ಶವಪೆಟ್ಟಿಗೆ ಹಾಗೂ ನೂತನ ಸಂಸತ್ ಭವನದ ಚಿತ್ರಗಳನ್ನು ಪೋಸ್ಟ್​ ಮಾಡಿ, "ಇದು ಏನು?" (ಯೆ ಕ್ಯಾ ಹೈ?) ಎಂದು ಹಿಂದಿಯಲ್ಲಿ ಬರೆದಿದೆ. ಈ ಪೋಸ್ಟ್​ಗೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಹೊಸ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರ್‌ಜೆಡಿ ನಾಯಕ ಶಕ್ತಿ ಯಾದವ್, ಪ್ರಧಾನಿ ಮೋದಿ ಪ್ರಜಾಪ್ರಭುತ್ವವನ್ನು ಸಮಾಧಿ ಮಾಡಿದ್ದಾರೆ, ಮೋದಿ ಪ್ರಜಾಪ್ರಭುತ್ವದ ಸಾವನ್ನು ಖಚಿತಪಡಿಸಿದ್ದಾರೆ ಎಂಬುದನ್ನು ಸೂಚಿಸಲು ಶವಪೆಟ್ಟಿಗೆಯ ಚಿತ್ರವನ್ನು ಪೋಸ್ಟ್ ಮಾಡಲಾಗಿದೆ ಎಂದು ಹೇಳಿದರು. ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಪಕ್ಷವು ಮೊದಲೇ ಘೋಷಿಸಿತ್ತು.

ಇದು ಅತ್ಯಂತ ದುರದೃಷ್ಟಕರ. ಇಂದು ಅವರು ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸುತ್ತಿದ್ದಾರೆ. ಅವರು ಹಳೆಯ ಸಂಸತ್ತನ್ನು 'ಶೂನ್ಯ'ಕ್ಕೆ ಹೋಲಿಸಿದ್ದರಾ? ನಾವು ಮೊದಲು ಶೂನ್ಯದಲ್ಲಿ ಕುಳಿತಿದ್ದೆವಾ? ಎಂದು ಬಿಜೆಪಿ ಮುಖಂಡ ದುಷ್ಯಂತ್ ಗೌತಮ್ ಪ್ರಶ್ನಿಸಿದ್ದಾರೆ. ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಝಾ ಮಾತನಾಡಿ, ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಮಾರ್ಪಡಿಸುವ ಅಗತ್ಯವಿದೆ ಎಂದಿದ್ದರು.

ಇಂದು ಮುಂಜಾನೆ ಪ್ರಧಾನಿ ಮೋದಿ ಅವರು ಹೊಸ ಕಟ್ಟಡದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕೆಲವು ಕಾರ್ಮಿಕರನ್ನು ಸನ್ಮಾನಿಸಿದರು. ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿದರು. ಅಲ್ಲದೆ ಪ್ರಧಾನಿ ಮೋದಿ ಅವರು ಹೊಸ ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ಪವಿತ್ರ 'ಸೆಂಗೊಲ್' ಅನ್ನು ಸ್ಥಾಪಿಸಿದರು. ಸಮಾರಂಭದಲ್ಲಿ ಮೋದಿ ಅವರು ಸೆಂಗೋಲ್‌ಗೆ ಗೌರವ ಸೂಚಕವಾಗಿ ಸಾಷ್ಟಾಂಗ ನಮಸ್ಕಾರ ಮಾಡಿದರು.

ಹೊಸದಾಗಿ ನಿರ್ಮಿಸಲಾದ ಸಂಸತ್ತಿನ ಕಟ್ಟಡವು ಭಾರತದ ಭವ್ಯ ಪ್ರಜಾಪ್ರಭುತ್ವದ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಮತ್ತಷ್ಟು ಉನ್ನತಿಗೇರಿಸಲು ಕೆಲಸ ಮಾಡಲಿದೆ. ಇದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಸದಸ್ಯರು ತಮ್ಮ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡಲಿದೆ. ಲೋಕಸಭೆಯಲ್ಲಿ 888 ಸದಸ್ಯರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಹೊಸ ಸಂಸತ್ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಸಂಸತ್ತಿನ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಲು ಅವಕಾಶವಿದೆ.

ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನ ನೂತನ ಕಟ್ಟಡದಲ್ಲಿ ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 384 ಸದಸ್ಯರ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಉಭಯ ಸದನಗಳ ಜಂಟಿ ಅಧಿವೇಶನ ಲೋಕಸಭೆಯಲ್ಲಿ ನಡೆಯಲಿದೆ. ದೆಹಲಿಯ ಹೃದಯಭಾಗದಲ್ಲಿರುವ ವಿಶಾಲವಾದ ಹೊಸ, ತ್ರಿಕೋನ ಆಕಾರದ ಸಂಸತ್ ಭವನದ ಸಂಕೀರ್ಣವು ದೇಶದ ಲೋಕಸಭೆ ಮತ್ತು ರಾಜ್ಯಸಭೆಯ ಸದನಗಳನ್ನು ಹೊಂದಿದೆ. ಹೊಸ ಕಟ್ಟಡವು ಬ್ರಿಟಿಷ್ ಯುಗದಲ್ಲಿ 1927 ರಲ್ಲಿ ನಿರ್ಮಿಸಲಾದ ಹಳೆಯ ವೃತ್ತಾಕಾರದ ಸಂಸತ್ತಿನ ಕಟ್ಟಡದ ಪಕ್ಕದಲ್ಲಿದೆ. ಹಳೆಯ ಕಟ್ಟಡವು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತನೆಯಾಗಲಿದೆ.

ಇದನ್ನೂ ಓದಿ : ಹೊಸ ಸಂಸತ್‌ ಭವನ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸಿದೆ: ಧಾರ್ಮಿಕ ಪ್ರತಿನಿಧಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.