ಹೋಶಿಯಾರ್‌ಪುರ (ಪಂಜಾಬ್): ಪಂಜಾಬ್‌ನ ಗರ್‌ಡಿವಾಲಾ ಬಳಿಯ ಬೆಹ್ರಾಂಪುರ ಗ್ರಾಮದಲ್ಲಿ ಆರು ವರ್ಷದ ಬಾಲಕ ರಿತಿಕ್ ರೋಷನ್ನನ್ನು 300 ಅಡಿ ಆಳದ ಬೋರ್‌ವೆಲ್‌ನಿಂದ ರಕ್ಷಿಸಲಾಗಿದೆ. ಹುಡುಗ ಮೈದಾನದಲ್ಲಿ ಆಟವಾಡುತ್ತಿದ್ದಾಗ ತೆರೆದ ಬಾವಿ ಬಳಿ ಬಂದಿದ್ದಾನೆ. ಈ ವೇಳೆ ನಾಯಿಗಳು ಅಟ್ಟಾಡಿಸಿಕೊಂಡು ಬಂದಿವೆ. ಈ ವೇಳೆ ಮೇಲಿನ ಭಾಗವನ್ನು ಸೆಣಬಿನ ಚೀಲದಿಂದ ಮುಚ್ಚಿದ್ದ ಕೊಳವೇ ಬಾವಿಯ ಬಳಿ ಬಂದಾಗ ಬಾಲಕ ಕುಸಿದು ಬಾವಿ ಒಳಗೆ ಬಿದ್ದಿದ್ದಾನೆ. ಬೋರ್‌ವೆಲ್ 300 ಅಡಿ ಆಳವಿದ್ದು, ಬಾಲಕ 100 ಅಡಿ ಆಳದಲ್ಲಿ ಸಿಲುಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಜಿಲ್ಲಾಧಿಕಾರಿ ಸಂದೀಪ್ ಹನ್ಸ್ ಸೇರಿದಂತೆ ಜಿಲ್ಲಾಡಳಿತದ ತಂಡಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದವು. ಬಾಲಕನ ಸ್ಥಿತಿಯನ್ನು ಗಮನಿಸಲು ಬೋರ್‌ವೆಲ್‌ನೊಳಗೆ ಕ್ಯಾಮೆರಾವನ್ನು ಹಾಕಲಾಗಿತ್ತು. ಕೊನೆಗೂ ಯಶಸ್ವಿಯಾಗಿ ಆತನನ್ನು ಹೊರ ತೆಗೆಯಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಸೇನೆ 7-8 ಗಂಟೆಗಳ ಕಾರ್ಯಾಚರಣೆ ನಡೆಸಿದೆಯಾದರೂ ಬಾಲಕ ಕೊನೆಯುಸಿರೆಳೆದಿದ್ದಾನೆ.
ಬಾಲಕನ್ನು ಉಪಚರಿಸಿದ ವೈದ್ಯರು ಪ್ರತಿಕ್ರಿಯಿಸಿ, ಬಾಲಕನನ್ನು ನಮ್ಮ ಬಳಿಗೆ ತರುವಾಗ ಯಾವುದೇ ಚಲನ ವಲನ ಇರಲಿಲ್ಲ. ಬಳಿಕ ಆತನನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ, ನಾವು ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವನ ದೇಹದ ಉಷ್ಣತೆಯನ್ನು ಗಮನಿಸಿದರೆ ಆತ ರಕ್ಷಣೆಗೆ ಒಳಗಾಗುವ ಮೊದಲು ಅಂದರೆ ಮೂವತ್ತು ನಿಮಿಷಕ್ಕೂ ಮುಂಚೆ ಸಾವನ್ನಪ್ಪಿರಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿ ಬಾಯಿಗೆ ತುತ್ತಿಟ್ಟು ಅವರ ಎಂಜಲು ಸೇವಿಸಿದ ಶಾಸಕ ಜಮೀರ್ ಅಹ್ಮದ್