ETV Bharat / bharat

ರೈತರಿಗೆ ಸಿಗದ ಗೌರವ ನನಗೇಕೆ?: ರಾಷ್ಟ್ರಪತಿ ಪದಕ ವಾಪಸ್​ ಮಾಡಿದ ಧಲಿವಾಲ್​

author img

By

Published : Dec 6, 2020, 12:09 PM IST

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್ ರಾಯ್ ಸಿಂಗ್ ಧಲಿವಾಲ್ ರಾಷ್ಟ್ರಪತಿ ಪದಕವನ್ನು ಹಿಂದಿರುಗಿಸಿದರು.

ರಾಷ್ಟ್ರಪತಿ ಪದಕ ಹಿಂದಿರುಗಿಸಿದ ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್

ಪಟಿಯಾಲ: ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಗೃಹರಕ್ಷಕ ದಳದ ನಿವೃತ್ತ ಕಮಾಂಡೆಂಟ್ ರಾಯ್ ಸಿಂಗ್ ಧಲಿವಾಲ್ ಬೆಂಬಲ ವ್ಯಕ್ತಪಡಿಸಿದ್ದು ತಮಗೆ ನೀಡಿದ್ದ ರಾಷ್ಟ್ರಪತಿ ಪದಕವನ್ನು ಹಿಂದಿರುಗಿಸಿದರು.

ರಾಷ್ಟ್ರಕ್ಕಾಗಿ ಮಾಡಿದ ಉತ್ತಮ ಸೇವೆಗಾಗಿ ನನಗೆ ಪ್ರಶಸ್ತಿ ನೀಡಲಾಯಿತು. ಆದರೆ, ನಾನು ಒಬ್ಬ ರೈತನ ಮಗ. ಇಂದು ರೈತರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಬದಲು, ರೈತರು ತಮ್ಮ ಹಕ್ಕನ್ನು ಕೋರಲು ರಸ್ತೆಗಳಲ್ಲಿ ಕುಳಿತುಕೊಳ್ಳಬೇಕಾಗಿದೆ. ರೈತರ ಈ ಸ್ಥಿತಿಯನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ಅದಕ್ಕಾಗಿಯೇ ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಲೆಂದು ನಾನು ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಧಲಿವಾಲ್ ಹೇಳಿದರು.

ಇದನ್ನೂ ಓದಿ:ಸರ್ದಾರ್‌ಗಳಿಗೆ ಸಿಂಗರ್‌ ಸಹಾಯ.. ಪ್ರತಿಭಟನೆಗೆ ನಟ ದಿಲ್ಜಿತ್ ಸಾಥ್​.. ಅನ್ನದಾತರಿಗಾಗಿ ₹1 ಕೋಟಿ ದೇಣಿಗೆ..

ವಿಶೇಷವೆಂದರೆ, ಡಿಸೆಂಬರ್ 3 ರಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಪಿತಾಮಹ ಪ್ರಕಾಶ್ ಸಿಂಗ್ ಬಾದಲ್ ಅವರು ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರತಿಭಟನೆಯಲ್ಲಿ ಹಿಂದಿರುಗಿಸಿದ್ದರು.

ನಂತರ ಡಿಸೆಂಬರ್ 4 ರಂದು ಶಿರೋಮಣಿ ಅಕಾಲಿ ದಳ (ಪ್ರಜಾಪ್ರಭುತ್ವ) ಮುಖ್ಯಸ್ಥ ಮತ್ತು ಬಂಡಾಯ ರಾಜ್ಯಸಭಾ ಸದಸ್ಯ ಸುಖದೇವ್ ಸಿಂಗ್ ಧಿಂಡ್ಸಾ ಅವರು ಪ್ರತಿಭಟನಾ ನಿರತ ರೈತರಿಗೆ ಬೆಂಬಲ ವ್ಯಕ್ತಪಡಿಸಲು ಪದ್ಮಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಅದೇ ದಿನ, ಪಂಜಾಬ್​​ನ ಭಾರತೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿರ್ಮೌರ್ ಶೈರ್ ಡಾ.ಮೋಹನ್ಜಿತ್, ಖ್ಯಾತ ಚಿಂತಕ ಡಾ.ಜಸ್ವಿಂದರ್ ಸಿಂಗ್ ಮತ್ತು ಪಂಜಾಬಿ ನಾಟಕಕಾರ ಮತ್ತು ಪಂಜಾಬಿ ಟ್ರಿಬ್ಯೂನ್ ಸಂಪಾದಕ ಸ್ವರಾಜ್ಬೀರ್ ಸಹ ರೈತರಿಗೆ ಬೆಂಬಲವನ್ನು ಸೂಚಿಸಲು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.